One N Only Exclusive Cine Portal

ಉದಯ ಟಿವಿ ಯಲ್ಲಿ ಹೊಸ ಧಾರಾವಾಹಿ ಕಣ್ಮಣಿ

ಮಾರ್ಚ 19ರಿಂದ ಸೋಮವಾರದಿಂದ ಶುಕ್ರವಾರರಾತ್ರಿ10.00ಕ್ಕೆ

ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ ೨೩ ವರ್ಷಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವಉದಯ ಟಿವಿ ಈಗಾಗಲೇ ಜನಮನಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲುಉದಯ ಟಿವಿ ಸಜ್ಜಾಗಿದೆ. ಒಂದುರೋಮಾಂಚಕ ಪ್ರೇಮಕಥೆಯಾದಕಣ್ಮಣಿ ಮಾರ್ಚ್ ೧೯ರಿಂದ ಸೋಮವಾರದಿಂದ ಶುಕ್ರವಾರರಾತ್ರಿ೧೦:೦೦ಕ್ಕೆ ಪ್ರಸಾರವಾಗಲಿದೆ.
ಕಣ್ಮಣಿ ಒಂದುರೋಮಾಂಚಕ, ತ್ರಿಕೋನ ಪ್ರೇಮಕಥೆ. ಹೆಸರೇ ಹೇಳುವಂತೆ ಇದುಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿಕೇಂದ್ರಿತಧಾರಾವಾಹಿ. ತನಗೆಇರೋ ಸಮಸ್ಯೆಗಳ ನಡುವೆಎಲ್ಲರಿಗೂ ಪ್ರೀತಿ ಹಂಚಿಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿಅಂಜಲಿ. ತನ್ನಜೀವನದಲ್ಲಿ ನಡೆದಅಹಿತಕರಘಟನೆಯಿಂದ ನೊಂದ ನಾಯಕಿತನ್ನ ಹೊಸ ಬದುಕು ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆಎದುರಾಗುವ ವ್ಯಕ್ತಿಗಳನ್ನು, ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಅನ್ನುವುದೇ ಈ ಕಥೆಯ ತಿರುಳು.
ಕೋಟ್ಯಾಂತರರೂಪಾಯಿ ಆಸ್ತಿ ಇರುವಒಬ್ಬಕಡಕ್ ಬಿಸಿನೆಸ್‌ಮ್ಯಾನ್ ದ್ವಾರಕನಾಥ್‌ಅಲಿಯಾಸ್‌ಡಿ.ಕೆ. ತಾನುತಪ್ಪು ಮಾಡಲ್ಲ, ತಪ್ಪು ಮಾಡಿದವರನ್ನೂ ಬಿಡಲ್ಲ ಅನ್ನೋದು ಇವನ ಘೋಷವಾಕ್ಯ. ಹೆಂಡತಿಕಾವ್ಯ ಸತ್ತು ನಾಲ್ಕು ವರ್ಷಗಳಾದರೂ ಇನ್ನೊಂದು ಮದುವೆಯಾಗದೆ ಅವಳ ನೆನಪಲ್ಲಿಇರೋಅಮರ ಪ್ರೇಮಿ. ಮಡದಿ ಮುಮತಾಜ್‌ಗಾಗಿ ಶಹಜಾನ್‌ತಾಜ್ ಮಹಲ್ ಕಟ್ಟಿಸಿದ್ರೆ, ಡಿಕೆ ಹೆಂಡತಿ ಮೇಲಿನ ಪ್ರೀತಿಗೆಕಾವ್ಯ ಮಹಲ್ ಕಟ್ಟಿಸಿ ಇತಿಹಾಸ ಸೃಷ್ಟಿಸಲು ಹೊರಟವನು. ಅದಕ್ಕಾಗಿ ಏನೂ ಬೇಕಾದ್ರೂ ಮಾಡಲು ಸಿದ್ಧ ಇವನು. ಮುಂದೊಂದು ದಿನ ತನ್ನ ಹೆಂಡತಿಯ ರೂಪವುಳ್ಳ ಹುಡುಗಿಯೊಬ್ಬಳು ಇವನಿಗೆ ಎದುರಾಗುತ್ತಾಳೆ. ಅವಳು ಅವನ ಹೆಂಡಿತಿಯೇ, ಸತ್ತಿರುವವಳು ಎದುರಿಗೆ ಬರಲು ಹೇಗೆ ಸಾಧ್ಯಾ? ಅಥವಾ ಅವಳೇ ಬೇರೆನಾ? ಇದು ಇವನ ಕಥೆ.
ಕಣ್ಮಣಿಯಇನ್ನೊಬ್ಬ ನಾಯಕಕಿಶನ್. ತುಂಬುಕುಟುಂಬದಲ್ಲಿ ಬೆಳದಿರೋ ಇವನು ಸಂಸ್ಕಾರವಂತನೂ, ತುಂಟನೂ ಹೌದು. ಸ್ವಂತಃ ಕಂಪನಿ ಇದ್ರೂ ಪ್ರೀತಿಗಾಗಿ ಕೂಲಿ ಕೆಲಸ ಮಾಡೋಕು ಸಿದ್ಧ. ನಾಯಕಿಯ ಒಳ್ಳೆತನಕ್ಕೆ ಮನಸೋಲುವಕಿಶನ್ ಅವಳ ಮುಂದೆ ಪ್ರೇಮ ಭಿಕ್ಷೆ ಬೇಡುತ್ತಾನೆ. ನಾಯಕಿತನ್ನಜೀವನದಲ್ಲಿ ನಡೆದಘಟನೆ ಹೇಳಿ ಅವನಿಂದದೂರ ಹೋಗ್ತಾಳೆ. ಕಿಶನ್‌ತನ್ನ ಪ್ರೀತಿಯನ್ನ ಹೇಗೆ ಪಡೆಯುತ್ತಾನೆ, ನಾಯಕಿ ಅವನಿಗೆ ಸಿಗುತ್ತಾಳಾ? ಅನ್ನೋದು ಇವನ ಕಥೆ.
ಪ್ರತೀ ಸಂಚಿಕೆಯಲ್ಲೂಕುತುಹಲಕಾರಿ ತಿರುವುಗಳನ್ನು ಹೊಂದಿದ್ದು, ಡಿಕೆ, ಅಂಜಲಿ, ಕಿಶನ್ ಈ ಮೂವರ ನಡುವೆ ನಡೆಯುವರೋಮಾಂಚಕ ಪ್ರೇಮಕಥೆಯೇಕಣ್ಮಣಿ. ಇಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮದೇಆದಔಚಿತ್ಯವನ್ನು ಹೊಂದಿರುವುದು ಈ ಕಥೆಯ ವಿಶೇಷ.
ಕಣ್ಮಣಿ ಪಾರಿಜಾತಟೆಲಿ ಎಂಟರ್‌ಟ್ರೆನರ್‍ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಚಿತ್ರಕಥೆದೇವ್, ವೆಂಕಟ್‌ರಾಮ್‌ಅವರದ್ದು, ಸಂಭಾಷಣೆರೂಪಾ ಪ್ರಭಾಕರ್, ಎಸ್. ಎಂ.ಪಾಟೀಲ್, ರಾಜಶೇಖರ್ ಬರೆಯುತ್ತಿದ್ದಾರೆ. ನಿರ್ದೇಶಕ ಪೃಥ್ವಿರಾಜ್‌ಕುಲ್‌ಕರ್ಣಿಅವರು ನಿರ್ದೇಶಿಸುತ್ತಿದ್ದು, ಜೀವಅವರುಛಾಯಾಗ್ರಹಣಜವಾಬ್ದಾರಿ ಹೊತ್ತಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ದಿವ್ಯಾ ಶೈಲೇಶ್ ನಾಯಕಿಅಂಜಲಿ ಪಾತ್ರ ನಿಭಾಯಿಸುತ್ತಿದ್ದಾರೆ, ಕಿರುತೆರೆಗೆಈಗತಾನೆಕಾಲಿಟ್ಟದರ್ಶಕ್‌ಗೌಡ ‘ಡಿ.ಕೆ’ ಪಾತ್ರ ಹಾಗೂ ಇನ್ನೊಬ್ಬ ನಾಯಕ ‘ಕಿಶನ್’ ಪಾತ್ರವನ್ನು ನಂದೀಶ್‌ಅಂದಗಾರ ಮಾಡುತ್ತಿದ್ದಾರೆ. ಬೆಂಗಳೂರು ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ, ನಾಯಕ್, ಸುಜಾತ, ಬೇಬಿ ಶ್ರೀಲಕ್ಷ್ಮಿ, ಸಿಂಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ತಾರಾಬಳಗವೂ ಶಕ್ತವಾಗಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ನಿರೀಕ್ಷಿತ ಫಲಿತಾಂಶವೇ ಬಂದಿದ್ದು, ಕನ್ನಡಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸಧಾರಾವಾಹಿ ತಂಡದ್ದು. ಹಾಗೆ ಕಣ್ಮಣಿಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಸುಕನ್ಯಾ ಹಾಸನ್ ಬರೆದಿದ್ದು, ಶ್ರೀಧರ್ ಸಂಭ್ರಮ್, ಹಿತನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ತ್ರಿಕೋನಕಥೆಯ ಕಣ್ಮಣಿ ಇದೇ ಮಾರ್ಚ್ ೧೯ರಿಂದ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ ೧೦.೦೦ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image