One N Only Exclusive Cine Portal

ಕಡೆಗೂ ಮದುವೆ ಮುರಿದಳಾ ಕಾರುಣ್ಯ!

ದಿಢೀರ್ ಶ್ರೀಮಂತಿಕೆ, ಎಲ್ಲೆಲ್ಲಿಂದಲೋ ತಗುಲಿಕೊಂಡ ಕಾಂಟ್ಯಾಕ್ಟುಗಳು, ವಯಸ್ಸು, ಸೆಲೆಬ್ರಿಟಿಗಳೆಂಬ ಅಹಮ್ಮು ಇವೆಲ್ಲವನ್ನೂ ತಲೆಗೇರಿಸಿಕೊಂಡ ಹೆಣ್ಣುಮಗಳು ಏನೆಲ್ಲಾ ಅನಾಹುತಕಾರಿ ಕೆಲಸಗಳನ್ನು ಮಾಡಬಹುದೋ ಬಹುಶಃ ಆ ಎಲ್ಲವನ್ನೂ ಮಾಡಿ ಗೆದ್ದ ಖುಷಿ ನಟಿ ಕಾರುಣ್ಯಾಳದ್ದು ಅನಿಸುತ್ತಿದೆ. ಏನೇ ಮಾಡಿದರೂ ನಡೆಯುತ್ತೆ ಅನ್ನೋದು ಆಕೆಯ ಮನಸ್ಥಿತಿಯಿರಬಹುದು. ಆದರೆ ಇವೆಲ್ಲವೂ ಸ್ವತಃ ಆಕೆಯ ಭವಿಷ್ಯವನ್ನೇ ಸಂಕಷ್ಟಕ್ಕೀಡುಮಾಡುವುದಿಲ್ಲವೇ?

ಕಿರುತೆರೆ ನಟಿ ಮತ್ತು ನಟಿ ಕಾರುಣ್ಯ ರಾಮ್ ನಡುವೆ ಹೊತ್ತಿಕೊಂಡಿದ್ದ ಮದ್ವೆ ಕಿರಿಕ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮೂಲಗಳ ಪ್ರಕಾರ ನಡೆಯಬೇಕಿದ್ದ ಮದುವೆ ಮುರಿಯುವಲ್ಲಿ ಕಾರುಣ್ಯಾ ಗೆದ್ದಿದ್ದಾಳೆ. ಆದರೆ ಈ ಮೂಲಕವೇ ಆಕೆಯ ಮದುವೆ ಹಂಗಾಮದ ಬಗ್ಗೆ ಥರ ಥರದ ಸುದ್ದಿಗಳೂ ಹರಿದಾಡುತ್ತಿವೆ!
ಕಿರುತೆರೆ ನಟಿ ತನ್ನ ಮನೆಯವರೇ ನೋಡಿದ್ದ ಸಚಿನ್ ಎಂಬ ಹುಡುಗನೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಲೇ ಕಾರುಣ್ಯಾ ರಾಮ್ ಕಿರಿಕ್ಕು ಶುರು ಮಾಡಿಕೊಂಡಿದ್ದಳು. ಈ ಬಗ್ಗೆ ನೊಂದ ಹುಡುಗಿಯ ಸಂಕಟವನ್ನು ಮೊದಲು ಜಾಹೀರು ಮಾಡಿದ್ದೇ ಸಿನಿಬಜ್. ಈ ಸಂದರ್ಭದಲ್ಲಿ “ನನ್ನ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲಾ ಬರೆದುಬಿಟ್ಟಿದ್ದಾರೆ. ಬರೆದವರ ವಿರುದ್ಧ ಹೀಗ್ ಮಾಡ್ ಬಿಡ್ತೀನಿ, ಹಾಗ್ ಮಾಡಿಬಿಡ್ತೀನಿ. ಈ ಮದುವೆ ವಿಚಾರಕ್ಕೂ ನನಗೂ ಸಂಬಂಧವೇ ಇಲ್ಲ.” ಅಂತಾ ಎಗರಾಡಿತ್ತು ಕಾರುಣ್ಯವ್ವ. ಆಮೇಲೆ ವಿಚಾರವೆಲ್ಲಾ ಬಯಲಾಗುತ್ತಿದ್ದಂತೇ ಸೈಲೆಂಟಾಗೇ ಮದುವೆ ಮುರಿಯುವ ಕಾಯಕಕ್ಕೆ ಚಾಲನೆ ನೀಡಿದ್ದಳು.
ಆ ಹಂತದಲ್ಲಿ ಯಾರದ್ದೋ ಒತ್ತಡ ಮತ್ತು ಭಯದಿಂದ ಕಂಗಾಲಾದಂತೆ ಈ ಸಚಿನ್ ಕೂಡಾ ಎರಡೆರಡು ಸಂಸಾರ ಮೇಂಟೇನು ಮಾಡೋ ಮಾಸ್ಟರ್ ಪ್ಲಾನು ಹಾಕಿಕೊಂಡಿದ್ದನಾ? ಈಗ ನಡೆದಿರೋ ಹಠಾತ್ ವಿದ್ಯಮಾನ ಆ ಪ್ರಶ್ನೆಗೆ ಹೌದೆಂಬ ಉತ್ತರವನ್ನೇ ಧ್ವನಿಸುತ್ತಿದೆ!
ಅಂದಹಾಗೆ ಈ ವಿಚಾರದಲ್ಲಿ ಸಿಕ್ಕಿಕೊಂಡಿದ್ದ ಧಾರಾವಾಹಿ ನಟಿ ಓರ್ವ ಸಾಮಾನ್ಯ ಹುಡುಗಿಯಂತೆ ಸೆಂಟಿಮೆಂಟ್ ಇಟ್ಟುಕೊಂಡು ಎಂಗೇಜ್ ಮೆಂಟ್ ಆದ ಹುಡುಗನನ್ನು ಉಳಿಸಿಕೊಳ್ಳಲು ಹೆಣಗಾಡಿದ್ದಳು. ಕಾರುಣ್ಯಾ ರಾಮ್ ಎಂಬೋ ಖತಾರ್‍ನಾಕ್ ನಟಿಯನ್ನು ಎದುರು ಹಾಕಿಕೊಂಡು ಸಚಿನ್‌ಗೆ ಸ್ವತಃ ಧೈರ್ಯ ತುಂಬಿದ್ದರು. ಕಾರುಣ್ಯ ಏನೋ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ಅದರಿಂದ ಈತ ಹೆದರಿದ್ದಾನೆಂದೇ ಆಕೆ  ಮತ್ತವರ ಮನೆ ಮಂದಿ ಅಂದುಕೊಂಡಿದ್ದರು.
ಆದರೀಗ ಸಚಿನ್ ಎಂಬೋ ಮಳ್ಳನ ಅಸಲೀ ಮುಖವೂ ಜಾಹೀರಾಗಿದೆ!

ಅನಿಕಾ ಯಾವ ಕಾರಣಕ್ಕೂ ಸಚಿನ್‌ನನ್ನು ಬಿಟ್ಟು ಕೊಡೋದಿಲ್ಲ ಅಂತ ಕನ್ಫರ್ಮ್ ಆಗುತ್ತಲೇ ಫೀಲ್ಡಿಗಿಳಿದ ಕಾರುಣ್ಯಾ ಆ ಹೆಣ್ಣುಮಗಳು ಮತ್ತು ಆಕೆಯ ಮನೆಯವರಿಗೆ ಬೆಚ್ಚಿ ಬೀಳಿಸುವಂಥಾ ಸಾಕ್ಷಿಯನ್ನು ತೆರೆದಿಟ್ಟಿದ್ದಾಳಂತೆ. ತಾನು ಮತ್ತು ಸಚಿನ್ ಮದುವೆಯಾದುದರ ಬಗ್ಗೆ ಫೋಟೋಗಳನ್ನು ಸಾಕ್ಷಿಯಾಗಿ ತೋರಿಸಿದ್ದಾಳೆ ಎನ್ನುವ ಮಾತು ಕೇಳಿಬರುತ್ತಿದೆ. ಅಲ್ಲಿಗೆ ಮದುವೆಗೆ ಸಿದ್ದಗೊಂಡಿದ್ದ ಹುಡುಗಿ ಮತ್ತು ಆಕೆಯ ಮನೆ ಮಂದಿ ಸಚಿನ್ ಮೇಲಿಟ್ಟಿದ್ದ ನಂಬಿಕೆಯೇ ಛಿದ್ರಗೊಂಡಿದೆ. ಅದೇನೇ ವಿವಾದಗಳಾದಾಗಲೂ ಸಚಿನ್ ಬೆಂಬಲಕ್ಕೆ ನಿಂತಿದ್ದ ಹುಡುಗಿಯ ಪೋಷಕರು ಈ ಸತ್ಯ ಗೊತ್ತಾದೇಟಿಗೆ ಈ ಮದುವೆಯ ಸಹವಾಸವೇ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾರಂತೆ.!
ಕಾರುಣ್ಯಾ ರಾಮ್ ಹೇಳಿಕೊಂಡಿರೋ ಪ್ರಕಾರ ಸಚಿನ್ ಜೊತೆ ಆಕೆಯ ಮದುವೆ ನಾಲ್ಕೈದು ವರ್ಷಗಳ ಹಿಂದೆಯೇ ನಡೆದಿತ್ತು. ಆ ನಂತರ ಏನಾಯ್ತು, ಯಾಕೆ ದೂರಾದರು? ಮತ್ತೇಕೆ ಈಗ ಕಾರುಣ್ಯ ಅವನ ಬೆಂಬಿದ್ದಿದ್ದಾಳೆಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಾಗಿದೆ. ಆದರೆ ಈ ಮಳ್ಳ ಸಚಿನ್ ಮಾತ್ರ ಕಾರುಣ್ಯ ತನ್ನ ಹೊಸಾ ಎಂಗೇಜ್‌ಮೆಂಟಿಗೆ ಅಡ್ಡಗಾಲಾದಾಗಲೂ ಏನೂ ಗೊತ್ತಿಲ್ಲದ ಮುಗ್ಧನಂತಿದ್ದ. ಆದರೀಗ ಸತ್ಯ ಹೊರ ಬೀಳುತ್ತಲೇ ಈ ಮದ್ವೆ ವಿಚಾರ ಬೇರ್‍ಯಾರಿಗೂ ಗೊತ್ತಿಲ್ಲ ಅಂತೆಲ್ಲ ತ್ಯಾಪೆ ಹಚ್ಚಲು ನೋಡಿದನಾದರೂ ಹುಡುಗಿ ಮನೆಯವರು ಈದುವೆಯನ್ನು ತಿರಸ್ಕರಿಸಿದ್ದಾರೆ!
ಇದೆಲ್ಲ ಓಕೆ. ಆದರೆ ಇದೀಗ ತಾನೇ ಚಿತ್ರರಂಗಕ್ಕೆ ಅಡಿಯಿರಿಸಿರೋ ಎಳೇ ಹುಡುಗಿಯಂತೆ ಪೋಸು ಕೊಡೋ ಕಾರುಣ್ಯಾ ಅದೆಷ್ಟು ಮದುವೆಯಾಗಿದ್ದಾಳೆಂಬುದೇ ಈಗ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಯಾಕೆಂದರೆ ಈಕೆಯ ಮದುವೆ ಮ್ಯಾಟರು ಹತ್ತನೇ ತರಗತಿಯಿಂದಲೇ ಶುರುವಾಗಿ ಹೋಗಿತ್ತು!
ಒಂದು ಮೂಲದ ಪ್ರಕಾರ ಕಾರುಣ್ಯಾ ರಾಮ್‌ಗೆ ಬಲು ಚಿಕ್ಕ ವಯಸಿನಲ್ಲಿಯೇ ಮದುವೆಯಾಗಿತ್ತು. ಆ ವಯಸಿನಲ್ಲಿಯೇ ಚಮಕ್ಕು ಪಟ್ಟುಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಕಾರುಣ್ಯಾಳ ಮದುವೆ ಮ್ಯಾಟರ್ ಒಂದೂವರೆ ವರ್ಷದ ಹೊತ್ತಿಗೆಲ್ಲಾ ನೆಗೆದು ಬಿದ್ದಿತ್ತು. ಈ ಕಾರುಣ್ಯಾ ರಾಮ್ ಅಲಿಯಾಸ್ ಬಿ ಆರ್ ಗೀತಾ ಹತ್ತನೇ ತರಗತಿವರೆಗೂ ಓದಿದ್ದು ರಾಜರಾಜೇಶ್ವರಿ ಪಾಠಶಾಲೆಯಲ್ಲಿ. ಈ ಓದಿನ ಸಂದರ್ಭದಲ್ಲಿಯೇ ಒಂದಷ್ಟು ಪ್ರೇಮ ಪ್ರಕರಣಗಳೂ ಸಹಜವಾಗಿಯೇ ನಡೆದು ಹೋಗಿದ್ದವು. ಈಕೆ ಹತ್ತನೇ ತರಗತಿ ಓದುತ್ತಿರೋವಾಗಲೇ ನಾರಾಯಣ ಎಂಬಾತನ ಪರಿಚಯವಾಗಿತ್ತಂತೆ. ಈಕೆಯ ಹಿಂದೆ ಬಿದ್ದ ನಾರಾಯಣ ಬರಿದಾಗಿ ಹೋಗಿದ್ದ. ಇಂಥಾ ಸಂದರ್ಭದಲ್ಲೇ ಕಾರುಣ್ಯಾ ಬದುಕಿಗೆ ಹೊಸದಾಗಿ ಎಂಟ್ರಿ ಕೊಟ್ಟವನು ಶ್ರೀನಿವಾಸ!
ಈ ಶ್ರೀನಿವಾಸ ಭಲೇ ಸ್ಪೀಡಿನ ಆಸಾಮಿ. ಅದೇ ಮಹಾ ಅನಾಹುತಕ್ಕೆ ಕಾರಣವಾಗಲಿದೆ ಎಂಬ ಅರಿವಿಲ್ಲದೆ ಕಾರುಣ್ಯಾ ಪರಿಚುವಾಗುತ್ತಲೇ ಸೀದಾ ಆಕೆಯ ಮನೆಗೆ ಹೋಗಿ ಹೆಣ್ಣು ಕೇಳಿ ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿ ಬಿಟ್ಟಿದ್ದ. ಹಾಗೆ ಮದುವೆಯಾಗೋ ಹೊತ್ತಿಗೆ ಕಾರುಣ್ಯಾ ಹತ್ತನೇ ತರಗತಿ ಮುಗಿಸಿಕೊಂಡಿದ್ದಳಷ್ಟೆ. ಅದಾದ ನಂತರ ಈ ಶ್ರೀನಿವಾಸನೇ ಕಾರುಣ್ಯಾಳನ್ನು ಪಿಯುಸಿಗೆ ಸೇರಿಸಿದ್ದ. ಆದರೆ ಈ ಮದುವೆಯಾಗಿ ಒಂದಷ್ಟು ವರ್ಷಗಳಲ್ಲೇ ಮುರಿದು ಬಿದ್ದಿತ್ತು. ಅದಾದ ಬಳಿಕ ಕಾರುಣ್ಯಾ ರಾಜಾಜಿನಗರದ ಸಿನಿಮಾ ಇನ್ಸ್‌ಟಿಟ್ಯೂಟ್‌ಗೆ ಸೆರಿಕೊಂಡಳು. ಅಲ್ಲಿ ಬೇರೆಯದ್ದೇ ಜಗತ್ತಿನ ಪರಿಚಯವಾಯಿತು. ಇಂಥಾ ಕಾರುಣ್ಯ ಚಂದ್ರ ಎಂಬ ಹೆಸರಿನಲ್ಲಿ ಅಯ್ಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಳು. ಆದರೆ ಶ್ರೀನಿವಾಸ ಮಾತ್ರ ಈವತ್ತಿಗೂ ತನ್ನ ಪಾಡಿಗೆ ತಾನು ಸೈಬರ್ ಸೆಂಟರ್ ಒಂದನ್ನು ನಡೆಸಿಕೊಂಡಿದ್ದಾನೆ! ಇನ್ನು ಚಿತ್ರರಂಗದಲ್ಲಿ ಗೆಲುವಿಗಾಗಿ ಕಾತರಿಸುತ್ತಿರುವ ಹೀರೋ ಒಬ್ಬರು ಕೂಡಾ ಕೂಡಾ ಈಕೆ ಕೈಕೊಟ್ಟನಂತರ ತಲೆಕೆಡಿಸಿಕೊಂಡು ತಿರುಗಿದ್ದು ಬಹುತೇಕರಿಗೆ ಗೊತ್ತಿರೋ ವಿಚಾರ.
ಹೀಗೆ ಚಿಕ್ಕ ವಯಸಿಗೇ ಮದುವೆಯಾಗಿ ಸಂಬಂಧ ಮುರಿದುಕೊಂಡಿದ್ದ ಕಾರುಣ್ಯಾ ಇದೀಗ ಸಚಿನ್ ಜೊತೆಗೂ ಮದುವೆಯಾಗಿರೋದಾಗಿ ಪ್ರೂಫು ತೋರಿಸಿದ್ದಾಳೆ. ಕಾರುಣ್ಯಾ ಮಹಿಮೆ ಇನ್ನೂ ಅದೇನೇನಿದೆಯೋ… ಈ ಎಲ್ಲಾ ಬೆಳವಣಿಗೆಯಿಂದ ನೊಂದ ನಟಿ ಮಾತ್ರ ಖಿನ್ನತೆಗೆ ಜಾರಿದ್ದಾರೆ. ಇಂಥಾ ಹೊತ್ತಲ್ಲಿ ಚಾನೆಲ್ಲುಗಳು ಹೋಗಿ ಆಕೆಯ ಮನೆ ಕದ ಬಡಿದರೆ ಆಕೆಯ ಮನಸ್ಥಿತಿ ಇನ್ನಷ್ಟು ಘಾಸಿಯಾಗೋದು ಗ್ಯಾರೆಂಟಿ.

Leave a Reply

Your email address will not be published. Required fields are marked *


CAPTCHA Image
Reload Image