One N Only Exclusive Cine Portal

ಆಸಿಫಾ ಪರವಾಗಿ ಧ್ವನಿ ಎತ್ತಿದರು ಕಮಲ್ ಹಾಸನ್!

ಜಮ್ಮು ಕಾಶ್ಮೀರದಲ್ಲಿ ದೇವಸ್ಥಾನದೊಳಗೇ ಏಳು ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ವಿಶ್ವದ ಮುಂದೆ ಭಾರತ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದೆ. ಮಕ್ಕಳನ್ನು ದೇವರೆನ್ನುತ್ತಾರಲ್ಲಾ? ಅದೇ ದೇವರನ್ನು ದೇವಸ್ಥಾನದೊಳಗೇ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ, ಗ್ಯಾಂಗ್ ರೇಪ್ ಮಾಡಿ ಕೊಂದ ದುಷ್ಟತನ ಮನುಷ್ಯತ್ವ ಇರುವ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಇದೀಗ ಖ್ಯಾತ ನಟ ಕಮಲ್ ಹಾಸನ್ ಕೂಡಾ ಈ ಹೆಣ್ಣು ಮಗುವಿನ ರೌಧ್ರ ಸಾವಿನ ವಿರುದ್ಧ ಕೆಂಡ ಕಾರಿದ್ದಾರೆ. ಈ ಮಗುವನ್ನು ಉಳಿಸಿಕೊಳ್ಳಲಾರದ ಆ ತಂದೆಯ ಬಗ್ಗೆ ಮರುಗುತ್ತಲೇ ಈ ಮಗುವಿನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡುವಂತೆ ಕಮಲ್ ಹಾಸನ್ ಆಗ್ರಹಿಸಿದ್ದಾರೆ.

ಇಂಥಾ ಘಟನೆ ಭಾರತಕ್ಕೆ ಶೋಭೆ ತರುವಂಥಾದ್ದಲ್ಲ. ನಂಬಿಕೆ ಮತ್ತು ಶ್ರದ್ಧಾ ಭಕ್ತಿಯ ಕೇಂದ್ರವಾದ ದೇವಸ್ಥಾನದೊಳಗೆ ಇಂಥಾದ್ದೊಂದು ಭೀಭತ್ಸ ಘಟನೆ ನಡೆದಿರೋದು ಆಘಾತಕಾರಿ ಎಂದಿರುವ ಕಮಲ್, ಈ ಮಗುವಿನ ಮೇಲಾಗಿರೋ ರಾಕ್ಷಸೀಯ ದೌರ್ಜನ್ಯದ ವಿರುದ್ಧ ಹೋರಾಟದಲ್ಲಿ ತಾವೂ ಭಾಗಿಯಾಗೋದಾಗಿ ಕಮಲ್ ಹೇಳಿಕೊಂಡಿದ್ದಾರೆ. ಜೊತೆಗೆ `ನೀನೂ ನನ್ನ ಮಗುವಿದ್ದಂತೆಯೇ, ಆದರೆ ನಿನ್ನನ್ನು ಉಳಿಸಿಕೊಳ್ಳಲಾಗದ ಬಗ್ಗೆ ದುಃಖವಿದೆ’ ಅಂತ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಆಸಿಫಾ ಎಂಬ ಏಳು ವರ್ಷದ ಪುಟ್ಟ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕಲ್ಲಿನಿಂದ ತಲೆ ಜಜ್ಜಿ ಕೊಂದ ಪಾಪಿಗಳಿಗೆ ನಿಜಕ್ಕೂ ಘೋರ ಶಿಕ್ಷೆಯಾಗಬೇಕಿದೆ. ದೇವರು ಧರ್ಮಗಳ ಹೆಸರಲ್ಲಿ ಇಂಥಾ ಪಾತಕ ಕೆಲಸ ಮಾಡುವವರು ಅದ್ಯಾವ ಧರ್ಮದವೇ ಆಗಿದ್ದರೂ ಸಾರ್ವಜನಿಕವಾಗಿಯೇ ಭೀಕರವಾಗಿ ಕೊಲ್ಲುವಂಥಾ ಶಿಕ್ಷೆ ವಿಧಿಸಿದರೂ ಕಡಿಮೆಯೇ. ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಮಹಾನ್ ಸಾಚಾಗಳಂತೆ ಪೋಸು ಕೊಡುವ ನರಸತ್ತ ಆಳುವ ಮಂದಿ ಅತ್ಯಾಚಾರಿಗಳ ಸಪೋರ್ಟಿಗೆ ನಿಂತಿರೋದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿರುವ ಘೋರ ಅನ್ಯಾಯ!

Leave a Reply

Your email address will not be published. Required fields are marked *


CAPTCHA Image
Reload Image