One N Only Exclusive Cine Portal

ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ ಜೆ.ಕೆ..!

ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಜೆ.ಕೆ ಎಂದೇ ಜನಪ್ರಿಯವಾಗಿರುವ ಜಯರಾಮ್ ಕಾರ್ತಿಕ್, ಬಿಗ್‌ಬಾಸ್ ಕನ್ನಡ -೫ ನೇ ಆವೃತ್ತಿಯ ಪ್ರಬಲ ಸ್ಪಽಯಾಗಿ -ನಲ್ ಹಂತದವರೆಗೂ ಬಂದಿದ್ದರು. ಆದರೆ ಅಂತಿಮ ಹಂತದಲ್ಲಿ ಬಿಗ್‌ಬಾಸ್ ಒಲವು ಚಂದನ್

ಶೆಟ್ಟಿ ಕಡೆಗೆ ತಿರುಗಿ, ದಿವಾಕರ್ ರನ್ನರ್ ಅಪ್ ಆಗಿ, -ನಲ್‌ವರೆಗೆ ಬಂದಿರುವುದಕ್ಕಷ್ಟೇ ಜೆ.ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ‘ಬಿಗ್‌ಬಾಸ್-೫’ ಕೈ ಹಿಡಿಯದಿದ್ದರೂ, ಜಯರಾಮ್ ಕಾರ್ತಿಕ್ ಅವರಿಗೆ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಕನ್ನಡದಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಮತ್ತು ‘ಪುಟ 109’ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಜೆ.ಕೆ, ಸದ್ದಿಲ್ಲದೆ ಹಿಂದಿ ಚಿತ್ರವೊಂದರಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿದ್ದಾರೆ. ಹೌದು, ಈಗಾಗಲೇ ಹಿಂದಿ ಕಿರುತೆರೆ ಪ್ರವೇಶಿಸಿ ಯಶಸ್ವಿಯಾಗಿರುವ ಜೆ.ಕೆ ಹಿಂದಿಯಲ್ಲಿ ‘ಸಿಯಾ ಕಾ ರಾಮ್’ ಧಾರವಾಹಿಯಲ್ಲಿ ರಾವಣನ ಪಾತ್ರವನ್ನು ಮಾಡುವ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಇದರ ನಡುವೆ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದ ಜೆ.ಕೆ ಈಗ ಮತ್ತೆ ಹಿಂದಿಯ ಕಡೆಗೆ ಮುಖ ಮಾಡಿದ್ದು, ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆ.ಕೆ ‘ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಈ ಬಗ್ಗೆ ಮಾತುಕತೆಯಾಗಿತ್ತು. ಕಳೆದ ಅಕ್ಟೋಬರ್ ನಲ್ಲಿ ಚಿತ್ರತಂಡ ಭೇಟಿ ಮಾಡಿ ಮಾತುಕತೆಯಾಗಿತ್ತಷ್ಟೆ. ಸಿನಿಮಾದ ಕೆಲಸ ಆರಂಭವಾಗುವಷ್ಟರಲ್ಲಿ, ನಾನು ಬಿಗ್‌ಬಾಸ್ ಶೋಗೆ ಹೋದೆ. ಸಿನಿಮಾ ಟೀಮ್‌ಗೂ ಈ ಬಗ್ಗೆ ತಿಳಿಸಿರಲಿಲ್ಲ. ನನ್ನ ಅದೃಷ್ಟಕ್ಕೆ ಪ್ರೊಡ್ಯೂಸರ್ ಬೇರೆ ಆರ್ಟಿಸ್ಟ್‌ಗಳನ್ನು ಹಾಕಿಕೊಳ್ಳದೆ ನನಗಾಗಿ ಕಾಯುತ್ತಿದ್ದರು. ಇದೀಗ ಎಲ್ಲವೂ -ನಲ್ ಆಗಿದ್ದು, ಇದೇ ಮಾರ್ಚ್ ವೇಳೆಗೆ ಸಿನಿಮಾ ಶುರುವಾಗಲಿದೆ’ ಎಂದಿದ್ದಾರೆ.

ಉತ್ತರ ಭಾರತದ ಲಕ್ನೋ ಬೇಸ್ಡ್ ಕಥಾಹಂದರವಿರುವ ಈ ಚಿತ್ರಕ್ಕೆ ರಮೇಶ್ ತಲ್ವರ್ ಆಕ್ಷನ್- ಕಟ್ ಹೇಳುತ್ತಿzರೆ. ಈ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ ಹೀರೋಯಿನ್ ಆಗಿ ಗೌರ್ಹಾ ಖಾನ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಉಳಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರ ಬಗ್ಗೆ ಇನ್ನಷ್ಟೆ ಮಾಹಿತಿ ಹೊರಬೀಳಬೇಕಿದೆ. ಇದರೊಂದಿಗೆ ಕೃಷ್ಣ ಅಭಿಷೇಕ್ ಜೊತೆ ಮತ್ತೊಂದು ಹಿಂದಿ ಸಿನಿಮಾದಲ್ಲೂ ಜೆ.ಕೆ ಅಭಿನಯಿಸಲಿದ್ದು, ದಿನಕರ್ ಕಪೂರ್ ಈ ಚಿತ್ರವನ್ನು ನಿರ್ದೇಶಿಸಲಿzರೆ ಎನ್ನಲಾಗುತ್ತಿದೆ. ಅದೇನೆಯಿರಲಿ, ಇಷ್ಟು ವರ್ಷಗಳಿಂದ ಕಿರುತೆರೆ, ಹಿರಿತೆರೆಯಲ್ಲಿ ಒಂದೊಳ್ಳೆ ಯಶಸ್ಸಿಗಾಗಿ ಎದುರು ನೋಡುತ್ತಿರುವ ಜೆ.ಕೆ ಅವರಿಗೆ ಬಾಲಿವುಡ್ ಕೈ ಹಿಡಿಯಲಿದೆಯಾ ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *


CAPTCHA Image
Reload Image