One N Only Exclusive Cine Portal

ಸಂಬಂಧಗಳ ವಿಚಾರದಲ್ಲಿ ಕಂಗನಾ ನಸೀಬು ಖರಾಬಂತೆ!

ಬಾಲಿವುಡ್‌ನಲ್ಲಿ ಬಿಂದಾಸ್ ಮನಸ್ಥಿತಿಯಿಂದಲೇ ಗಮನ ಸೆಳೆಯುತ್ತಾ, ಆ ಕಾರಣದಿಂದಲೇ ಆಗಾಗ ಸದ್ದು ಮಾಡುತ್ತಾ ಬಂದಿರುವಾಕೆ ಕಂಗನಾ ರನೌತ್. ಬಿಂದಾಸ್ ಆಗಿರುವಂಥಾ ಪಾತ್ರಗಳನ್ನೆ ಮಾಡುತ್ತಾ ಬಂದಿರೋ ಈಕೆಯೀಗ ‘ಮನಿಕರ್ಣಿಕಾ ಚಿತ್ರದ ಝಾನ್ಸಿರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಬ್ಯುಸಿಯಾಗಿದ್ದಾಳೆ.

Image result for kangana ranaut angry

ಇಂಥಾ ಕಂಗನಾ ರನೌತ್ ತನ್ನ ಖಾಸಗೀ ಜೀವನದ ಬಗ್ಗೆ ಹೇಳಿಕೊಂಡಿರೋ ಒಂದು ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದಿನ ಹಾಗೂ ಒಟ್ಟಾರೆ ಸಂಬಂಧಗಳ ವಿಚಾರದಲ್ಲಿ ತನ್ನ ನಸೀಬು ಖರಾಬಾಗಿದೆ ಎಂಬರ್ಥದಲ್ಲಿ ಕಂಗನಾ ಹೇಳಿಕೊಂಡಿದ್ದಾಳೆ.

Related image

ಈಕೆ ಇಂಥಾದ್ದೊಂದು ಹೇಳಿಕೆ ಕೊಟ್ಟಿರೋದು ಕರಣ್ ಜೋಹರ್ ನಡೆಸಿ ಕೊಡುವ ಟಿವಿ ಶೋ ಒಂದರಲ್ಲಿ. ಈ ಶೋದಲ್ಲಿ ಮೂಡಿಯಂತೆ ಪಾಲ್ಗೊಂಡು, ಕರಣ್ ಕೇಳಿದ ಕೀಟಲೆ ಪ್ರಶ್ನೆಗಳಿಗೆಲ್ಲ ಬುದ್ಧಿವಂತಿಕೆಯಿಂದಲೇ ಉತ್ತರಿಸಿದ್ದ ಕಂಗನಾ ಸಂಬಂಧಗಳ ವಿಚಾರದಲ್ಲಿ ತಾನು ಪಕ್ಕಾ ಅನ್‌ಲಕ್ಕಿ ಅಂದಿದ್ದಾಳೆ.

Image result for kangana ranaut angry

ಈ ಮಾತು ಹೊರ ಬರಲು ಈ ಹಿಂದೆ ಕಂಗನಾ ಬಾಲಿವುಡ್ ನಟನೋರ್ವನ ಜೊತೆ ಹೊಂದಿದ್ದ ಅಫೇರ್ ಮತ್ತು ಇತ್ತೀಚೆಗದು ಮುರಿದು ಬಿದ್ದಿದ್ದೇ ಮೂಲ ಕಾರಣ ಎಂಬರ್ಥದಲ್ಲಿ ಬಾಲಿವುಡ್ ತುಂಬಾ ಗುಲ್ಲೆದ್ದಿದೆ. ಕಂಗನಾ ಅಭಿಮಾನಿ ವಲಯದಲ್ಲಿಯೂ ಈ ವಿಚಾರದ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ.

Image result for kangana hot

ಕಂಗನಾ ಅಭಿನಯಿಸುತ್ತಿರೋ ಮಣಿಕರ್ಣಿಕಾ ಚಿತ್ರ ಸದ್ಯ ಅಂತಿಮ ಹಂತ ತಲುಪಿಕೊಂಡಿದೆ. ಈ ಹಿಂದೆ ಈ ಚಿತ್ರ ಹೊತ್ತಿಸಿದ್ದ ವಿವಾದದ ಕಾವು ಇದೀಗ ಆರಿಕೊಂಡಿದ್ದರೂ ಇಷ್ಟರಲ್ಲಿಯೇ ಪದ್ಮಾವತಿ ಚಿತ್ರದಂಥಾದ್ದೇ ರಾಡಿಯೊಂದು ಮಣಿಕರ್ಣೀಕಾ ವಿಚಾದಲ್ಲಿಯೂ ಉತ್ಪತ್ತಿಯಾಗೋ ಎಲ್ಲ ಲಕ್ಷಣಗಳೂ ಇದ್ದಾವೆ!

 

,

Leave a Reply

Your email address will not be published. Required fields are marked *


CAPTCHA Image
Reload Image