One N Only Exclusive Cine Portal

ಅತ್ಯುತ್ತಮ ನೃತ್ಯ : ಕಲೈ ಮಾಸ್ಟರ್

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ

 

ಒಂದು ಚಿತ್ರವನ್ನು ಒಟ್ಟಾರೆಯಾಗಿ ಅಂದಗಾಣಿಸೋದರಲ್ಲಿ ನೃತ್ಯ ಬಹು ಮುಖ್ಯ ಅಂಶ. ಬಹಳಷ್ಟು ವರ್ಷಗಳಿಂದ ನೃತ್ಯ ನಿರ್ದೇಶಕರಾಗಿರುವ ಕಲೈ ಮಾಸ್ಟರ್ ಅಂಥಾ ಅದೆಷ್ಟೋ ಸಿನಿಮಾಗಳನ್ನು ನೃತ್ಯದ ಮೂಲಕವೇ ಸಿಂಗರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬಹು ಮುಖ್ಯ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರೋ ಕಲೈ ಹೊಸ ಹೊಸಾ ನೃತ್ಯಾಭಿವ್ಯಕ್ತಿಯ ಮೂಲಕ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image