One N Only Exclusive Cine Portal

ತೆಲುಗು ನಟಿಯರಿಗೆ ಟಾಂಗ್ ಕೊಟ್ಟಳು ಕಾಜಲ್ ಅಗರ್ವಾಲ್!

ಪಕ್ಕದ ತೆಲುಗು ಚಿತ್ರರಂಗವನ್ನು ಬಾಲಿವುಡ್ ನಟಿಯರೇ ಆವರಿಸಿಕೊಂಡು ಅಲ್ಲಿನವರೇ ಆದ ನಟಿಯರೆಲ್ಲ ಹಂತ ಹಂತವಾಗಿ ಮೂಲೆ ಗುಂಪಾಗುತ್ತಾರೆ. ಅತ್ತ ಬಾಲಿವುಡ್‌ನಲ್ಲಿ ಮೊದಲ ಸಾಲಿನ ನಟಿಯರಾಗಿದ್ದುಕೊಂಡೇ ತೆಲುಗಿನಲ್ಲಿಯೂ ಅಧಿಪತ್ಯ ಸಾಧಿಸಿಕೊಂಡವರ ಸಾಲಿನಲ್ಲಿ ಶ್ರದ್ಧಾ ಕಪೂರ್‌ಗಿಂತಲೂ ಕಾಜಲ್ ಅಗರರ್ವಾಲ್ ತುಂಬಾ ಸೀನಿಯರ್!

ತೆಲುಗಿನಲ್ಲಿ ಸ್ಥಳೀಯ ನಟಯರ ಅವಕಾಶಗಳನ್ನು ಕಸಿದುಕೊಳ್ಳುತ್ತಲೇ ಬಂದಿರೋ ಕಾಜಲ್ ಇದೀಗ ಬೆಲ್ಲಮಕೊಂಡ ಶ್ರೀನಿವಾಸ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ನಾನಿ ನಿರ್ದೇಶನದ ಈ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ನಿಗಧಿಯಾಗಬೇಕಿದೆ. ಆದರೆ ನಾನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ತೆಲುಗಿನ ಅನೇಕ ನಟಿಯರು ಶತ ಪ್ರಯತ್ನ ನಡೆಸಿದ್ದರು. ಈ ರೇಸಿನಲ್ಲಿ ಹಲವಾರು ನಟಿಯರ ಹೆಸರೂ ಕೇಳಿ ಬಂದಿತ್ತು. ಆದರೆ ಕಡೆಗೂ ನಾನಿ

ಮತ್ತು ಚಿತ್ರ ತಂಡ ಕಾಜಲ್ ಅಗರ್ ವಾಲ್‌ಳನ್ನು ನಾಯಕಿಯಾಗಿ ಫಿಕ್ಸ್ ಮಾಡಿದೆ.

ಕಾಜಲ್ ಅಗರ್ ವಾಲ್ ಇದೀಗ ಬಾಲಿವುಡ್ ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾಳೆ. ಕನ್ನಡದಲ್ಲಿ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಮೇಶ್ ಅರವಿಂದ್ ನಿರ್ದೇಶನದ ಪ್ಯಾರಿಸ್ ಪ್ಯಾರಿಸ್ ಚಿತ್ರದಲ್ಲಿಯೂ ಈಕೆ ನಟಿಸುತ್ತಿದ್ದಾಳೆ. ಆದರೆ ನಿರ್ದೇಶಕ ನಾನಿ ಕಥೆ ಹೇಳಿದಾಗ ಅದರಲ್ಲಿನ ತನ್ನ ಪಾತ್ರದ ಪ್ರಾಧಾನ್ಯತೆ ಕಂಡು ಕಾಜಲ್ ಒಪ್ಪಿಕೊಂಡು ಈ ಪ್ರಾಜೆಕ್ಟಿಗೆ ಸಹಿ ಹಾಕಿದ್ದಾಳಂತೆ. ಅಂದಹಾಗೆ ಈ ಚಿತ್ರ ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿದೆ.

ಸದರಿ ಚಿತ್ರದಲ್ಲಿ ಅವಕಾಶ ಸಿಕ್ಕೀತೆಂದು ತೆಲುಗಿನ ಅನೇಕ ನಟಿಯರು ಕಾತರದಿಂದ ಕಾದು ಕೂತಿದ್ದಳು. ಆದರೆ ಕಾಜಲ್ ಅಗರ್‌ವಾಲ್ ಆ ಅವಕಾಶವನ್ನು ಅನಾಯಾಸವಾಗಿ ತನ್ನದಾಗಿಸಿಕೊಂಡಿದ್ದಾಳೆ!

Leave a Reply

Your email address will not be published. Required fields are marked *


CAPTCHA Image
Reload Image