Connect with us

ಸಿನಿಬಜ಼್ ಸುದ್ದಿಸ್ಪೋಟ

ಟೀಕೆಗಳಿಂದ ನೊಂದು ನಿರ್ದೇಶನ ಬಿಟ್ಟರಾ ಜೋಗಿ ಪ್ರೇಮ್?

Published

on


ದಿ ವಿಲನ್ ಚಿತ್ರ ಅಮೋಘ ಯಶ ಕಂಡಿದೆ ಅಂತ ಬೇರ್‍ಯಾರು ಹೇಳದಿದ್ದರೂ ನಿರ್ದೇಶಕ ಪ್ರೇಮ್ ಮಾತ್ರ ಹೇಳುತ್ತಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿಯೇ ಭಯಾನಕ ಕ್ರಾತಿ ಮಾಡಿಬಿಟ್ಟಿದೆ ಅಂತ ಪ್ರೇಮ್ ಭ್ರಮಿಸಿದ್ದಾರೆ. ದುರಂತವೆಂದರೆ ಅದನ್ನು ಯಾರೂ ನಂಬುತ್ತಿಲ್ಲ!

ಈ ಚಿತ್ರ ಬಿಡುಗಡೆಯಾದೇಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟಾತಿ ಕೆಟ್ಟ ಮಾತುಗಳೇ ಹರಿದಾಡಿದ್ದವಲ್ಲಾ? ತನ್ನ ನಿರ್ದೇಶನದ ಬಗ್ಗೆ ಹರಡಿಕೊಂಡಿರೋ ಇಂಥಾ ಅವಹೇಳನದಿಂದ ಬೇಸತ್ತ ಪ್ರೇಮ್ ನಿರ್ದೇಶನದಿಂದ ದೂರ ಸರಿಯೋ ನಿರ್ಧಾರ ಮಾಡಿದ್ದಾರಾ? ಖುದ್ದು ಪ್ರೇಮ್ ಅವರೇ ಕೈಗೊಂಡಿರೋ ನಿರ್ಧಾರವೊಂದು ಇಂಥಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ!

ಪ್ರೇಮ್ ವಿಲನ್ ಚಿತ್ರದ ನಂತರ ಇಂಟರ್ ನ್ಯಾಷನಲ್ ಲೆವೆಲ್ಲಿನ ಚಿತ್ರವೊಂದನ್ನು ನಿರ್ದೇಶನ ಮಾಡೋದಾಗಿ ಹೇಳಿಕೊಂಡಿದ್ದರಲ್ಲಾ? ಆದರೆ ಅವರೀಗ ಏಕಾಏಕಿ ತಾವು ನಟಿಸೋದಾಗಿ ಘೋಶಿಸಿ ಪೆಂಡಿಂಗ್ ಉಳಿದುಕೊಂಡಿದ್ದ ಚಿತ್ರದಲ್ಲಿ ನಟಿಸಲಾರಂಭಿಸಿದ್ದಾರೆ. ವರ್ಷಾಂತರಗಳ ಹಿಂದೆ ಪ್ರೇಮ್ ಗಾಂಧಿಗಿರಿ ಅಂತೊಂದು ಚಿತ್ರದಲ್ಲಿ ನಟಿಸುತ್ತಿರೋದರ ಬಗ್ಗೆ ಸುದ್ದಿಯಾಗಿತ್ತು. ಆದರೆ ಅದು ನಿಂತೂ ಹೋದಂತಿತ್ತು. ಇದೀಗ ಆ ಚಿತ್ರಕ್ಕೆ ಮತ್ತೆ ಜೀವ ಬಂದಿದೆ. ಪ್ರೇಮ್ ಈಗ ಅದರಲ್ಲಿ ನಟಿಸಲಾರಂಭಿಸಿದ್ದಾರೆ.

ರಘು ಹಾಸನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮ್ ನಾಯಕ. ರಾಗಿಣಿ ದ್ವಿವೇದಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅರುಂಧತಿ ನಾಗ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಮತ್ತೆ ಆರಂಭವಾಗಿ ಹಗಲೂ ರಾತ್ರಿ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಈ ಚಿತ್ರವೀಗ ಶೇಖಡಾ ಎಪ್ಪತೈದರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆಯಂತೆ. ಇದಾದ ನಂತರ ಪ್ರೇಮ್ ಸಾಹೇಬರು ನಿರ್ದೇಶನಕ್ಕೆ ಗುಡ್ ಬೈ ಹೇಳಿ ನಟನಾಗಿಯೇ ಮುಂದುವರೆಯೋ ಪ್ಲಾನು ಮಾಡಿದ್ದಾರಾ ಎಂಬುದಕ್ಕೆ ಕಾಲವಷ್ಟೇ ಉತ್ತರ ಹೇಳಬೇಕಿದೆ!

#

Advertisement
Click to comment

Leave a Reply

Your email address will not be published. Required fields are marked *

ಗಾಂಧಿನಗರ ಗಾಸಿಪ್

ಕಿರಾತಕನ ಕತ್ತು ಹಿಸುಕಿದರಾ ಯಶ್?

Published

on

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾರಿಗೂ ಗೊತ್ತಿಲ್ಲದ ನ್ಯೂಸೊಂದು ಇಲ್ಲಿದೆ.

ಈ ವಾರ ತೆರೆಗೆ ಬರುತ್ತಿರೋ ಕೆ.ಜಿ.ಎಫ್ ನಂತರ ಯಶ್ ಸಿನಿಮಾ ಯಾವುದು? ಅಂದರೆ, ಅವರ ಅಭಿಮಾನಿಗಳೆಲ್ಲಾ `ಕಿರಾತಕ-೨’ ಅಂತಾ ಕೂಗಿ ಹೇಳುತ್ತಿದ್ದಾರೆ. ಆದರೆ `ಕಿರಾತಕ-೨’ ಅನ್ನೋ ಚಿತ್ರ ಯಾವ ಕಾರಣಕ್ಕೂ ಮುಂದುವರೆಯೋದಿಲ್ಲ ಅನ್ನೋ ಮಾತು ಖುದ್ದು ರಾಕಿಂಗ್ ಸ್ಟಾರ್ ಸರ್ಕಲ್ಲಿನಲ್ಲೇ ಮಾರ್ದನಿಸುತ್ತಿದೆ.

ಈ ಹಿಂದೆ ದಿಲ್ ವಾಲಾ, ಮಾಲಾಶ್ರೀಯ ಶಕ್ತಿ ಮತ್ತು ರ್‍ಯಾಂಬೋ-೨ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅದಕ್ಕೂ ಮುಂಚೆ ಡೈಲಾಗ್ ರೈಟರ್ ಆಗಿ ಅಬ್ಬರಿಸಿದ್ದ ಅನಿಲ್ ಕುಮಾರ್ `ಕಿರಾತಕ-೨’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಕೆ.ಜಿ.ಎಫ್ ಶೂಟಿಂಗ್ ಮುಗಿದ ಕೂಡಲೇ `ಕಿರಾತಕ-೨’ ಆರಂಭವಾಗಿತ್ತು. ಮೂರು ವರ್ಷಗಳಿಂದ ಪೊದೆಯಂತೆ ಬೆಳೆದುಕೊಂಡಿದ್ದ ಗಡ್ಡವನ್ನು ಬೋಳಿಸಿಕೊಂಡುಬಂದು ಹತ್ತು ದಿನಗಳ ಕಾಲ ಚಿತ್ರೀಕರಣವನ್ನೂ ನಡೆಸಿಕೊಟ್ಟಿದ್ದರು ಯಶ್. ಈ ನಡುವೆ ಕೆ.ಜಿ.ಎಫ್. ಪರಭಾಷೆಗಳಿಗೂ ಡಬ್ ಆಗಿ ಟಾಕ್ ಕ್ರಿಯೇಟ್ ಮಾಡಲು ಶುರು ಮಾಡಿತು ನೋಡಿ… ಯಶ್‌ಗೆ `ಕಿರಾತಕ’ನ ಮೇಲೆ ಅಸಡ್ಡೆ ಶುರುವಾಯಿತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ತಯಾರುಮಾಡಿದ ಕೆ.ಜಿ.ಎಫ್ ಸಿನಿಮಾ ಈ ಪರಿ ಹೈಪು ಕ್ರಿಯೇಟ್ ಮಾಡಿರೋವಾಗ `ಕಿರಾತಕ’ನಂಥ ಸಾಧಾರಣ ಸಿನಿಮಾವನ್ನು ಮಾಡಬೇಕಾ ಅನ್ನೋ ಚಿಂತೆ ಯಶ್‌ಗೆ ಶುರುವಾಯಿತಂತೆ.

ಹೀಗಾಗಿ `ಹತ್ತು ದಿನ ಶೂಟಿಂಗ್ ಮಾಡಿರೋದಷ್ಟೇ ಅಲ್ವಾ? ಇಲ್ಲಿಗೇ ನಿಲ್ಲಿಸಿಬಿಡೋಣ’ ಅಂತ ತೀರ್ಮಾನಿಸಿದರು ಅನ್ನುತ್ತಿದೆ ಮೂಲ. ಇನ್ನೊಂದು ವಿಚಾರವೆಂದರೆ, ಈ ಸಿನಿಮಾಗೆ ಜಯಣ್ಣ ಬ್ಯಾನರಿನ ಹೆಸರು ಬಳಸಿಕೊಳ್ಳಲಾಗಿತ್ತಾದರೂ ಸ್ವತಃ ಯಶ್ ನಿರ್ಮಾಪಕರಾಗಿದ್ದರು ಅನ್ನೋದು.

ಏಕಾಏಕಿ ಸಿನಿಮಾ ನಿಂತುಹೋಗುತ್ತದೆ, ಅದೂ ಒಬ್ಬ ಸ್ಟಾರ್ ಸಿನಿಮಾ ಡ್ರಾಪ್ ಆಯಿತೆಂದರೆ ಅದರ ನಿರ್ದೇಶಕನ ಭವಿಷ್ಯಕ್ಕೆ ಕತ್ತಲು ಕವಿಯೋದು ಗ್ಯಾರೆಂಟಿ. ಹೀಗಾಗಿ `ಕಿರಾತಕ’ ನಿಲ್ಲಿಸಿದರು ಅನ್ನೋದನ್ನು ಮರೆ ಮಾಚಲಾಗಿದೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಸೈಲೆಂಟಾಗಿ ರಾಮ್ ಕುಮಾರ್ ಪುತ್ರ ಧೀರನ್’ನನ್ನು ಹಾಕಿಕೊಂಡು `ದಾರಿ ತಪ್ಪಿದ ಮಗ’ ಅನ್ನೋ ಚಿತ್ರವನ್ನು ಆರಂಭಿಸಿದ್ದಾರೆ. ಯಶ್ ಸಿನಿಮಾ ಮುಂದುವರೆಯುವಂತಾಗಿದ್ದರೆ ಅನಿಲ್ ತಾನೆ ಮತ್ತೊಂದು ಸಿನಿಮಾ ಕೆಲಸ ಆರಂಭಿಸೋ ಪ್ರಮೇಯವೆಲ್ಲಿ ಬರುತ್ತಿತ್ತು? ಈ ವಿಚಾರವಾಗಿ ಮಾಧ್ಯಮದ ಮಂದಿ ಡೈರೆಕ್ಟರ್ ಅನಿಲ್ ಅವರನ್ನು ಪ್ರಶ್ನಿಸಿದರೆ `ಯಶ್ ಅವರು ಒಂಚೂರು ಬ್ಯುಸಿ ಇದಾರೆ’ ಅದಕ್ಕೇ ಮತ್ತೊಂದು ಸಿನಿಮಾ ಮಾಡ್ತಿದೀನಿ ಅಂತಾ ಸಬೂಬು ಹೇಳಿ ಸಿನಿಮಾ ನಿಂತುಹೋದ ವಿಚಾರವನ್ನು ಮರೆಮಾಚುತ್ತಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ `ಕಿರಾತಕ-೨’ ಮುಂದುವರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಒಂದುವೇಳೆ ಕೆ.ಜಿ.ಎಫ್. ನಿರೀಕ್ಷೆಯಂತೇ ಗೆದ್ದರೆ, ಅದರ ಮುಂದುವರಿದ ಅಧ್ಯಾಯದಲ್ಲಿ ಯಶ್ ಬ್ಯುಸಿಯಾಗುತ್ತಾರೆ. ಪ್ರಶಾಂತ್ ನೀಲ್ ಸಿನಿಮಾ ಅಂದರೆ ಗೊತ್ತಲ್ಲ? ಹೆಚ್ಚೂಕಮ್ಮಿ ಅದು ಪಂಚವಾರ್ಷಿಕ ಯೋಜನೆಯಿದ್ದಂತೆ. ಅಲ್ಲಿಗೆ ಕಿರಾತಕ ಖತಂ ಅನ್ನೋದು ನಿಜವಾದಂತೆ!

#

Continue Reading

ಪ್ರಚಲಿತ ವಿದ್ಯಮಾನ

ವಿಷ್ಣು ಸ್ಮಾರಕ ವಿವಾದ : ಅತ್ತೆ ಭಾರತಿಯ ಅವಿವೇಕಿ ಅಳಿಯ ಅನಿರುದ್ಧ!

Published

on

ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮರೆಯಾಗುತ್ತಲೇ ಮತ್ತೆ ವಿಷ್ಣು ಸ್ಮಾರಕದ ವಿಚಾರ ಹೊಗೆಯಾಡಲಾರಂಭಿಸಿದೆ. ನಿಜ, ವಿಷ್ಣುರಂಥಾ ನಟರ ಸ್ಮಾರಕ ನಿರ್ಮಾಣ ಈ ಪಾಟಿ ಕಗ್ಗಂಟಾಗಿರೋದು ಒಳ್ಳೆ ಬೆಳವಣಿಗೆಯಲ್ಲ. ಆದರೆ ಅದಕ್ಕೆ ಕಾರಣ ಸರ್ಕಾರವಲ್ಲ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಭಾರತೀ ಮೇಡಮ್ ಬೇರೇನೋ ಲೆಕ್ಕಾಚಾರ ಹಾಕಿಕೊಂಡು ಕೂತಿರೋದರಿಂದಲೇ ಈ ವಿಚಾರ ಇಷ್ಟು ಜಟಿಲ ರೂಪ ಪಡೆದಿದೆ ಎಂಬುದೂ ಜಾಹೀರಾಗಿದೆ. ಹಾಗಿದ್ದರೂ ಕೂಡಾ ಭಾರತೀ ಅಳಿಯ ಅನಿರುದ್ಧ ಥೇಟು ಅವಿವೇಕಿಯಂತೆ ಮಾತಾಡಿದ್ದಾನೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನೂ ಜರಿದಿದ್ದಾನೆ. ಇದಕ್ಕಾಗಿ ಸಿಎಂ ಕಡೆಯಿಂದಲೇ ಉಗಿಸಿಕೊಂಡಿದ್ದೂ ಆಗಿದೆ!

ವಿಷ್ಣು ಅಭಿಮಾನಿಗಳೆಲ್ಲ ಬೆಂಗಳೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಆಸೆ ಹೊಂದಿದ್ದಾರೆ. ಆದರೆ ಭಾರತಿ ಮಾತ್ರ ಮೈಸೂರಲ್ಲಿಯೇ ನಡೆಯ ಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಅಲ್ಲಿ ಇದಕ್ಕಾಗಿ ಈ ಹಿಂದೆಯೇ ಐದೆಕರೆ ಜಮೀನು ಕೂಡಾ ಸ್ಯಾಂಕ್ಷನ್ ಆಗಿತ್ತು. ಆದರೀಗ ಆ ಜಮೀನಿನ ರೈತರು ತಿರುಗಿ ಬಿದ್ದಿದ್ದಾರೆ. ಇದಕ್ಕೆ ಅನಿರುದ್ಧ ನೇರವಾಗಿ ಕುಮಾರಸ್ವಾಮಿಯವರನ್ನು ಟಾರ್ಗೆಟ್ ಮಾಡಿದ್ದಾನೆ. ಮಾನ ಮರ್ಯಾದೆಯಿದ್ದರೆ ಸ್ಮಾರಕ ನಿರ್ಮಾಣ ಮಾಡಿ ಅಂತೆಲ್ಲ ಅಬ್ಬರಿಸಿದ್ದಾನೆ. ಇಡೀ ಅಭಿಮಾನಿ ಸಂಕುಲವೇ ರಾಜ್‌ಕುಮಾರ್, ವಿಷ್ಣು ಹಾಗೂ ಅಂಬಿ ಸ್ಮಾರಕಗಳನ್ನು ಒಂದೆಡೆ ಧ್ಯಾನಿಸುತ್ತಿರುವಾಗ ಈ ಅತ್ತೆ ಅಳಿಯ ಯಾಕೆ ಭಿನ್ನ ರಾಗ ತೆಗೆಯುತ್ತಿದ್ದಾರೆಂಬುದಕ್ಕೆ ಬೆಚ್ಚಿಬೀಳಿಸೋ ಕಾರಣಗಳೂ ಇವೆ!

ವಿಷ್ಣು ಸ್ಮಾರಕ ವಿಚಾರವಾಗಿ ಆರಂಭದಿಂದಲೂ ಅದೇಕೋ ಭಾರತಿ ಮೇಡಮ್ಮು ಅಡ್ಡಬಾಯಿ, ಅಡ್ಡಗಾಲಾಗುತ್ತಾ ಸಾಗಿದ್ದಾರೆ. ಇದೀಗ ಅವರ ಕಡೆಯಿಂದ ಅಂಥಾದ್ದೇ ಒಂದು ಅಪಸ್ವರವೂ ಕೇಳಿ ಬಂದಿದೆ. ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯೋ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ತಯಾರಿ ಆರಂಭವಾಗಿದೆ. ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕವಾಗುವಂಥಾ ಕೆಲಸ ಕಾರ್ಯಗಳನ್ನು ವಿಷ್ಣು ಸೇನೆ ನಡೆಯುತ್ತಿದೆ. ಅತ್ಯಂತ ಪಾರದರ್ಶಕವಾಗಿ ಮುಂದಡಿ ಇಡುತ್ತಿರುವ ವಿಷ್ಣು ಸೇನೆ ಸಾಹಸಸಿಂಹನ ಸ್ಮಾರಕದ ವಿಚಾರದಲ್ಲಿಯೂ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದೆ. ಆದರೀಗ ಭಾರತೀ ವಿಷ್ಣುವರ್ಧನ್ ಪತ್ರಿಕಾಗೋಷ್ಟಿಯೊಂದನ್ನು ಕರೆದು ಅದರಲ್ಲಿ ವಿಷ್ಣು ಅಭಿಮಾನಿಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು.

`ವಿಷ್ಣುರ್ಧನ್ ಅವರಿಗೆ ರಾಷ್ಟ್ರೀಯ ಉತ್ಸವದಂಥವು ಇಷ್ಟವಿರಲಿಲ್ಲ. ಆದರೆ ಒಂದಷ್ಟು ಜನ ತಮ್ಮ ಸ್ವಾರ್ಥಕ್ಕೋಸ್ಕರ, ಹೊಟ್ಟೆ ತುಂಬಿಸಿಕೊಳ್ಳಲೋಸ್ಕರ ಅದನ್ನೆಲ್ಲ ಮಾಡುತ್ತಿದ್ದಾರೆ’ ಎಂಬರ್ಥದಲ್ಲಿ ಮಾತಾಡಿ ಎದ್ದು ಹೋಗಿದ್ದಾರೆ. ಇದು ವಿಷ್ಣುಸೇನೆಯ ನೆರಳಲ್ಲಿ ಒಂದುಗೂಡಿರೋ ಸಾಹಸಸಿಂಹನ ಅಭಿಮಾನಿಗಳ ವಿರುದ್ಧ ಆಡಿರೋ ಮಾತೆಂಬುದು ಗೊತ್ತಾಗುತ್ತಲೇ ಅಭಿಮಾನಿಗಳಲ್ಲಿ ಭಾರತಿ ವಿರುದ್ಧ ಅಸಹನೆ ಶುರುವಾಗಿದೆ.

ಯಾವುದು ಹೊಟ್ಟೆ ತುಂಬಿಸಿಕೊಳ್ಳೋ ಕೆಲಸ? ಡಾ ವಿಷ್ಣುವರ್ಧನ್ ಅವರ ಹೆಸರಲ್ಲಿ ಏಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಕ್ಷರಾರ್ಜನೆಗೆ ಒತ್ತಾಸೆಯಾದ ಸಾರ್ಥಕ ಪ್ರಯತ್ನವಾ? ಸಾಹಿತ್ಯ ಪರಿಷತ್ತಿನಲ್ಲಿ ಎರಡು ಲಕ್ಷ ದತ್ತಿನಿಧಿ ಇಟ್ಟು ವಿಷ್ಣು ಹೆಸರಿನಲ್ಲಿ ಸಿನಿಮಾ ಸಾಧಕರಿಗೆ ಪ್ರಶಸ್ತಿ ಕೊಡುವಂಥಾ ಕಾರ್ಯಕ್ರಮವಾ? ಚಾಮರಾಜಪೇಟೆಯಲ್ಲಿ ವಿಷ್ಣುವರ್ಧನ್ ಅವರೇ ಓದಿದ್ದ ಮಾಡೆಲ್ ಸರ್ಕಾರಿ ಶಾಲೆ ಮುಚ್ಚುತ್ತದೆಂದಾಕ್ಷಣವೇ ಅದನ್ನು ತಡೆದು ನಿಜವಾದ ವಿಷ್ಣು ನೆನಪನ್ನು ಕಾಪಾಡಿಕೊಂಡ ಸೂಕ್ಷ್ಮವಂತಿಕೆಯಾ? ಇಂಥಾ ನಾನಾ ಪ್ರಶ್ನೆಗಳು ವಿಷ್ಟುವರ್ಧನ್ ಅವರ ಅಪ್ಪಟ ಅಭಿಮಾನಿಗಳಲ್ಲಿದೆ.

ರಾಜ್ಯಾದಂತ ಮೂವತೈದು ವಿಷ್ಣು ಪ್ರತಿಮೆಗಳನ್ನು ವೀರಕಪುತ್ರ ಶ್ರೀನಿವಾಸ್ ಅವರೇ ಮುಂದೆ ನಿಂತು ಸ್ಥಾಪನೆ ಮಾಡಿಸಿದ್ದಾರೆ. ಅಭಿಮಾನಿಗಳೆಲ್ಲ ಇದಕ್ಕೆ ಒತ್ತಾಸೆಯಾಗಿದ್ದಾರೆ. ಇನ್ನುಳಿದಂತೆ ಈಗ ಪ್ರಕೃತಿ ವಿಕೋಪದಿಂದ ತತ್ತರಿಸಿರೋ ಕೊಡಗಿನಲ್ಲೊಂದು ಮನೆ ಕಟ್ಟಿ ಕೊಡುವಂಥಾ ಕೆಲಸಕ್ಕೂ ವಿಷ್ಣು ಸೇನೆ ಮುಂದಾಗಿದೆ. ಇದಕ್ಕಾಗಿ ಅಭಿಮಾನಿಗಳೆಲ್ಲ ಸೇರಿ ಎಪ್ಪತೈದು ಸಾವಿರದಷ್ಟು ಹಣ ಸಂಗ್ರಹಿಸಿದ್ದಾರೆ. ಆದರೆ ಉದ್ದೇಶಿತ ಮನೆ ನಿರ್ಮಾಣಕ್ಕೆ ಆರು ಲಕ್ಷ ಬೇಕಾಗುತ್ತದೆ. ಈ ಹಣವನ್ನು ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಸ್ವಂತ ಮೂಲದಿಂದಲೇ ಹೊಂಚಿದ್ದಾರೆ. ಯಾರದ್ದೋ ಸಂಕಟಕ್ಕೆ ವಿಷ್ಣು ಹೆಸರಲ್ಲಿ ಮಿಡಿಯುವ ಈ ಮಾನವೀಯ ಕಾರ್ಯದಲ್ಲಿ ಯಾವ ಹೊಟ್ಟೆ ಪಾಡಿದೆ? ಈ ಮನೆಗಳಿಗೆ ವಿಷ್ಣು ನಿಲಯ ಎಂದೇ ನಾಮಕರಣ ಮಾಡಲೂ ತೀರ್ಮಾನಿಸಲಾಗಿದೆ. ಇದು ಅಭಿಮಾನಿಗಳ ಸಾರ್ಥಕ ಕೆಲಸವಲ್ಲದೆ ಮತ್ತೇನು? ಇಂಥಾದ್ದರಲ್ಲೆಲ್ಲ ಭಾರತಿ ಮೇಡಂ ಯಾಕೆ ಸ್ವಾರ್ಥ ಹೆಕ್ಕುವ ಕೆಲಸ ಮಾಡುತ್ತಿದ್ದಾರೆ?

ವಿಷ್ಣು ಸೇನೆಯ ಈ ವರೆಗಿನ ಎಲ್ಲ ಕೆಲಸ ಕಾರ್ಯಗಳ ಲೆಕ್ಕವನ್ನು ಅಭಿಮಾನಿಗಳು ಕೊಡಲು ರೆಡಿಯಿದ್ದಾರೆ. ರಾಜ್ಯದ ಅಷ್ಟೂ ಅಭಿಮಾನಿ ಸಂಘಗಳೂ ಇದಕ್ಕೆ ತಯಾರಿದ್ದಾವೆ. ಆದರೆ ಭಾರತಿ ಮೇಡಮ್ಮು ತಮ್ಮ ವಿಭಾ ಚಾರಿಟಬಲ್ ಟ್ರಸ್ಟ್‌ನ ಬ್ಯಾಂಕ್ ಸ್ಟೇಟ್‌ಮೆಂಟನ್ನು ಮಾಧ್ಯಮದ ಮುಂದಿಡಲು ತಯಾರಿದ್ದಾರಾ? ನಾಗರಹಾವು ಚಿತ್ರದ ರೀ ರಲೀಸ್ ವಿಚಾರವಾಗಿ ಪಡೆದುಕೊಂಡ ಐದು ಲಕ್ಷ ಸ್ವಾರ್ಥವಿಲ್ಲದ ಯಾವ ಘನ ಕಾರ್ಯಕ್ಕೆ ಖರ್ಚಾಗಿದೆ? ವಿಷ್ಣು ಅಳಿಯ ಭಾರೀ ಅಬ್ಬರದಲ್ಲಿ ಹೀರೋ ಆಗಿ ನಟಿಸಿ ತೋಪೆದ್ದಿದ್ದ ರಾಜಾಸಿಂಹ ಚಿತ್ರದಲ್ಲಿ ಬಾಕಿ ಹಣ ಕೊಡಲಿಲ್ಲವೆಂದು ಕಾರ್ಯಕ್ರಮಕ್ಕೆ ಹಾಜರಾಗದೆ ಬಾಕಿ ಹಣ ಪೀಕಿಸಿಕೊಂಡಿದ್ದು ಯಾರು? ಇದು ವಿಷ್ಣು ಹೆಸರುಳಿಸೋ ಕೆಲಸವೇ?

ಅಭಿಮಾನ್ ಸ್ಟುಡಿಯೋದ ಆವರಣದಲ್ಲಿನ ವಿಷ್ಣು ಸಮಾಧಿ ಸ್ಥಳವೇ ಸ್ಮಾರಕವಾಗಬೇಕೆಂಬುದು ಅಭಿಮಾನಿಗಳೆಲ್ಲರ ಒಡಲಾಸೆ. ಇದರ ಸಾಕಾರಕ್ಕಾಗಿ ಹಗಲಿರುಳೆನ್ನದೇ ಕಾರ್ಯ ನಿರ್ವಹಿಸಿದ್ದವರು, ಹೋರಾಟ ಕಟ್ಟಿದ್ದವರು ವೀರಕಪುತ್ರ ಶ್ರೀನಿವಾಸ್. ಅವರು ಅಭಿಮಾನಿಗಳನ್ನು ಒಗ್ಗೂಡಿಸಿ ಸರ್ಕಾರವೇ ಈ ಸ್ಥಳದತ್ತ ಬರುವಂತೆ ಮಾಡಿದ್ದರು. ಆ ಕ್ಷಣದಲ್ಲಿ ಭಾರತಿಯವರು ಅಭಿಮಾನಿಗಳ ಒತ್ತಾಸೆಗೆ ತಮ್ಮ ಸಹಮತ ಇದೆ ಅಂತ ಒಂದೇ ಒಂದು ಮಾತು ಹೇಳಿದ್ದರೂ ಯಾವತ್ತೋ ಸ್ಮಾರಕವಾಗುತ್ತಿತ್ತು. ಆದರೆ ಈ ಕ್ಷಣಕ್ಕೂ ಅದು ಸಾಧ್ಯವಾಗದ ಹಿಂದಿರೋದು ಯಾರ ಸ್ವಾರ್ಥ? ಯಾವ ಹೊಟ್ಟೆಪಾಡು?

ಅಭಿಮಾನಿಗಳೆಲ್ಲ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರೋ ಜಾಗದಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕೆಂಬ ಆಸೆ ಹೊಂದಿದ್ದರೆ ಭಾರತಿ ಮಾತ್ರ ಮೈಸೂರಿನಲ್ಲಾಗಬೇಕೆಂಬ ಭಿನ್ನ ರಾಗ ತೆಗೆದಿದ್ದರು. ಆದರೆ ಭಾರತಿ ಸಿದ್ಧಪಡಿಸಿರೋ ಇದರ ನೀಲನಕ್ಷೆಯೇ ಎಲ್ಲವನ್ನೂ ಹೇಳುವಂತಿದೆ. ಯಾಕೆಂದರೆ ಭಾರತಿ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಸ್ಮಾರಕ ಭವನ ಟ್ರಸ್ಟ್ ಅಂತ ಮಾಡಿಸಿದ್ದಾರೆ. ಈಗಾಗಲೇ ರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರ ಸಮಾಧಿ ಸ್ಮಾರಕವಾಗಿದೆಯಷ್ಟೆ. ಸ್ಮಾರಕ ಭವನ ಅಂದರೆ ಅಲ್ಲಿ ಖಂಡಿತಾ ಕಮರ್ಶಿಯಲ್ ವಾಸನೆ ಬಡಿಯುತ್ತದೆ. ಈ ಸ್ಮಾರಕ ಭವನದಲ್ಲಿ ಅಭಿನಯ ತರಬೇತಿ, ನೃತ್ಯ ತರಬೇತಿ, ಯೋಗ ಧ್ಯಾನ ಮತ್ತು ಧನ್ವಂತರಿ ಆಸ್ಪತ್ರೆಯೊಂದನ್ನು ತೆರೆಯೋ ಯೋಚನೆ ಭಾರತಿಯವರಿಗಿರೋದು ನಿಜವಾ? ಅಸಲಿಗೆ ಇದರ ನೀಲನಕ್ಷೆ ಸ್ಮಾರಕದಂತಿಲ್ಲ, ಕಮರ್ಷಿಯಲ್ ಕಾಂಪ್ಲೆಕ್ಸ್‌ನಂತಿದೆ ಎಂಬ ರೂಮರ್ ಹಬ್ಬಿರೋದರ ಹಿಂದೆ ಸತ್ಯವಿಲ್ಲವೇ? ಇಂಥಾ ಕಮರ್ಶಿಯಲ್ ಕೊಂಪೆಯ ಮಧ್ಯೆ ವಿಷ್ಣು ಬಳೆಯಿಟ್ಟು ಅದರ ಜೊತೆಗೆ ಆರಡಿ ಪುತ್ಥಳಿ ನಿರ್ಮಿಸೋ ನೀಲನಕ್ಷೆಯ ಹಿಂದೆ ಇರೋದು ಯಾರ ಹೊಟ್ಟೆಪಾಡು? ಇದು ವಿಷ್ಣುವರ್ಧನ್ ನೆನಪುಗಳನ್ನೂ ವಾಣಿಜ್ಯೀಕರಣಗೊಳಿಸುವ ದುಷ್ಟತನವಲ್ಲದೆ ಮತ್ತಿನ್ನೇನು?

ಇಂಥಾ ಹತ್ತಾರು ಪ್ರಶ್ನೆಗಳು ವಿಷ್ಣು ಅಭಿಮಾನಿಗಳಲ್ಲಿದೆ. ತಾವು ಇದುವರೆಗೆ ನಡೆಸಿರೋ ಕಾರ್ಯಕ್ರಮಗಳಿಗೆ, ಕೆಲಸ ಕಾರ್ಯಗಳಿಗೆ ಕಾಸೆತ್ತಿದ್ದು ಸಾಬೀತಾದರೆ ಆ ಕ್ಷಣದಿಂದ ಮತ್ತೆಂದೂ ತಮ್ಮ ಬಾಯಲ್ಲಿ ವಿಷ್ಣು ಹೆಸರು ಬರೋದಿಲ್ಲ ಎಂಬಂಥಾ ಬದ್ಧತೆ ವೀರಕಪುತ್ರ ಶ್ರೀನಿವಾಸ್ ಅವರದ್ದು. ಶ್ರೀನಿವಾಸ್ ಸೇರಿದಂತೆ ರಾಜ್ಯದ ಸಮಸ್ತ ಅಭಿಮಾನಿ ಪಡೆಗಳೂ ತಮ್ಮ ಬ್ಯಾಂಕ್ ಸ್ಟೇಟ್ ಮೆಂಟನ್ನು ಮಾಧ್ಯಮದ ಮುಂದೆ ಅನಾವರಣಗೊಳಿಸಲು ತಯಾರಿದ್ದಾರೆ. ತಮ್ಮ ವಿಭಾ ಚಾರಿಟಬಲ್ ಟ್ರಸ್ಟಿನ ಬ್ಯಾಂಕ್ ಸ್ಟೇಟ್‌ಮೆಂಟನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಲು ಭಾರತೀ ಮೇಡಂಗೆ ಸಾಧ್ಯವಾಗಬಹುದೇ? ಯಾವುದು ಸ್ವಾರ್ಥ, ಯಾವುದು ಅಭಿಮಾನ ಎಂಬ ವಿಚಾರ ಸಾಬೀತು ಮಾಡಲಿಕ್ಕಾದರೂ ಭಾರತೀ ವಿಷ್ಣುವರ್ಧನ್ ತಮ್ಮ ವಿಭಾ ಚಾರಿಟಬಲ್ ಟ್ರಸ್ಟಿನ ಬ್ಯಾಂಕ್ ಸ್ಟೇಟ್‌ಮೆಂಟನ್ನು ಜಾಹೀರು ಮಾಡಿಯಾರೇ?

#

Continue Reading

ಬ್ರೇಕಿಂಗ್ ನ್ಯೂಸ್

ಕಾಸು ಕೊಡ್ತೀನಿ ಕಮೀಟ್ ಆಗ್ತಿಯಾ ಅಂದ ಖತರ್ನಾಕ್ ನಿರ್ದೇಶಕ!

Published

on

ಫೇಸ್‌ಬುಕ್ಕಲ್ಲಿ ಹುಡುಗೀರ ಬೇಟೆಗೆ ಬಂದೂಕು ಹಿಡಿದು ಕೂತ ಕಾಮುಕರದ್ದೊಂದು ದೊಡ್ಡ ಸಂಖ್ಯೆಯೇ ಇದೆ. ಈ ಅನಿಷ್ಠ ಕಾರ್ಯಕ್ಕೆ ಹೆಚ್ಚಾಗಿ ಚಿತ್ರರಂಗದ ಹೆಸರೇ ಬಳಕೆಯಾಗುತ್ತಿದೆ ಎಂಬುದು ದುರಂತ ಸತ್ಯ. ಇದೀಗ ತನ್ನನ್ನು ತಾನು ನಿರ್ದೇಶಕ ಅಂತ ಬಿಂಬಿಸಿಕೊಂಡಿರೋ ಪ್ರಕಾಶ್ ಬಸವನಬಾಗೇವಾಡಿ ಎಂಬ ಕಂಮಗಿಯ ವಿರುದ್ಧ ನೀಮಾ ಗೌಡ (ಹೆಸರು ಬದಲಿಸಿದೆ) ಎಂಬ ನವರಂಗಿಯೊಬ್ಬಳು ತಿರುಗಿ ಬಿದ್ದಿದ್ದಾಳೆ!

ಈ ಆಸಾಮಿ ಪ್ರಕಾಶ್ ತನ್ನ ಹೆಸರಿನ ಮುಂದೆ ಪುಣ್ಯಸ್ಥಳವಾದ ಬಸವನಬಾಗೇವಾಡಿಯ ಹೆಸರನ್ನು ತಗುಲಿಸಿಕೊಂಡಿದ್ದಾನೆ. ಫೇಸ್ ಬುಕ್‌ನಲ್ಲಿ ಇವನದ್ದೊಂದು ಪ್ರೊಫೈಲ್ ಇದೆ. ಅದಕ್ಕೆ `ಸಿನಿಮಾನೇ ನನ್ನ ಉಸಿರು’ ಅನ್ನೋ ಪ್ರೊಫೈಲ್ ಪಿಕ್ಚರ್ ಬೇರೆ ಅಂಟಿಸಿಕೊಂಡಿದ್ದಾನೆ. ಅದರಲ್ಲಿ ಹುಡುಗೀರನ್ನು ಆಯ್ಕೆ ಮಾಡಿಕೊಂಡು ಲಡಾಸು ಇಂಗ್ಲಿಷಿನಲ್ಲಿ ತನ್ನನ್ನು ತಾನು ನಿರ್ದೇಶಕ ಅಂತ ಪರಿಚಯಿಸಿಕೊಳ್ಳುತ್ತಾನೆ ಪ್ರಕಾಶ.

ಆ ಬಳಿಕ ತಾನು ಗೋರಿ ಮೇಲೆ ಲಗೋರಿ ಎಂಬ ಸಿನಿಮಾ ಮಾಡುತ್ತಿದ್ದೇನೆ ಅಂತ ಮೆಸೆಂಜರಿನಲ್ಲಿಯೇ ಕಾವೇರಲು ಶುರು ಮಾಡುತ್ತಾನೆ. ಬಳಿಕ ಮುಂದುವರೆದು ನೇರಾ ನೇರ ಮಂಚಹತ್ತಿಸಿಕೊಳ್ಳುವ ಗೇಮು ಶುರುವಿಡುತ್ತಾನೆ. ಇಂಥಾ ಆಟಕ್ಕೆ ಅದ್ಯಾರ್‍ಯಾರು ಬಲಿಯಾಗಿದ್ದಾರೆಂಬ ವಿಚಾರ ಇವನ ಬುಡಕ್ಕೆ ಪೊಲೀಸರ ಬೂಟುಗಾಲಿನ ಸ್ಪರ್ಶವಾದ ನಂತರವಷ್ಟೇ ಹೊರಬೀಳಬೇಕಿದೆ. ಆದರೆ ಸದ್ಯ ಇವನ ವಿರುದ್ಧ ಒಬ್ಬಳು ತಿರುಗಿ ಬಿದ್ದಿದ್ದಾಳೆ. ಆಕೆ ನೀಮಾ ಗೌಡ!

ಈ ನೀಮಾ ಎಂಬಾಕೆಗೂ ಪ್ರಕಾಶ ಹೀಗೆಯೇ ಮೆಸೆಂಜರಿನಲ್ಲಿ ಅಟಕಾಯಿಸಿಕೊಂಡಿದ್ದಾನೆ. ತನ್ನನ್ನು ತಾನು ಗೋರಿ ಮೇಲೆ ಲಗೋರಿ ಎಂಬ ಸಿನಿಮಾ ನಿರ್ದೇಶಕ ಅಂತ ಪರಿಚಯಿಸಿಕೊಂಡಿದ್ದಾನೆ. ಆ ಬಳಿಕ ಏಕಾಏಕಿ `ಕಾಸು ಕೊಡ್ತೀನಿ ಕಮೀಟ್ ಆಗ್ತೀಯಾ’ ಅಂತ ಮೆಸೇಜು ಬಿಟ್ಟಿದ್ದಾನೆ. ಇದರ ವಿರುದ್ಧ ರೆಬೆಲ್ ಆದ ನೀಮಾ ಅತ್ತಲಿಂದ ನಿನ್ನ ವಿರುದ್ಧ ಫಿಲಂ ಚೇಂಬರ್‌ಗೆ ದೂರು ನೀಡೋದಾಗಿ ಹೇಳುತ್ತಾಳೆ. ಇಷ್ಟಾದೇಟಿಗೆ ಬಸವನಬಾಗೇವಾಡಿಯ ಈ ಕೀಟ ಹುಚ್ಚೆದ್ದು ಅರಚಿಕೊಳ್ಳುತ್ತೆ. “ನಿಂಗೊಂದು ವಿಷಯ ಹೇಳ್ತೀನಿ ಕೇಳ್ಕೊ. ನಾನು ಎಲ್ಲದಕ್ಕೂ ಸಿದ್ಧನಾಗಿಯೇ ಚಿತ್ರರಂಗಕ್ಕೆ ಬಂದಿದ್ದೇನೆ. ಪೊಲೀಸ್, ರಾಜಕಾರಣ, ರೌಡೀಸ್ ಎಲ್ಲವೂ ಇರೋದರಿಂದಲೇ ಫಿಲಂ ಫೀಲ್ಡಲ್ಲಿ ಇದೀನಿ. ನನ್ನನ್ಯಾರೂ ಏನೂ ಮಾಡಿಕೊಳ್ಳಲಾಗೋದಿಲ್ಲ” ಎಂಬರ್ಥದಲ್ಲಿ ಅವಾಜನ್ನೂ ಬಿಡುತ್ತಾನೆ!

ಇಂಥಾ ಫೇಸ್‌ಬುಕ್ ಕಾಮುಕರಿಗೆ, ಚಿತ್ರರಂಗದ ಹೆಸರನ್ನು ಖಯಾಲಿಗೆ ಬಳಸಿಕೊಳ್ಳುವ ಪ್ರಕಾಶನಂಥಾ ಕಸಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಆದರೆ ಈತನ ವಿರುದ್ಧ ತಿರುಗಿ ಬಿದ್ದಿರೋ ಪುಣ್ಯಾತಗಿತ್ತಿ ನೀಮಾಳ ಹಿಸ್ಟರಿ ಏನೆಂದು ನೋಡಹೋದರೆ ಆಕೆಯ ಬಗ್ಗೆಯೂ ಅನುಮಾನಗಳು ಕಾಡುತ್ತವೆ. ಈಕೆ ಪ್ರಕಾಶನೊಂದಿಗೆ ನಡೆಸಿರೋ ಚಾಟ್ ಹಿಸ್ಟರಿಯಲ್ಲಿ ಕೆಲ ಮೆಸೇಜುಗಳು ಡಿಲೀಟ್ ಆಗಿರೋ ಗುಮಾನಿಯೂ ಕಾಡುತ್ತದೆ. ಈಗಾಗಲೇ ಈಕೆ ಹಲವಾರು ದೇವರ ಸಿನಿಮಾಗಳಲ್ಲಿ ದೇವತೆಯಾಗಿ ನಟಿಸಿದ್ದಾಳೆಂಬ ವಿಚಾರವೂ ಜಾಹೀರಾಗುತ್ತದೆ!

ಇದೆಲ್ಲ ಏನೇ ಇದ್ದರೂ ಚಿತ್ರ ರಂಗದ ಹೆಸರು ಹೇಳಿಕೊಂಡು ಹೆಣ್ಣುಮಕ್ಕಳನ್ನು ಕಾಡುವ  ಪ್ರಕಾಶನಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ. ಫೇಸ್‌ಬುಕ್ಕಿನಲ್ಲಿರೋ ಹೆಣ್ಣುಮಕ್ಕಳೂ ಕೂಡಾ ಪ್ರಕಾಶನಂಥಾ ಪ್ರಳಯಾಂತಕರ ಬಗ್ಗೆ ಎಚ್ಚರದಿಂದಿರಬೇಕಿದೆ.

#

Continue Reading

Trending

Copyright © 2018 Cinibuzz