One N Only Exclusive Cine Portal

ಇದು ಸರಣಿ ಕೊಲೆಗಳ ಸುತ್ತಲಿನ ಕರ್ಷಣಂ

ಕೆಲವು ವರ್ಷಗಳ ಹಿಂದೆ  ‘ಚಿತ್ರಲೇಖಾ’ ಎನ್ನುವ ಕನ್ನಡದ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟ ಧನಂಜಯ್ ಅತ್ರೆ. ಕೆಲ ವರ್ಷಗಳ ಕಾಲ ನಟನೆಗೆ ಅಲ್ಪ ವಿರಾಮ ನೀಡಿ ತಮ್ಮದೇ ಫ್ಯಾಕ್ಟರಿಯೊಂದನ್ನು ಆರಂಭಿಸಿ ಬ್ಯುಸಿಗಾಗಿದ್ದ ಧನಂಜಯ್ ಈಗ ‘ಕರ್ಷಣಂ’ ಚಿತ್ರದ ಮುಖಾಂತರ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಕಳೆದ ಭಾನುವಾರದಂದು ‘ಕರ್ಷಣಂ’ ಚಿತ್ರಕ್ಕೆ ಕನಕಪುರ ರಸ್ತೆಯಲ್ಲಿರುವ ಶಂಕರ ಫೌಂಡೇಶನ್ ಪಕ್ಕದಲ್ಲಿರುವ ದುರ್ಗಾ ಇಂದ್ರಾಕ್ಷಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.
ಈ ಹಿಂದೆ ಕನ್ನಡದಲ್ಲಿ ಮೂಡಿಬಂದಿದ್ದ ‘ಮಹಾಭಾರತ’ ಎಂಬ ಜನಪ್ರಿಯ ಧಾರಾವಾಹಿಯನ್ನು ನಿರ್ದೇಶಿಸಿ ಸಾಕಷ್ಟು ಹೆಸರು ಮಾಡಿದ್ದ ಶರವಣ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಆರಂಭಿಕವಾಗಿಯೇ ಗಮನ ಸೆಳೆಯೋದು ತನ್ನ ವಿಶಿಷ್ಟವಾದ ಟೈಟಲ್ ಕಾರಣದಿಂದಾಗಿ. ಈ ಚಿತ್ರದಲ್ಲಿ ಶೀರ್ಷಿಕೆಯಷ್ಟೇ ಆಕರ್ಷಕವಾದ, ಅಚ್ಚರಿದಾಯಕವಾದ ಭರಪೂರವಾದ ಕಂಟೆಂಟಿದೆ ಎಂಬ ವಿಚಾರವನ್ನಷ್ಟೇ ಮುಹೂರ್ತದ ದಿನ ಚಿತ್ರ ತಂಡ ಬಿಟ್ಟುಕೊಟ್ಟಿದೆ!
ಧನಂಜಯ್ ಅತ್ರೆ ಅವರು ಸ್ವತಃ ಈ ಚಿತ್ರವನ್ನು ನಿರ್ಮಿಸುವುದರ ಜೊತೆ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಗೌರಿ ಅತ್ರೆ ಅವರ ರೋಚಕ ಕಥೆಯನ್ನು ಚಿತ್ರಕಥೆ, ಸಂಭಾಷಣೆ ಬರೆದು ಶರವಣ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ನಿರ್ದೇಶಕರು ಒಂದು ಗಟ್ಟಿ ಕಥೆಯನ್ನಿಟ್ಟುಕೊಂಡು ಪ್ರೇಕ್ಷಕರನ್ನು ಎದುರುಗೊಳ್ಳುವ ವಿಶ್ವಾಸದಿಂದಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಚಿತ್ರ. ಎಲಿಕ್ಷ್ಟಿಕಲ್ ಇಂಜಿನೀರ್ ಆಗಿರೋ ನಾಯಕ, ಸ್ಲಂ ಹಿನ್ನೆಲೆ ಮುಂತಾದ ರೋಚಕ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಕ್ರೈಂ ಸೇರಿದಂತೆ ಪ್ರೇಕ್ಷಕರನ್ನು ಬೆರಗಾಗಿಸುವ ಥ್ರಿಲ್ಲರ್ ಕಥಾನಕವನ್ನು ಹೊಂದಿದೆಯಂತೆ. ಈ ಚಿತ್ರಕ್ಕೆ ಮೋಹನ್ ಎಂ ಮುಗುಡೇಶ್ವರ್ ಛಾಯಾಗ್ರಹಣ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಎಸ್. ಎಸ್ ಅರ್ಜುನ್ ಸಹ ನಿರ್ದೇಶನ, ವಸಂತ ರಾವ್ ಎಂ ಕುಲಕರ್ಣಿ ಕಲಾ ನಿರ್ದೇಶನ, ಅಶೋಕ್, ಸತೀಶ್ ಬ್ರಹ್ಮಾವರ್ ಸಾಹಸವಿರೋ ಈ ಚಿತ್ರಕ್ಕೆ ಅನುಷಾ ರೈ ನಾಯಕಿಯಾಗಿದ್ದಾರೆ. ವಿಜಯ್ ಚೆಂಡೂರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image