ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೆಡ್ಡು ಹೊಡೆದು ಪರ್ಯಾಯ ವಾಣಿಜ್ಯ ಮಂಡಳಿ ಸ್ಥಾಪಿಸಿದ್ದವರು ಕೃಷ್ಣೇಗೌಡ. ಈ ಪರ್ಯಾಯ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡ ಇದೀಗ ಅರಬ್ಬೀ ಕಡಲ ತೀರದಲ್ಲಿ ಎಂಬ ಒಂದು ಚಿತ್ರ ಮಾಡಿದ್ದಾರೆ. ಇದರ ಪತ್ರಿಕಾ ಗೋಷ್ಠಿಯನ್ನೂ ಕೂಡಾ ನಡೆಸಿದ್ದಾರೆ. ಈ ಮೂಲಕವೇ ಈ ಸಿನಿಮಾ ಡೈಲಾಗೊಂದು ಸೇವೆಗೆ ಹೆಸರಾದ ಒಂದು ವೃತ್ತಿಯನ್ನು ಅಪಮಾನಿಸುವಂಥಾ ಡೈಲಾಗ್ ಮೂಲಕ ವಿವಾದ ಹುಟ್ಟು ಹಾಕೋ ಲಕ್ಷಣಗಳು ದಟ್ಟವಾಗಿವೆ!  ಅರಬ್ಬಿ ಸಮುದ್ರ ತೀರದಲ್ಲಿ ಒಂಥರಾ ಅನ್ನಿಸುವಂಥಾ ಸನ್ನಿವೇಶಗಳನ್ನು ಒಳಗೊಂಡಿದೆ ಅನ್ನೋ ಸುಳಿವು ಕೂಡಾ ಈ ಪತ್ರಿಕಾಗೋಷ್ಠಿಯಲ್ಲಿ ಸಿಕ್ಕಿದೆ. ಅದರಲ್ಲಿ ಒಂದು ಪಾತ್ರ ಬ್ಯಾಂಡೇಜ್ ಹಾಕೋ ಕಿತ್ತೋದ ನರ್ಸ್‌ಗಳು ಅಂತೊಂದು ಡೈಲಾಗ್ ಉದುರಿಸುತ್ತೆ. ಇದು ಎಂತೆಂಥಾ ರೋಗಗಳಿಂದ ಬಳಲೋ ರೋಗಿಗಳ ಸೇವೆ ಮಾಡೋ ಸಮಸ್ತ ದಾದಿಯರಿಗೂ ಅವಮಾನದಂತಿರೋದು ಸುಳ್ಳಲ್ಲ.

https://www.facebook.com/cinibuzzkannada/videos/272968436929590/

ತೀರಾ ಮನೆ ಮಂದಿ, ಹತ್ತಿರದ ಸಂಬಂಧಿಕರೇ ಮುಟ್ಟಲು ಅಸಹ್ಯ ಪಡೋ ರೋಗಿಗಳನ್ನೂ ದೇವರೆಂಬಂತೆ ಕಂಡು ಸುಶ್ರೂಶೆ ಮಾಡೋ ಪವಿತ್ರವಾದ ಕೆಲದ ನರ್ಸ್‌ಗಳದ್ದು. ಅದನ್ನೊಂದು ಸೇವೆ ಅಂತಲೇ ಪರಿಗಣಿಸಿ ದುಡಿಯುತ್ತಿರೋ ಅದೆಷ್ಟೋ ನರ್ಸ್‌ಗಳಿದ್ದಾರೆ. ಅಂಥವರ ಸಂಕುಲವನ್ನೇ ಕಿತ್ತೋಗಿರೋ ಜಾಗಕ್ಕೆ ಬ್ಯಾಂಡೇಜು ಸುತ್ತೋ ನರ್ಸ್‌ಗಳು ಎಂಬಂಥ ಡೈಲಾಗನ್ನು ಅದ್ಯಾವ ಪುಣ್ಯಾತ್ಮ ಬರೆದನೋ…ಈ ಬಗ್ಗೆ ಮಾಧ್ಯಮ ಮಿತ್ರರು ವಿವಾದವಾಗೋ ಮುನ್ನವೇ ಎಚ್ಚೆತ್ತುಕೊಳ್ಳಲಿ ಎಂಬ ಕಾರಣದಿಂದ ಕೃಷ್ಣೇಗೌಡರ ಗಮನ ಸೆಳೆದರು. ಆದರೆ ಅದನ್ನವರು ಪದೇ ಪದೆ ಸಮರ್ಥಿಸಿಕೊಂಡರೇ ಹೊರತು ತಪ್ಪು ತಿದ್ದಿಕೊಳ್ಳುವ ಮಾತಾಡಿಲ್ಲ. ಪ್ರತ್ಯೇಕ ವಾಣಿಜ್ಯ ಮಂಡಳಿ ಮಾಡಿ ಊರಿಗೆಲ್ಲ ಬುದ್ಧಿ ಹೇಳೋ ಕೃಷ್ಣೇಗೌಡರಿಗೆ ಯಾಕೆ ಸೂಕ್ಷ್ಮ ವಿಚಾರಗಳು ಅರ್ಥವಾಗುತ್ತಿಲ್ಲವೋ..

Arun Kumar

ದಾಂಪತ್ಯ ಬದುಕಿಗೆ ಕಾಲಿಟ್ಟ ತಾರೆಯರಾದ ಆರ್ಯ – ಸಯೇಶಾ

Previous article

ಗುಣಮುಖರಾಗಿ ಮುಂಬಯಿಗೆ ಮರಳಿದ ಇರ್ಫಾನ್ ಖಾನ್!

Next article

You may also like

Comments

Leave a reply

Your email address will not be published. Required fields are marked *