One N Only Exclusive Cine Portal

ತುಮ್ಹಾರಿ ಸುಲು ರೀಮೇಕ್‌ನಲ್ಲಿ ನಟಿಸಲಿದ್ದಾಳೆ ಜ್ಯೋತಿಕಾ!

ಒಂದಷ್ಟು ಕಾಲ ಮನೆ, ಗಂಡ ಮಕ್ಕಳು ಅಂತ ಕಳೆದು ಹೋಗಿದ್ದಾಕೆ ಸೂರ್ಯನ ಹೆಂಡತಿ ಕಂ ಸ್ಟಾರ್ ನಟಿ ಜ್ಯೋತಿಕಾ. ಇಂಥಾ ಜ್ಯೋತಿಕಾ ವರ್ಷದ ಹಿಂದೆಯೇ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾಳೆ. ಇದೀಗ ಜ್ಯೋತಿಕಾ ಹಿಂದಿಯಲ್ಲಿ ವಿದ್ಯಾ ಬಾಲನ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ತುಮ್ಹಾರೀ ಸುಲು ತಮಿಳು ರೀಮೇಕ್‌ನಲ್ಲಿ ನಟಿಸಲಿರೋದು ಪಕ್ಕಾ ಆದಂತಿದೆ!

ಜ್ಯೋತಿಕಾ ತ್ಹುಮಾರೇ ಸುಲು ಚಿತ್ರದಲ್ಲಿ ನಟಿಸುತ್ತಿದ್ದಾಳೆಂದ ರೂಮರ್ ಕೆಲ ದಿನಗಳ ಹಿಂದಿನಿಂದಲೇ ಹಬ್ಬಿಕೊಂಡಿತ್ತು. ಆದರೀಗ ಈ ವಿಚಾರವನ್ನು ಖುದ್ದು ಸೂರ್ಯ ಅವರೇ ಜಾಹೀರು ಮಾಡಿದ್ದಾರೆ. ಓಟರಿನಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರೋದಲ್ಲದೇ ತಮ್ಮ ಮಡದಿಯ ಹೊಸಾ ಚಿತ್ರಕ್ಕೆ ಸೂರ್ಯ ಶುಭ ಕೋರಿದ್ದಾರೆ.

ತ್ಹುಮಾರಿ ಸುಲು ಚಿತ್ರವನ್ನು ತಮಿಳಿನಲ್ಲಿ ನಿರ್ದೇಶನ ಮಾಡುತ್ತಿರುವವರು ರಾಧಾ ಮೋಹನ್. ರಾಧಾ ಮತ್ತು ಜ್ಯೋತಿಕಾ ಈ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ. ಈ ಹಿಂದೆ ಈ ಜೋಡಿ ಸೇರಿ ಮಾಡಿದ್ದ ಮೋಜಿ ಎಂಬ ಚಿತ್ರ ಸೂಪರ್ ಹಿಟ್ಟಾಗಿತ್ತು. ಇದೀಗ ತುಮಾರಿ ಸುಲು ಚಿತ್ರದಲ್ಲಿ ವಿದ್ಯಾ ಬಾಲನ್ ಮಾಡಿದ್ದ ಪಾತ್ರವನ್ನು ಜ್ಯೋತಿಕಾ ಮಾಡುತ್ತಿದ್ದಾರೆ. ಈ ಹಿಂದಿನ ಮೋಜಿ ಚಿತ್ರದಂತೆಯೇ ಈ ಚಿತ್ರವೂ ಸೂ]ಪರ್ ಹಿಟ್ ಆಗಲಿ ಅಂದಿದ್ದಲ್ಲದೇ ರಾಧಾ ಮೋಹನ್ ಅವರ ಜೊತೆ ಜ್ಯೋತಿಕಾ ಎರಡನೇ ಚಿತ್ರ ಮಾಡುತ್ತಿರೋದರ ಬಗ್ಗೆಯೂ ಸೂರ್ಯ ಸಂತಸ ಹಂಚಿಕೊಂಡಿದ್ದಾರೆ.

ಧನಂಜಯನ್ ಗೋವಿಂದ್ ನಿರ್ಮಾಣ ಮಾಡಿರೋ ಈ ಚಿತ್ರದ ಕೆಲಸ ಕಾರ್ಯಗಳಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಇಷ್ಟರಲ್ಲೇ ಚಿತ್ರೀಕರಣವೂ ಆರಂಭವಾಗಲಿದೆಯಂತೆ!

Leave a Reply

Your email address will not be published. Required fields are marked *


CAPTCHA Image
Reload Image