One N Only Exclusive Cine Portal

ರಜನಿಕಾಂತ್ ಕಾಳನಿಗೆ ಕತ್ತರಿ!

ಕಬಾಲಿ ಚಿತ್ರದ ನಂತರದ ಒಂದು ಸುಧೀರ್ಘ ಅಂತರದ ನಂತರ ಬಿಡುಗಡೆಯಾಗುತ್ತಿರುವ ರಜನೀಕಾಂತ್ ಚಿತ್ರ ಕಾಳ. ಇನ್ನೇನು ತೆ ಕಾಣುವ ಸನ್ನಾಹದಲ್ಲಿರುವ ಪಾ ರಂಜಿಂತ್ ನಿರ್ದೇಶನದ ಈ ಚಿತ್ರಕ್ಕೀಗ ಸೆನ್ಸಾರ್ ಮಂಡಳಿ ಭರ್ಜರಿಯಾಗಿಯೇ ಕತ್ತರಿ ಪ್ರಯೋಗ ಮಾಡಿ ಯು/ಎ ಸರ್ಟಿಫಿಕೆಟ್ ದಯಪಾಲಿಸಿದೆ!

ಚಿತ್ರ ತಂಡ ಸೆನ್ಸಾರ್ ಮಂಡಳಿ ಯದ್ವಾ ತದ್ವ ಕತ್ತರಿ ಪ್ರಯೋಗ ಮಾಡಿದ ವರಸೆ ಕಂಡು ಒಳಗೊಳಗೇ ಕುದಿಯುತ್ತಿದೆ. ಆದರೆ ಅಪ್ಪಿತಪ್ಪಿಯೂ ಯಾರೂ ಸೆನ್ಸಾರ್ ಮಂಡಳಿ ವಿರುದ್ಧ ಮಾತಾಡಿಲ್ಲ. ಆದರೆ ತಮಿಳು ಚಿತ್ರ ರಂಗದಲ್ಲೀಗ ಕಾಳನಿಗೆ ಕತ್ತರಿ ಪ್ರಯೋಗವಾದ ರೀತಿಯ ಬಗ್ಗೆ ಥರ ಥರದ ಸುದ್ದಿಗಳು ಹರಿದಾಡುತ್ತಿವೆ.

ಒಂದು ಮೂಲದ ಪ್ರಕಾರ ಕಾಳ ಚಿತ್ರಕ್ಕೆ 14 ಭಾಗಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡಿದೆ. ಅದರಲ್ಲಿ ಇಡೀ ಚಿತ್ರದ ಖದರನ್ನು ಎತ್ತಿ ಹಿಡಿಯುವಂಥಾ ಮುಖ್ಯ ಭಾಗಗಳೂ ಸೇರಿದ್ದಾವೆಂಬ ವ್ಯಥೆ ಚಿತ್ರ ತಂಡದ್ದು.

ಈ ಕತ್ತರಿ ಪ್ರಯೋಗದ ಕಥೆ ಏನೇ ಇದ್ದರೂ ಕಬಾಲಿಯನ್ನೇ ಮರಿಸುವಂತೆ ಕಾಳ ಚಿತ್ರದ ಬಗೆಗೊಂದು ನಿರೀಕ್ಷೆ ಹುಟ್ಟಿರೋದಂತೂ ನಿಜ. ರಜನಿ ಕಬಾಲಿಯ ಹೀನಾಯ ಸೋಲಿನಿಂದ ಕಂಗಾಲಾಗಿದ್ದಾರಲ್ಲಾ? ಆ ಕಹಿಯನ್ನು ಮರೆಸುವಂಥಾ ಅದ್ದೂರಿ ಗೆಲುವೊಂದು ಕಾಳ ಚಿತ್ರದ ಮೂಲಕ ಸಾಧ್ಯವಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಅಂದಹಾಗೆ ಕಾಳ ಚಿತ್ರದಲ್ಲಿ ರಜನೀ ಕಾಂತ್ ಅವರದ್ದು ಪಕ್ಕಾ ರಗಡ್ ಪಾತ್ರವಂತೆ. ತಮಿಳುನಾಡಿನಿಂದ ಮುಂಬೈಗೆ ಅನ್ನ ಅರಸಿ ವಲಸೆ ಹೋಗುವ ಸಾಮಾನ್ಯನೊಬ್ಬ ಡಾನ್ ಆಗಿ ಮರಳುವ ರೋಚಕ ಕಥೆ ಮತ್ತು ಮುಂಬೈ ಸ್ಲಮ್ಮಿನಲ್ಲಿ ಹಕ್ಕಿಗಾಗಿ ಹೋರಾಡುವ ತಮಿಳರ ತಲ್ಲಣಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ತೆರೆದಿಡಲಿದೆಯಂತೆ.

Leave a Reply

Your email address will not be published. Required fields are marked *


CAPTCHA Image
Reload Image