Connect with us

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಧ್ವನಿಸುರುಳಿ ಬಿಡುಗಡೆ ನೆಪದಲ್ಲಿ ನೆನಪುಗಳು ಸರಿದಾಗ…

Published

on

ಧನಂಜಯ್ ಅತ್ರೆ ನಿರ್ಮಾಣ ಮಾಡಿ ಮೊದಲ ಸಲ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ಹೆಸರಲ್ಲಿಯೇ ಮಾಸ್ ಅಂಶಗಳನ್ನು ಧ್ವನಿಸೋ ಈ ಚಿತ್ರದ ಧ್ವನಿ ಸುರುಳಿಯನ್ನು ಧೀರ ರಾಕ್‌ಲೈನ್ ವೆಂಕಟೇಶ್ ಬಿಡುಗಡೆಗೊಳಿಸಿದ್ದಾರೆ. ಧನಂಜಯ್ ಅವರ ಇಷ್ಟೂ ವರ್ಷಗಳ ಬಣ್ಣದ ನಂಟಿನ ಹಾದಿಯಲ್ಲಿ ಅವರಿಗೆ ಸದಾ ಬೆಂಬಲಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದ್ದ ರಾಕ್‌ಲೈನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸೋ ಮೂಲಕ ಧನಂಜಯ್ ಅವರ ಸಾಹಸಕ್ಕೆ ಗೆಲುವಾಗಲೆಂದು ಹಾರೈಸಿದ್ದಾರೆ.

ಈ ಚಿತ್ರದ ಮೂಲಕವೇ ಗಾಯಕರಾಗಿ ಹೆಸರು ಮಾಡಿದ್ದ ಹೇಮಂತ್ ಸಂಗೀತ ನಿರ್ದೇಶಕರಾಗಿಯೂ ಭಡ್ತಿ ಹೊಂದಿದ್ದಾರೆ. ವಿಶೇಷವೆಂದರೆ, ಹೇಮಂತ್ ಎಂಬ ಪ್ರತಿಭೆ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿನ ಮೂಲಕ ಖ್ಯಾತರಾಗುವಂತೆ ಮಾಡಿದ್ದೇ ರಾಕ್ ಲೈನ್ ವೆಂಕಟೇಶ್. ಹೇಮಂತ್ ಕಂಠ ಟ್ರ್ಯಾಕ್‌ನಲ್ಲಿಯೇ ಲೀನವಾಗೋದನ್ನು ತಪ್ಪಿಸಿ ಆ ಹಾಡು ಅವರ ಧ್ವನಿಯಲ್ಲಿಯೇ ಮೂಡಿ ಬರುವಂತೆ ಕಾಳಜಿ ವಹಿಸಿದ್ದವರೂ ಇದೇ ರಾಕ್‌ಲೈನ್. ಇದೀಗ ಹೇಮಂತ್ ಮೊದಲ ಸಲ ಸಂಗೀತ ನೀಡಿರುವ ಕರ್ಷಣಂ ಚಿತ್ರದ ಹಾಡೂ ಕೂಡಾ ಅವರಿಂದಲೇ ಬಿಡುಗಡೆಯಾಗಿದೆ!

ಧ್ವನಿ ಸುರುಳಿ ಬಿಡುಗಡೆಯ ಮೂಲಕ ಒಂದು ಮಹತ್ವದ ಘಟ್ಟ ತಲುಪಿಕೊಂಡ ಖುಷಿಯಲ್ಲಿಯೇ ಧನಂಜಯ ಅತ್ರೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮತ್ತು ತಮ್ಮ ನಡುವಿನ ಆತ್ಮೀಯತೆಯನ್ನು ಹೇಳುತ್ತಲೇ ಕರ್ಷಣಂ ಚಿತ್ರ ರೂಪುಗೊಂಡಿದ್ದರ ಹಿಂದಿನ ಹಲವಾರು ವರ್ಷಗಳ ಕಥೆಯನ್ನೂ ಬಿಚ್ಚಿಟ್ಟಿದ್ದಾರೆ. ಧನಂಜಯ್ ಚಿತ್ರಲೇಖ ಎಂಬ ಧಾರಾವಾಹಿಯ ಮುಖ್ಯ ಪಾತ್ರಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕಂತುಗಳಲ್ಲಿ ನಟಿಸಿದ್ದವರು. ಆ ಮೂಲಕವೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದ ಅವರ ಕನಸಾಗಿದ್ದದ್ದು ಸಿನಿಮಾ!

ಹೇಗಾದರೂ ಸಿನಿಮಾ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮೊದಲ ಸಲ ಅವರು ಅವಕಾಶ ಕೇಳಿದ್ದು ರಾಕ್‌ಲೈನ್ ವೆಂಕಟೇಶ್ ಅವರ ಮುಂದೆ. ಅದಕ್ಕೆ ಪ್ರೋತ್ಸಾಹಿಸಿದ್ದ ಅವರು ತಾವು ನಿರ್ಮಾಣ ಮಾಡಿದ್ದ ಒಂದಷ್ಟು ಚಿತ್ರಗಳಲ್ಲಿ ಅವಕಾಶ ಕಲ್ಪಿಸಿದ್ದರಂತೆ. ಆದರೆ ವರ್ಷಗಳ ನಂತರ ಚಿತ್ರವೊಂದನ್ನು ನಿರ್ಮಾಣ ಮಾಡೋದಾಗಿ ಧನಂಜಯ ಹೇಳಿದಾಗ ಒಂದಷ್ಟು ಸಲಹೆ, ಬುದ್ಧಿಮಾತುಗಳನ್ನೂ ಹೇಳಿದ್ದರಂತೆ. ಅದರನ್ವಯ ಎರಡು ವರ್ಷ ತನ್ನ ಬ್ಯುಸಿನೆಸ್ ತಳಪಾಯ ಗಟ್ಟಿಗೊಳಿಸಿಕೊಂಡ ಧನಂಜಯ್ ಎಲ್ಲ ಪ್ಲ್ಯಾನಿನೊಂದಿಗೆ ರಾಕ್‌ಲೈನ್ ಮುಂದೆ ನಿಂತಾಗ ಅದನ್ನೆಲ್ಲ ಪರಿಶೀಲಿಸಿದ ನಂತರವೇ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ.

ಹಾಗೆ ವರ್ಷಾಂತರಗಳ ಕಾಲ ಕನಸು ಕಂಡು, ಕಷ್ಟಪಟ್ಟು ದುಡಿದ ಕಾಸು ಸುರಿದು ಮಾಡಿರೋ ಚಿತ್ರ ಕರ್ಷಣಂ. ಇದೀಗ ಈ ಶ್ರಮದ ಬೆವರೆಲ್ಲವೂ ಹಾಡಾಗಿದೆ. ಅಶ್ವಿನಿ ಸಂಸ್ಥೆಯ ಮೂಲಕ ಇದರ ಹಾಡುಗಳು ರೂಪುಗೊಂಡಿವೆ. ಹಾಡುಗಳೆಲ್ಲವೂ ಚೆನ್ನಾಗಿಯೂ ಇವೆ. ಇದುವರೆಗೂ ಪ್ರೇಕ್ಷಕರ ನಡುವೆ ಒಂದು ಬಿಸಿಯನ್ನು ಕಾಯ್ದಿಟ್ಟುಕೊಂಡೇ ಬಂದಿರುವ ಈ ಚಿತ್ರ ಹಾಡುಗಳ ಮೂಲಕ ಮತ್ತೆ ಸದ್ದೆಬ್ಬಿಸಿದೆ.

ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶರವಣ ಮಾತನಾಡುತ್ತ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ನಮ್ಮ ಗುರಿಯ ಸಾಧನೆಗೆ ಇನ್ನೊಬ್ಬರನ್ನು ತುಳಿದುಕೊಂಡು ಹೋಗಬಾರದು. ಅದರಿಂದ ನಾವು ಪಡೆದುಕೊಳ್ಳುವುದಕ್ಕಿಂತ ಅವರು ಕಳೆದುಕೊಳ್ಳುವುದೇ ಹೆಚ್ಚು. ಅದನ್ನೇ ಒಂದು ಥ್ರಿಲ್ಲರ್ ಕಥೆಯ ಮೂಲಕ ಹೇಳಿದ್ದೇವೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಹೇಮಂತ್ ಮಾತನಾಡುತ್ತ ನಾನಿಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ರಾಕ್‌ಲೈನ್ ವೆಂಕಟೇಶ್‌ರವರೇ ಕಾರಣ. ‘ನನ್ನನ್ನು ಪ್ರೀತ್ಸೆ’ ಹಾಡಿನ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟರು. ಈಗ ನನ್ನ ಸಂಗೀತದ ಹಾಡುಗಳನ್ನೂ ಕೂಡ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಅವರದು ಲಕ್ಕಿ ಹ್ಯಾಂಡ್ ಎಂದು ಹೇಳಿದರು. ಈ ಚಿತ್ರದ ನಾಯಕಿಯಾಗಿ ಅನುಷ್ಕಾರೈ ಅಭಿನಯಿಸಿದ್ದು ತನ್ನ ಪಾತ್ರದ ಬಗ್ಗೆ ಮಾತನಾಡಿದ ಅವರು ಮಹಾನುಭವರು ಹಾಗೂ ಪ್ರಾರ್ಥನಾ ಚಿತ್ರಗಳ ನಂತರ ಇದು ನನ್ನ ಮೂರನೇ ಚಿತ್ರ. ಒಬ್ಬ ಜರ್ನಲಿಸ್ಟ್ ಆಗಿ ನಾನೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ತುಂಬ ತೂಕ ಇರುವ ಪಾತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ೪ ಹಾಡುಗಳಿದ್ದು ನಾಗೇಂದ್ರ ಪ್ರಸಾದ್ ಹಾಗೂ ಮನು ಸಾಹಿತ್ಯ ರಚಿಸಿದ್ದಾರೆ. ಹೇಮಂತ್ ಅನುರಾಧಾ ಭಟ್, ಶಶಾಂಕ್ ಶೇಷಗಿರಿ ಹಾಡುಗಳಿಗೆ ದನಿಯಾಗಿದ್ದಾರೆ. ಮೋಹನ್ ಎಂ ಮುಗುಡೇಶ್ವರನ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!

Published

on

ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ!

ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ!

ಇದು ನಿಜಕ್ಕೂ ದಾಖಲೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳ ಕೆಜಿಎಫ್ ಆಡಿಯೋ ಹಕ್ಕನ್ನು ಈ ಪಾಟಿ ದೊಡ್ಡ ಮೊತ್ತಕ್ಕೆ ಖರೀದಿಸೋ ಮೂಲಕ ಲಹರಿ ಸಂಸ್ಥೆ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಖದರು ತಂದು ಕೊಟ್ಟಿರೋದಂತೂ ಸತ್ಯ.

ಈ ಮೂಲಕ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ.

ಕೆಜಿಎಫ್ ಚಿತ್ರದ ಟೀಸರ್‌ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ವೀರಾಧಿವೀರ ಸಿನಿಮಾದ ಹಾಡುಗಳ ಧ್ವನಿಸುರುಳಿ ಬಿಡುಗಡೆ

Published

on

ಇಷ್ಟಾರ್ಥ, ಗಾಯಿತ್ರಿ, ಚಿತ್ರಗಳನ್ನು ನಿರ್ದೇಶಿಸಿದ್ದ, ಸತ್ಯ ಸಾಮ್ರಾಟ್‌ರವರ ನಿರ್ದೇಶನದ ಮೂರನೇ ಚಿತ್ರ ವೀರಾಧಿವೀರ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ನಡೆಸುತ್ತಿರುವ ವಿಜಯಾನಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸ್ಮೈಲ್ ಶಿವು, ಅಶ್ವಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಿರ್ಮಾಪಕ ವಿಜಯಾನಂದ ನಾಯಕಿಯ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಲಹರಿ ಸಂಸ್ಥೆ ಈ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿರ್ದೇಶಕ ಸತ್ಯಸಾಮ್ರಾಟ್ ಮಾತಾನಾಡಿ ಗಾಯಿತ್ರಿ ಎಂಬ ಹಾರರ್ ಚಿತ್ರದ ನಂತರ ಪಕ್ಕ ಹಳ್ಳಿ ಸೊಗಡಿನ ಲವ್ ಸ್ಟೋರಿ ಮಾಡಬೇಕೆಂದು ಈ ಚಿತ್ರ ಕೈಗೆತ್ತಿಕೊಂಡೆ, ಈ ಸಿನಿಮಾ ಆರಂಭವಾಗಲು ಕಾರಣ ಸ್ಮೈಲ್ ಶಿವು ಗಾಯಿತ್ರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಬೆಂಗಳೂರು, ಸಕಲೇಶಪುರ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ನಾಯಕನ ಪಾತ್ರಕ್ಕೆ ೩ ಶೇಡ್ ಇದೆ, ಕಳ್ಳ, ಪ್ರೇಮಿ ಹಾಗೂ ಅಘೋರಿಯಾಗಿ ನಾಯಕ ಕಾಣಿಸಿಕೊಂಡಿದ್ದಾರೆ. ನಾನು ಹಿಂದಿನಿಂದಲೂ ವಿಷ್ಣು ಅವರ ಅಭಿಮಾನಿ ಹಾಗಾಗಿ ಈ ಚಿತ್ರದ ಕಥೆಗೆ ಸೂಟ್ ಆಗುತ್ತೆ ಎಂದು ವೀರಾಧಿವೀರ ಟೈಟಲ್ ಇಟ್ಟಿದ್ದೇನೆ.

ನಾಯಕ ಬದುಕಿಗೋಸ್ಕರ ಕಳ್ಳತನ ಮಾಡಿಕೊಂಡಿರುತ್ತಾನೆ. ಒಬ್ಬ ಹುಡುಗಿಯ ಮೇಲೆ ಲವ್ ಆಗುತ್ತದೆ. ಅವರ ಪ್ರೀತಿಗೆ ಏನೆಲ್ಲಾ ಅಡೆತಡೆಗಳುಂಟಾದವು ಎಂಬುವುದೇ ಈ ಚಿತ್ರದ ಕಥೆ. ಇಡೀ ಸಿನಿಮಾದಲ್ಲಿ ಹಳ್ಳಿ ಸೊಗಡಿನ ಕಥೆ ಇದೆ ಎಂದು ಹೇಳಿದರು.

ನಿರ್ಮಾಪಕರಾದ ವಿಜಯಾನಂದ ಮಾತಾನಾಡಿ ನಾನು ಕೂಡ ವಿಷ್ಣುವರ್ಧನ ಅವರ ಅಭಿಮಾನಿ ನಾಯಕಿಯ ತಂದೆ ಹಾಗೂ ವಿಲನ್ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ. ನಾಯಕಿ ಅಶ್ವಿನಿ ಮಾತಾನಾಡಿ ಹಿಂದೆ ರೋಜಾ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದೆ ಹಳ್ಳಿ ಹುಡುಗಿ ಹಾಗೂ ಬಜಾರಿ ತರಹದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದು ಹೇಳಿದರು. ನಾಯಕ ಶಿವು ಮಾತಾನಾಡಿ 12 ವರ್ಷಗಳಿಂದ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೆ, ಗಾಯಿತ್ರಿ ಚಿತ್ರದ ನಂತರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಒಬ್ಬ ಕಳ್ಳನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ ಕೊನೆಗೆ ಅಘೋರಿಯಾಗುತ್ತೇನೆ ಎಂದು ಹೇಳಿದರು.

ಮತ್ತೊಬ್ಬ ನಟ ಪಳನಿ ಮಾತಾನಾಡಿ ನಾನು ನಾಯಕ ಮಾವನ ರೋಲ್ ಮಾಡಿದ್ದು, ಆತನ ಕಳ್ಳತನಕ್ಕೆ ಐಡಿಯಾ ಹೇಳಿಕೊಡುತ್ತೇನೆ ಎಂದು ಹೇಳಿದರು. ಲಹರಿ ವೇಲು ಮಾತಾನಾಡಿ ಈ ಚಿತ್ರದಲ್ಲಿರುವ ನಾಲ್ಕು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು.

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಬರಲಿದೆ ನಟೋರಿಯಸ್ ಲೇಡಿಯ ಭಯಾನಕ ಟೀಸರ್!

Published

on

ವರ್ಷಾಂತರಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಲೇಡಿ ಸೀರಿಯಲ್ ಕಿಲ್ಲರ್ ಕೆ.ಡಿ ಕೆಂಪಮ್ಮ. ಒಂದೊಂದೂರಿನಲ್ಲಿ ಒಂದೊಂದು ಹೆಸರಿನಿಂದ ಕಾಣಿಸಿಕೊಳ್ಳುತ್ತಿದ್ದ ಈಕೆಯ ಟಾರ್ಗೆಟ್ ಮಹಿಳೆಯರೇ. ಸೈನೈಡ್ ಮೂಲಕ ಮಹಿಳೆಯರನ್ನು ಕೊಂದು ಚಿನ್ನಾಭರಣ ದೋಚುತ್ತಿದ್ದ ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಪಡೆದಿದ್ದಾಳೆ.

ಇದೀಗ ಜೈಲುವಾಸಿಯಾಗಿರೋ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾಳ ರೌದs ಕಥೆ ಚಿತ್ರವಾಗುತ್ತಿದೆ. ಅದಕ್ಕೆ ಸೈನೈಡ್ ಮಲ್ಲಿಕಾ ಎಂದೇ ಟೈಟಲ್ ಇಡಲಾಗಿದೆ!

ಈ ಚಿತ್ರದಲ್ಲಿ ಸಂಜನಾ ಪ್ರಕಾಶ್ ಸೈನೈಡ್ ಮಲ್ಲಿಕಾ ಆಗಿ ಕಾಣಿಸಿಕೊಳ್ಳಲಿದ್ದಾಳಂತೆ. ಗುರು ಎಂಟರ್‌ಟೈನ್ಮೆಂಟ್ ಬ್ಯಾನರಿನಡಿ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರವನ್ನು ಗುರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಬಲರಾಮ್ ಬೈಸಾನಿ ಜಂಟಿ ನಿರ್ಮಾಪಕರಾಗಿರೋ ಈ ಚಿತ್ರದ ಬೆಚ್ಚಿ ಬೀಳಿಸುವಂಥಾ ಟೀಸರ್ ಒಂದು ಇಷ್ಟರಲ್ಲಿಯೇ ಬಿಡುಗಡೆಯಾಗೋ ಸನ್ನಾಹದಲ್ಲಿದೆ!

೧೯೯೯ರಿಂದಲೂ ಕೆಂಪಮ್ಮ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಅದೆಷ್ಟೋ ಮಹಿಳೆಯರನ್ನು ಕೊಲೆ ಮಾಡಿದ್ದಳು. ಮಹಿಳೆಯರನ್ನು ನಂಬಿಸಿ ದೇವಸ್ಥಾನಗಳ ಆವರಣದಲ್ಲಿಯೇ ಸೈನೈಡ್ ಮೂಲಕ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದವಳು ಕೆಂಪಮ್ಮ. ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಗಳಿಸಿದ್ದಳು. ವರ್ಷಗಳ ಹಿಂದೆ ಬಂಧನಕ್ಕೊಳಗಾಗಿ ಕಂಬಿ ಎಣಿಸುತ್ತಿರೋ ಈಕೆ ಇಂಡಿಯಾದ ಮೊದಲ ಸೀರಿಯಲ್ ಕಿಲ್ಲರ್ ಎಂಬ ಕುಖ್ಯಾತಿಗೂ ಪಾತ್ರಳಾಗಿದ್ದಾಳೆ.

ದಂಡುಪಾಳ್ಯ ಮಾದರಿಯ ರಕ್ತಸಿಕ್ತ ಕಥಾನಕ ಹೊಂದಿರೋ ಈ ಚಿತ್ರದ ಮೋಷನ್ ಪೋಸ್ಟರ್ ಈ ಹಿಂದೆಯೇ ಬಿಡುಗಡೆಯಾಗಿದೆ. ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗುತ್ತಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz