One N Only Exclusive Cine Portal

ದೆವ್ವಭೂತ ನಂಬದ ನಿರ್ದೇಶಕರ ಹಾರರ್ ಚಿತ್ರ ……ಜಯಮಹಲ್:

Image may contain: 2 people, closeup and text
ದೆವ್ವ, ಭೂತ, ಅತ್ಮಗಳೆಲ್ಲ ಸುಳ್ಳೇ ಸುಳ್ಳೆಂಬ ಮನಸ್ಥಿತಿಯವರು ಹಾರರ್ ಸಿನಿಮಾ ಮಾಡುತ್ತಾರೆಂದರೆ ಅದರ ಬಗ್ಗೆ ಒಂದು ಹಿಡಿ ಹೆಚ್ಚೇ ಕುತೂಹಲ ಹುಟ್ಟಿಕೊಳ್ಳೋದು ಸಹಜ. ಸದ್ಯ ಜಯಮಹಲ್ ಎಂಬ ಬಿಡುಗಡೆಗೆ ಸಜ್ಜಾಗಿರೋ ಚಿತ್ರವೊಂದರ ಮೂಲಕ ಅಂಥಾದ್ದೊಂದು ಅಚ್ಚರಿಗೆ ಕಾರಣವಾಗಿರುವವರು ಗೀತಸಾಹಿತಿ ಹೃದಯಶಿವ!

ನೀನಾಸಂ ಅಶ್ವತ್ಥ್ ಮತ್ತು ಶುಭಾ ಪೂಂಜಾ ಮುಖ್ಯ ಭೂಮಿಕೆಯಲ್ಲಿರುವ ಜಯಮಹಲ್ ಚಿತ್ರವನ್ನು ಹೃದಯಶಿವ ನಿರ್ದೇಶನ ಮಾಡಿದ್ದಾರೆ. ಆದರೆ ಈ ಚಿತ್ರ ಹಾರರ್ ಜಾನರಿನದ್ದೆಂಬ ವಿಚಾರವೇ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅಚ್ಚರಿಯ ಸಂಗತಿ. ಯಾಕೆಂದರೆ, ಹೃದಯಶಿವ ಇಂತಾ ನಂಬಿಕೆಗಳೆಲ್ಲವನ್ನು ಅಲ್ಲಗಳೆಯುವ ಮನಸ್ಥಿತಿಯವರು. ಆದ್ದರಿಂದಲೇ ಜಯಮಹಲ್ ಚಿತ್ರ ಹಾರರ್ ಆದರೂ ಕೂಡಾ ಈ ಚಿತ್ರದಲ್ಲಿ ಮಾಮೂಲಿ ದೆವ್ವ ಭೂತಗಳಿರಲಿಕ್ಕಿಲ್ಲವೇನೋ ಎಂಬಂಥಾ ವಿಚಾರ ಎಲ್ಲೆಡೆ ಚರ್ಚೆಗೀಡಾಗುತ್ತಿದೆ. ಅದುವೇ ಈ ಚಿತ್ರದೆಡೆಗಿನ ನಿರೀಕ್ಷಿಯನ್ನೂ ಇಮ್ಮಡಿಸಿದೆ.

ಅಂದಹಾಗೆ, ಮುಂಗಾರು ಮಳೆ ಚಿತ್ರಕ್ಕೆ ನವಿರಾದೆರಡು ಹಾಡು ಬರೆಯುವ ಮೂಲಕ ಗೀತ ಸಾಹಿತಿಯಾಗಿ ಖ್ಯಾತರಾದವರು ಹೃದಯಶಿವ. ಅದೇ ಚಿತ್ರದಲ್ಲಿ ವಿಲನ್ ರೋಲ್ ಮಾಡೋ ಮೂಲಕ ಮನೆ ಮಾತಾದವರು ನೀನಾಸಂ ಅಶ್ವತ್ಥ್. ಜಯಮಹಲ್ ಚಿತ್ರದಲ್ಲಿ ಇವರಿಬ್ಬರ ಸಂಗಮವಾಗಿದೆ. ಇದುವರೆಗೂ ನಾನಾ ಪಾತ್ರಗಳನ್ನು ಮಾಡಿರುವ ಅಶ್ವತ್ಥ್ ಇಲ್ಲಿ ಪಕ್ಕಾ ಸವಾಲಿನಂಥಾದ್ದೊಮದು ಪಾತ್ರ ಮಾಡಿದ್ದಾರಂತೆ. ಇಲ್ಲಿ ಅವರದ್ದು ಸೈಕಾಲಾಜಿಸ್ಟ್ ಕಂ ಪ್ರೇತ ಬಾಧೆಗೀಡಾಗೋ ಕ್ಯಾರೆಕ್ಟರ್. ಅದು ಯಾವ ಟೈಪಿನ ದೆವ್ವ ಎಂಬುದನ್ನು ಮಾತ್ರ ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಇನ್ನು ಶುಭಾ ಪೂಂಜಾ ಕೂಡಾ ಇಲ್ಲಿ ಡಿಫರೆಂಟಾದ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಶಿವ ಸ್ವರೂಪ್ ಲಾಂಛನದಲ್ಲಿ ಈ ಚಿತ್ರವನ್ನು ಎಂ ರೇಣುಕಾ ಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಹೃದಯ ಶಿವ ಕತೆ ಬರೆಯುತ್ತಲೇ ಈ ಪಾತ್ರಕ್ಕೆ ನೀನಾಸಂ ಅಶ್ವತ್ಥ್ ಅವರನ್ನು ಫಿಕ್ಸ್ ಮಾಡಿಕೊಂಡಿದ್ದರಂತೆ. ಈ ಬಗ್ಗೆ ಅಶ್ವತ್ಥ್ ಅವರನ್ನು ನಿರ್ಮಾಪಕರ ಜೊತೆ ಹೃದಯಶಿವ ಸಂಪರ್ಕಿಸಿ ಕಥೆ ಹೇಳಿದಾಗ ಸದರಿ ಪಾತ್ರವೇ ತಮ್ಮದೆಂಬುದನ್ನು ಅಶ್ವತ್ಥ್ ಆರಂಭದಲ್ಲಿ ನಂಬಿಯೇ ಇರಲಿಲ್ಲವಂತೆ. ಕಡೆಗೂ ಸವಾಲಿನ ಆ ಪಾತ್ರಕ್ಕೆ ಅಸ್ವತ್ಥ್ ಜೀವ ತುಂಬಿದ್ದಾರೆ.

Image may contain: 1 person, camera and outdoor

Image may contain: 2 people, text

Leave a Reply

Your email address will not be published. Required fields are marked *


CAPTCHA Image
Reload Image