One N Only Exclusive Cine Portal

ಅನುಭವದ ನಟನಿಗೆ ಕಾಡಿತ್ತು ಅರುಳು ಮರುಳು

’ಅನುಭವ’ ಅನಂತನ ಅವಾಂತರದಂಥ ಸಿನಿಮಾಗಳನ್ನೂ ನಿರ್ದೇಶಿಸಿ, ನಟಿಸಿದ್ದವರು ಕಾಶಿನಾಥ್. ಸಿನಿಮಾದ ಕಂಟೆಂಟು ಇನ್ನೂ ಮಡಿವಂತಿಕೆಯಿಂದ ಕೂಡಿದ್ದ ಸಂದರ್ಭದಲ್ಲೇ ಚೌಕಟ್ಟು ಮೀರಿದ ಸಿನಿಮಾ ಮಾಡಿ ಹೊಸ ಟ್ರೆಂಡು ಹುಟ್ಟು ಹಾಕಿದ ಕ್ರೀಯಾಶೀಲ ವ್ಯಕ್ತಿ ಕಾಶೀನಾಥ್.


ಕಳೆದ ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗವನ್ನು ಆಳಿದ ಉಪೇಂದ್ರ, ವಿ.ಮನೋಹರ್, ಸುನಿಲ್ ಕುಮಾರ್ ದೇಸಾಯಿಯಂಥ ನಿರ್ದೇಶಕರನ್ನು ಹುಟ್ಟು ಹಾಕಿದವರೂ ಇವರೇ.
ಇಂಥ ಕಾಶಿನಾಥ್‌ಗೆ ಕಡೆಕಡೆಯಲ್ಲಿ ಭಯಾನಕ ಸಮಸ್ಯೆಯೊಂದು ಕಾದಿತ್ತು. ಅದು ಮರೆವಿನ ಖಾಯಿಲೆ. ಕಾಶಿನಾಥ್‌ಗೆ ಮರೆವೆಂಬುದು ಅದ್ಯಾವ ಪರಿ ಕಾಡಿತ್ತು ಗೊತ್ತಾ? ಕಳೆದ ಮೂರೂವರೆ ದಶಕಗಳಿಂದ ತನ್ನ ಎಲ್ಲಾ ಏಳು ಬೀಳುಗಳನ್ನು ದಾಖಲಿಸುತ್ತಾ ತಮ್ಮ ಸಿನಿಮಾ-ಜೀವನವನ್ನು ಚಿತ್ರಿಸುತ್ತಾ ಬಂದಿರುವ ಪತ್ರಕರ್ತರ ಹೆಸರುಗಳೂ ನೆನಪಿನಲ್ಲಿ ಉಳಿದಿರಲಿಲ್ಲ. ಹಾಗೆಂದು ಕಾಶಿನಾಥ್‌ಗೆ ಒಡನಾಡಿಗಳ ಮುಖ ಸಹ ಮರೆತು ಹೋಗಿದೆ ಎಂಬುದಲ್ಲ. ಮಸ್ತಿಷ್ಕದಲ್ಲಿ ಉಳಿದುಕೊಳ್ಳುತ್ತಿಲ್ಲ. ಪತ್ರಕರ್ತರ ಹೆಸರಿನಲ್ಲಿ ತಮ್ಮ ಬಂಧು ಮಿತ್ರರು, ಶಿಷ್ಯಕೋಟಿಗಳೂ ಸಿನಿಮಾ-ಸ್ನೇಹಿತರ ಹೆಸರು ಕೂಡಾ ಕಾಶಿನಾಥ್ ಅಕ್ಷರಶಃ ಮರೆತು ಹೋಗಿದ್ದರು.
ದಿನವಿಡೀ ತಮ್ಮೊಟ್ಟಿಗೇ ಇರುವ ಅಸಿಸ್ಟೆಂಟುಗಳು ಹೆಸರು ಕೂಡಾ ಕಾಶಿನಾಥ್ ಜ್ಞಾಪಕದಲ್ಲಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದರು. ಹೀಗಾಗಿ ತಮ್ಮ ಸಹಾಯಕರನ್ನು ಅವರು ಲೇ, ಇವ್ನೇ, ಅವ್ನೇ, ಇನ್ನೊಬ್ಬ ಇದಾನಲ್ಲ ಅವ್ನು ಮತ್ತೊಬ್ಬನ ಜೊತೆಹೋದ್ನಾ? ಎಂದು ಪ್ರಶ್ನಿಸುವ ಹಂತ ತಲುಪಿಬಿಟ್ಟಿದ್ದರು ಎಂದರೆ ನಂಬಲೇಬೇಕು! ಮಹಾನ್ ಬುದಿವಂತನೆನಿಸಿಕೊಂಡಿದ್ದ ಕಾಶಿನಾಥ್ ಈ ಕಾರಣಕ್ಕೆ ಮಹಾನ್ ಮರೆಗುಳಿ ಎಂದು ಖ್ಯಾತರಾಗಿದ್ದರು.
ಕಾಶಿನಾಥ್‌ರಂಥ ಸಾಧಕನಿಗೆ ಇಷ್ಟು ಬೇಗ ನೆನಪಿನ ಶಕ್ತಿ ಕ್ಷೀಣಿಸಿತಲ್ಲಾ? ಅವರ ಸ್ಮುತಿಪಟಲ ಇನ್ನೆಷ್ಟೋ ಕಾಲ ಚಟುವಟಿಕೆಯಿಂದ ಕೂಡಿರಲಿ ಅಂತಾ ಅವರ ಸುತ್ತಲಿನವರು ಆಶಿಸೋ ಹೊತ್ತಿಗೆ ಕಾಶಿನಾಥ್ ಸೀದಾ ಎದ್ದು ಹೊರನಡೆದುಬಿಟ್ಟಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image