One N Only Exclusive Cine Portal

250ರ ಸಂಚಿಕೆಯತ್ತಜೋಜೋ ಲಾಲಿ

ಇಬ್ಬರು ಅಮ್ಮಂದಿರ ಪ್ರೀತಿಯ ಕಥೆ ಎಂಬ ವಿಶೇಷತೆಯೊಂದಿಗೆ ಆರಂಭವಾಗಿದ್ದ ಧಾರಾವಾಹಿ ಜೋಜೋ ಲಾಲಿ. ಟೈಟಲ್ ಸಾಂಗ್ ನಿಂದಲೆ ಜನಮನ ಗೆದ್ದ ಧಾರಾವಾಹಿ ಇದೀಗ ೨೫೦ ಕಂತುಗಳನ್ನ ಪೂರೈಸಿದೆ. ರುಕ್ಮಿಣಿ ಮಾಧವರಾಧಾ ಪ್ರೀತಂ ಈ ನಾಲ್ಕು ಜನರ ಬದುಕಲ್ಲಿ ನಡೆಯೋ ತಿರುವುಗಳು ರುಕ್ಮಿಣಿರಾಧಾರನ್ನ ಬೆಸೆಯೋ ಕರುಳ ಬಳ್ಳಿಯ ನಂಟು ಜೋಜೋ ಲಾಲಿಯಕಥಾ ಹಂದರ.


ಮಕ್ಕಳಿಲ್ಲದ ರುಕ್ಮಿಣಿ ಮಾಧವ, ಬಾಡಿಗೆತಾಯಿ ಮುಖಾಂತರ ಮಗುವನ್ನು ಪಡೆಯುತ್ತಾರೆ. ಹೂವಿನಿಂತ ಮನಸಿರೊ ರಾಧಾ, ತನ್ನತಾಯಿ ಮತ್ತು ಪ್ರೀತಿಸಿದ ಪ್ರೀತಂ ನ ಪ್ರಾಣ ಉಳಿಸೋಕೆ ಬಾಡಿಗೆತಾಯಿ ಆಗೋ ನಿರ್ಧಾರ ಮಾಡುತ್ತಾಳೆ. ಹೆತ್ತತಾಯಿಯಾಗಿ ಮಗುವಿನ ಜೊತೆಗೆ ಮಮಕಾರ ಬೆಳೆಸಿಕೊಂಡಿರೊ ರಾಧಾ, ಇಷ್ಟು ವರ್ಷಕಾದು ಮಡಿಲಲ್ಲಿ ಮಗುವನ್ನುಕಾಣೋಆಸೆಯಲ್ಲಿರುಕ್ಮಿಣಿ, ಇದರ ನಡುವೆ ವಿಲನ್ ಮಹೇಶ್ವರಿ ಕುತಂತ್ರಗಳನ್ನ ಮಾಡಿ ಸೋತಿದ್ದಾಳೆ. ಈ ರೀತಿ ಸೆಂಟಿಮೆಂಟ್ಸ್, ತಿರುವುಗಳನ್ನ ಹೊತ್ತುತರೋಜೋಜೋ ಲಾಲಿ ಯಶಸ್ವಿಯಾಗಿ ೨೫೦ ಕಂತುಗಳನ್ನ ಪೂರೈಸಿದೆ. ಜೋಜೋ ಲಾಲಿಯಲ್ಲಿ ಪ್ರತಿಭಾವಂತಕಲಾವಿದರ ಬಳಗವೇ ಇದೆ. ಜೋತಿರೈ, ನಾರಾಯಣಸ್ವಾಮಿ , ನಯನ ಶೆಟ್ಟಿ, ದೇವಯ್ಯ, ಕೃಷ್ಣ ನಾಡಿಗ್, ಮಹಾಲಕ್ಷ್ಮಿ ಸೇರಿದಂತೆ ಹಲವಾರುದೊಡ್ಡಕಲಾವಿದರದಂಡೆಇದೆ.
ಅಲ್ಲಲ್ಲಿ ಬರುವ ಕವನಗಳು, ರೋಮಾಂಟಿಕ್ ದೃಶ್ಯಗಳು ಛಾಯಾಚಿತ್ರ ನೋಡುವಅನುಭವಕೊಡುವಜೋಜೋ ಲಾಲಿ ಭಾವನಾತ್ಮಕ ಬರವಣಿಗೆಗೆಒಂದು ಸವಾಲೆಂದು ಹೇಳುತ್ತಾರೆ ಜೋಜೋ ಲಾಲಿಯ ಸಂಭಾಷಣಕಾರರಾದಚೈತ್ರಿಕಾ ಹೆಗಡೆ.


ಅಂತೂರುಕ್ಮೀಣಿ ಮಡಿಲಿಗೆ ಮಗು ಬಂದಾಯಿತು. ರುಕ್ಮೀಣಿಗೆಕೊಟ್ಟ ಮಗು ತಾನು ಹೆತ್ತ ಮಗು ಎಂಬುದು ರಾಧಾಳಿಗೆ ತಿಳಿಯುತ್ತಾ? ರಾಧಾ ಪ್ರೀತಂ ಮದುವೆಯಾಗ್ತಾರಾ? ರಾಧಾ ಮಾಧವನಿಗೆಎರಡನೇ ಹೆಂಡ್ತಿಯಾಗ್ತಾಳಾ? ಹೀಗೆ ಕೇಳಿಬರುವ ಪ್ರಶ್ನೆಗಳಿಗೆ ಮುಂದೆ ಸಾಕಷ್ಟು ತಿರುವುಗಳು ಇವೆ ಕಾದು ನೋಡಿಎಂದುಉತ್ತರಿಸುತ್ತಾರೆಕಥೆಗಾರ ಶೇಖರ್.
ಕಥೆ, ಸಂಭಾಷಣೆಗೆ ಬಣ್ಣ ಹಚ್ಚಿರೂಪಕೊಡೋದೆ ನಿರ್ದೇಶಕರು, ಜೋಜೋಲಾಲಿಯಧಾರಾವಾಹಿಯ ಹಲವಾರು ವಿಶೇಷತೆಗಳಲ್ಲಿ ಮುಖ್ಯವಾದುದು, ವಿಭಿನ್ನ ಬೆಳಕಿನಲ್ಲಿ ಚಿತ್ರಿಕರಿಸುವ ಮಾದರಿ ಹಾಗು ದೃಶ್ಯಗಳನ್ನ ಸುಂದರವಾಗಿಕಟ್ಟಿಕೊಡುವರೀತಿ. ಇದಕ್ಕೆಕಾರಣಕರ್ತರಾಗಿರೋ ನಿರ್ದೇಶಕರುತ್ರಿಶೂಲ್, `’ಜೋಜೋ ಲಾಲಿ ನನ್ನ ವೃತ್ತಿ ಬದುಕಿನಒಂದು ಪ್ರಮುಖಘಟ್ಟ. ತಾಯಿ ಮಗುವಿನ ಸಂಬಂಧವಿದೆ, ಪ್ರಾಣಕಿಂತ ಹೆಚ್ಚು ಪ್ರೀತಿಸೊಜೋಡಿಯಿದೆ, ಆದರ್ಶವೆಂಬಂತಿರೊದಂಪತಿಯಿದ್ದಾರೆ, ಹೇಗೆ ಬೇರೆ ಬೇರೆ ಸಂಬಂಧಗಳು, ಎಲ್ಲವನ್ನ ಒಗ್ಗೂಡಿಸಿ ಸನ್ನಿವೇಶಗಳನ್ನ ಮಾಡೋದೆಒಂದು ಖುಷಿ.”ಎನ್ನುತ್ತಾರೆ.


ಈ ಪಾತ್ರ ನನ್ನ ೧೯ ವರ್ಷ ವೃತ್ತಿಜೀವನದಲ್ಲಿ ನನಗೆ ಸಿಕ್ಕಂತ ಬಹಳ ಅಚ್ಚುಮೆಚ್ಚಿನ ಪಾತ್ರ. ಪ್ರತಿದೃಶ್ಯ ಮಾಡೋವಾಗಲು ಖುಷಿ, ಮುಂದೇನಾಗುತ್ತೆಅನ್ನೊಕಾತುರತೆ ನಮ್ಮ ಸೆಟ್‌ಅಲ್ಲಿಇದ್ದೆಇರುತ್ತೆ, ಈ ಧಾರಾವಾಹಿ ಜನರ ಮನಸಲ್ಲಿ ಪ್ರಭಾವ ಬೀರಿದೆಅಂದರೆ ನಮ್ಮ ಶ್ರಮಕ್ಕೆ ಪ್ರತಿಫಲಸಿಕ್ಕಂತೆ. ೨೫೦ ಕಂತುಗಳು ಮುಗಿಸಿದ್ದೀವಿ, ಹೀಗೆ ನಿಮ್ಮ ಪ್ರೀತಿ ಜೋಜೋ ಜೊತೆಗಿರಲಿ” ಎನ್ನುತ್ತಾರೆ ಮಾಧವನ ಪಾತ್ರ ನಿರ್ವಹಿಸುತ್ತಿರೊ ನಾರಾಯಣಸ್ವಾಮಿ.
`’ಹಾಸ್ಯ ಧಾರಾವಾಹಿ ಮುಖಾಂತರ ಪರಿಚಿತಳಾದವಳು ನಾನು, ಮೊದಲಿಗೆ ಈ ಪಾತ್ರ ಹೇಗೋ ಏನೋ ಅನ್ನೊ ಭಯಕಾಡ್ತಿತ್ತು. ಆದರೆ, ರಾಧಾಳ ಪಾತ್ರ ನನಗೆ ಅರಿವಿಲ್ಲದೆ ನನ್ನೋಳಗೆ ವೈಬ್ರೇಷನ್ ಸೃಷ್ಟಿಸಿದೆ. ಆ ಕಡೆಗೆ ಆಟಾವಾಡಿಕೊಂಡು, ಪ್ರೀತಿಸಿದವನ ಜೊತೆಗೆಖುಷಿಯಲ್ಲಿರೊ ಹುಡುಗಿ, ಮತ್ತೊಂದೆಡೆ ಬಾಡಿಗೆತಾಯಿಯಾಗಿ ಮೌನಿಯಾಗ್ತಾಜವ್ಬಾದಾರಿ ಹೊರುತ್ತಾಳೆ, ಹೀಗೆ ಎರಡು ಶೇಡ್‌ಅಲ್ಲಿ ನಟಿಸೋಕೆ ಖುಷಿಯಾಗುತ್ತೆ. ಅಳುವ ದೃಶ್ಯಗಳಲ್ಲಿ ಎಷ್ಟೊ ಸಲ ನಿಜವಾಗಲೂ ಭಾವುಕಳಾಗಿ ಅತ್ತಿರೊದುಂಟು.” ಎನ್ನುತ್ತಾರೆ ರಾಧಾ ಪಾತ್ರ ಮಾಡುತ್ತಿರುವ ನಯನಾಶೆಟ್ಟಿ.


“ತಾಯ್ತತನದ ಪಾತ್ರಗಳನ್ನ ಈ ಮುಂಚೆ ಅಭಿನಯಿಸಿದ್ದೀನಿ, ಆ ಪಾತ್ರಗಳಲ್ಲಿ ಪ್ರಬುಧ್ದತೆಇತ್ತು ,ಆದರೆಜ್ಯೋತಿರೈರುಕ್ಮಿಣಿಯಾಗಿದ್ದು ಹೊಸ ಹೆಜ್ಜೆ , ರುಕ್ಮಿಣಿತುಂಬ ಸೂಕ್ಷ್ಮ , ಮಗುವಿನ ವಿಚಾರ ಬಂದಾಗ ಅಳುಮುಂಜಿ , ಅತ್ತಿಗೆಕೆಟ್ಟವರು ಅಂತ ಗೊತ್ತಿದ್ದರು ಅವರನ್ನ ನಂಬುವಷ್ಟು ಮುಗ್ಧೆ. ನನಗೆ ಈ ಪಾತ್ರ ಇಷ್ಟಾ ಆಗಿದ್ದೆಇಲ್ಲಿ, ಮಾಧವನ ಬಗ್ಗೆ ರುಕ್ಮಿಣಿಗಿರೊ ಪ್ರೀತಿ, ಮಗುವನ್ನು ಕಂಡಾಗ ಅವಳಿಗೆ ಆಗೋ ಆನಂದ ಹೀಗೆ ಹೇಳುತ್ತಾ ಹೋದರೆ ನೂರೆಂಟು. ರುಕ್ಮಿಣಿ ಪಾತ್ರ ಬಹಳ ಸ್ಪೆಷಲ್ ಎನ್ನುತ್ತಾರೆ ಜ್ಯೋತಿ ರೈ.
ಜೋಜೋ ಲಾಲಿಯ ೨೫೦ರ ಸಂಚಿಕೆಯ ಲಾಲಿ ಸೋಮವಾರದಿಂದ ಸಂಜೆ ೬.೩೦ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

Leave a Reply

Your email address will not be published. Required fields are marked *


CAPTCHA Image
Reload Image