One N Only Exclusive Cine Portal

ಈವಾರ ನಗಿಸಲು ಬರ್‍ತಿದಾರೆ ಕಂತ್ರಿಬಾಯ್ಸ್

ಟೆರಾಯನ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರ “ಕಂತ್ರಿ ಬಾಯ್ಸ್” ಈವಾರ ಬಿಡುಗಡೆಯಾಗುತ್ತಿದೆ. ವೆಂಕಟ್ ಗೌಡ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಕಿರುತೆರೆಯ ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಕಾಮಿಡಿ ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ರಾಜು ಚಟ್ನಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಸಿ ಹೇಮಂತ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ ರಿಲೀಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಜು ಚಟ್ನಳ್ಳಿ ಇದೊಂದು ಸಪೂರ್ಣ ಹಾಸ್ಯ ಚಿತ್ರ. ಹಿಂದೆ ನಾನು ಕಾಮಿಡಿ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದು ಈ ಚಿತ್ರಕ್ಕೆ ಅನುಕೂಲಕರವಾಯಿತು. ಚಿತ್ರದ ಪ್ರತಿ ಸೀನ್ ಕಾಮಿಡಿಯಾಗಿದೆ. ಹೆಣ್ಣನ್ನು ಒಳ್ಳೇ ರೀತಿಯಲ್ಲಿ ನೋಡ ಎನ್ನುವುದೇ ನಮ್ಮ ಉದ್ದೇಶ. ಯಾವುದೋ ಕಾರಣಕ್ಕಾಗಿ ಪರಿಸ್ಥಿತಿಗೆ ಸಿಲುಕಿ ತಪ್ಪುದಾರಿ ಹಿಡಿದಿರುತ್ತಾರೆ. ಇಂಥವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಅಬೀನಯಿಸಿರುವವರು ಯಾರೂ ಹೊಸಬರ ಹಾಗೆ ಕಾಣುವುದಿಲ್ಲ. ಗಡ್ಡಪ್ಪ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದಾರೆ. ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದಾರೆ ಎಂದು ಹೇಳಿದರು. ನಂತರ ಚಿತ್ರದ ನಿರ್ಮಾಪಕ ಎಂ.ಸಿ. ಹೇಮಂತ ಗೌಡ ಮಾತನಾಡುತ್ತ ಈವರೆಗೆ ಚಿತ್ರರಂಗದಲ್ಲಿ ನಾನೂ ನಟನೆ, ಸಹನಿರ್ದೇಶನ ಅಂತ ತೊಡಗಿದ್ದೆ. ಈ ನಿರ್ದೇಶಕರು ಮಾಡಿದ್ದ ಕಥೆ ತುಂಬಾ ಇಷ್ಟವಾಯಿತು. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಜನರಿಗೆಖಂಡಿತ ಉತ್ತಮ ಮನರಂಜನೆ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು. ವಿತರಕ ವೆಂಕಟ ಗೌಟ ಮಾತನಾಡಿ ನಾನು ಒಂದೆರಡು ಚಿನಿಮಾ ರಿಲೀಸ್ ಮಾಡಿದ್ದೆ. ಸ್ವಂತ ಆಫೀಸ್ ಮಾಡಿದ ಮೇಲೆ ರಿಲೀಸ್ ಮಾಡುತ್ತಿರುವ ಮೊದಲ ಚಿತ್ರವಿದು. ಈವರೆಗೆ ೭೫ರಿಂದ ೮೦ ಚಿತ್ರಮಂದಿರಗಳು ಕನ್‌ಫರ್ಮ್ ಆಗಿವೆ. ಹತ್ತರಿಂದ ಹದಿನೈದು ಮಲ್ಟಿಪ್ಲೆಕ್ಸ್ ಕೂಡ ಸಿಕ್ಕಿವೆ, ಒಳ್ಳೇ ಸಿನಿಮಾ ಮಾಡಿದ್ದಾರೆ. ನನಗೂ ತುಂಬಾ ಇಷ್ಟವಾಯಿತು ಎಂದು ಹೇಳಿದರು.


‘ತಿಥಿ’ ಖ್ಯಾತಿಯ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರನ್ನು ಬಳಸಿಕೊಂಡು ಕಂತ್ರಿಬಾಯ್ಸ್ ಚಿತ್ರವನ್ನು ನಿರ್ದೇಶಕ ರಾಜು ಚಟ್ನಳ್ಳಿ ನಿರೂಪಿಸಿದ್ದಾರೆ. ಮರ್ಡರಿ ಮಿಸ್ಟ್ರಿಯ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಅನಿವಾರ್ಯ ಕಾರಣಕ್ಕೆ ವೈಶ್ಯಾವೃತ್ತಿಗೆ ಇಳಿಯಲು ಬರೀ ಹೆಣ್ಣಿನದಷ್ಟೇ ತಪ್ಪು ಇರುವುದಿಲ್ಲ ಬದಲಾಗಿ ಪುರುಷನದು ಇರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿ ಮತ್ತು ಕಾರಣಗಳನ್ನು
ಕಂತ್ರಿಬಾಯ್ಸ್ ಮಾಡುವ ಕಂತ್ರಿ ಕಂತ್ರಿ ಕೆಲಸಗಳು ಮತ್ತು ಅದರಿಂದ ಸಮಾಜಕ್ಕೆ ಅಗುವ ಒಳ್ಳೆಯ ಕೆಲಸದ ಸುತ್ತಾ ಈ ಚಿತ್ರದ ಕಥೆ ಸಾಗಲಿದೆ. ನಟ ಅರವಿಂದ್ ಮಾತನಾಡಿ ಇದು ನನ್ನ ಮೂರನೇ ಚಿತ್ರ. ಉದಾಸೀನತೆಯಿಂದ ಇರುವ ಹುಡುಗನಾಗಿ ಅಭಿನಯಿಸಿದ್ದೇಬೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ನಟಿಯರಾದ ಸಂಧ್ಯಾ, ಅನಕ, ಬಸಂತಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಹೇಮಂತ್ ಗೌಡ, ಜೋಕರ್ ಹನುಮಂತ್, ಹೇಮಂತ್ ಸೂರ್ಯ, ದರ್ಶನ್ ರಾಜ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೇಮಂತ್ ಗೌಡ ಅವರ ಜೊತೆ ನಿರ್ಮಾಣದಲ್ಲಿ ಎಂ.ಸಿ. ರೇಣುಕ, ಮೋಹನ್ ಕೆ. ಕೃಷ್ಣಮೂರ್ತಿ ಎಂ, ಶ್ರೀಧರ್‌ರಾಜು, ದರ್ಶನ್‌ರಾಜ್ ಕೈಜೋಡಿಸಿದ್ದಾರೆ. ಪಿ.ವಿ ಅರ್. ಸ್ವಾಮಿ ಅವರ ಛಾಯಾಗ್ರಹಣ, ಕಿರಣ್ ಮಹದೇವ್ ಅವರ ಸಂಗೀತ ಸಂಯೋಜನೆ, ಡಿ. ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *


CAPTCHA Image
Reload Image