Connect with us

ಅಪ್‌ಡೇಟ್ಸ್

ಥೇಟರುಗಳಲ್ಲಿ ಮುಂದುವರೆದಿದೆ ಹಾರರ್ ಹವಾ!

Published

on

ಹಾರರ್ ಚಿತ್ರಗಳಿಗೆ ಕನ್ನಡದಲ್ಲಿ ಪ್ರೇಕ್ಷಕರಿದ್ದಾರೆ. ಈ ಜಾನರಿನ ಚಿತ್ರಗಳು ಗೆದ್ದಿದ್ದೇ ಹೆಚ್ಚು. ಅಂಥಾದ್ದರಲ್ಲಿ ನವೀನ ತಂತ್ರಜ್ಞಾನದೊಂದಿಗೆ, ಹಲವಾರು ಹೊಸಾ ಪ್ರಯೋಗಗಳೊಂದಿಗೆ ಹಾರರ್ ಚಿತ್ರವೊಂದು ತೆರೆ ಕಂಡರೆ ಪ್ರೇಕ್ಷಕರು ಗೆಲ್ಲಿಸದಿರುತ್ತಾರಾ? ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿರುವ ಶ್ರೀನಿ ನಿರ್ದೇಶನದ ಕೆಲವು ದಿನಗಳ ನಂತರ ಚಿತ್ರ ನೆಲೆಕಂಡುಕೊಂಡಿದ್ದೂ ಕೂಡಾ ಈ ಹೊಸತನದ ಕಾರಣದಿಂದಲೇ!

ಮುತ್ತುರಾಜ್, ವಸಂತ್ ಕುಮಾರ್ ಮತ್ತು ಚಂದ್ರಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ. ತಮ್ಮ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದಷ್ಟು ಹೊಸತನ ಮತ್ತು ಮೊದಲುಗಳ ಮೂಲಕ ದಾಖಲಾಗಬೇಕೆಂದು ನಿರ್ದೇಶಕರು ಹಂಬಲಿಸದಿದ್ದರೆ, ಅದಕ್ಕೆ ನಿರ್ಮಾಪಕರು ಧಾರಾಳವಾಗಿ ಕಾಸು ಸುರಿದು ಸಪೋರ್ಟು ಮಾಡದಿದ್ದರೆ ಬಹುಶಃ ಈ ಚಿತ್ರಕ್ಕೆ ಈರೀತಿಯದ್ದೊಂದು ಬೆಂಬಲ ಸಿಗಲು ಸಾಧ್ಯವಿರುತ್ತಿರಲಿಲ್ಲವೇನೋ… ಪ್ರೇಕ್ಷಕರೆಲ್ಲ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆ ಕಾರಣದಿಂದಲೇ ಕೆಲವು ದಿನಗಳ ನಂತರ ಚಿತ್ರ ಎಲ್ಲೆಡೆ ಒಳ್ಳೇ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದ ಮೂಲಕವೇ ಕನ್ನಡಕ್ಕೆ ಪರಿಚಯವಾಗಿದ್ದ ಝಾಂಬೀಸ್, ಗ್ರಾಫಿಕ್ಸ್ ಮಗು ಸೇರಿದಂತೆ ಎಲ್ಲವೂ ಕೂಡಾ ಕಥೆಗೆ ಪೂರಕವಾಗಿ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶ ಕಂಡಿವೆ. ಯುವ ಜನಾಂಗದ ಉನ್ಮತ್ತ ಮನಸ್ಥಿತಿಯ ಕಥೆ ಹೇಳುತ್ತಲೇ ಅದರಿಂದ ಎದುರಾಗಬಹುದಾದ ಅನಾಹುತಗಳನ್ನು ಹಾರರ್ ಶೈಲಿಯಲ್ಲಿ ಅನಾವರಣಗೊಳಿಸುತ್ತಾ ಒಂದು ಸಂದೇಶವನ್ನೂ ರವಾನಿಸುವ ಈ ಚಿತ್ರದ ಪ್ರಯತ್ನವನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಅಪ್‌ಡೇಟ್ಸ್

ಹೆಸರಘಟ್ಟದ ಕಾಲೇಜಿನಲ್ಲಿ ಕ್ರಿಕೆಟ್ ಸಾಹಸ!

Published

on

ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯಿಸುತ್ತಿರುವ ಐಲವ್‌ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎರಡನೇ ಬಾರಿ ಚಂದ್ರು ಮತ್ತು ಉಪ್ಪಿ ಕಾಂಬಿನೇಷನ್ನಿನ ಈ ಚಿತ್ರದ ಸಾಹಸ ದೃಷ್ಯಾವಳಿಗಳು ಹೆಸರಘಟ್ಟದ ಆಚಾರ್ಯ ಕಾಲೇಜಿನಲ್ಲಿ ಸೆರೆಹಿಡಿಯಲ್ಪಡುತ್ತಿವೆ.

ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಅವರ ಸಮ್ಮುಖದಲ್ಲಿ ಐ ಲವ್ ಯೂ ಚಿತ್ರದ ಮೈ ನವಿರೇಳಿಸುವ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿವೆ. ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್‌ನ ರೋಚಕ ಸನ್ನಿವೇಶಗಳನ್ನು ಅವ್ಯಾಹತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಐ ಲವ್ ಯೂ ಸೆಟ್ ನಲ್ಲಿ ಉಪ್ಪಿ ಕ್ರಿಕೆಟ್ ಆಟ

Posted by R.Chandru on Monday, October 8, 2018

ಈ ಚಿತ್ರವನ್ನು ಆರ್ ಚಂದ್ರು ಅವರೇ ಸಿದ್ದೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಧಾರಾಳವಾಗಿಯೇ ಖರ್ಚು ಮಾಡಿ ಈ ಸಾಹಸ ದೃಷ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಅದ್ದೂರಿ ವೆಚ್ಚದ ಈ ಸಾಹಸ ಸನ್ನಿವೇಶಗಳಲ್ಲಿ ಚಂದ್ರು ಅತ್ಯಂತ ದುಬಾರಿ ಕಾರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಡಾ.ರವಿವರ್ಮ, ವಿನೋದ್ ಮತ್ತು ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಚಿನ್ನಿ ಪ್ರಕಾಶ್ ಅವರು ಈ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸಂಗೀತ, ನೃತ್ಯ, ಸಾಹಸ ಸೇರಿದಂತೆ ಈ ಚಿತ್ರವನ್ನು ಎಲ್ಲ ವಿಧದಲ್ಲಿಯೂ ರಿಚ್ ಆಗಿ ರೂಪಿಸಲು ಆರ್. ಚಂದ್ರು ಶ್ರಮಿಸುತ್ತಿದ್ದಾರೆ. ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಈ ಚಿತ್ರ ಥರ ಥರದಲ್ಲಿ ಸದ್ದು ಮಾಡಿಕೊಂಡೇ ಬಂದಿದೆ. ಇದೀಗ ಮೈನವಿರೇಳಿಸೋ ಸಾಹಸ ಸನ್ನಿವೇಶಗಳ ಚಿತ್ರೀಕರಣದ ಮೂಲಕ ಮತ್ತೆ ಐ ಲವ್ ಯೂ ಚಿತ್ರದತ್ತ ಎಲ್ಲರ ಗಮನ ನೆಟ್ಟಿದೆ.a

Continue Reading

ಅಪ್‌ಡೇಟ್ಸ್

ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮಗನು ಕೇಳಲೇಬೇಕಾದ, ನೋಡಲೇಬೇಕಾದ ಹಾಡು..

Published

on

ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರವೀಗ ಹಾಡುಗಳ ಹಂಗಾಮದಿಂದ ಮತ್ತಷ್ಟು ಪ್ರೇಕ್ಷಕರನ್ನು ತಲುಪಲಾರಂಭಿಸಿದೆ. ಅಜೇಯ್ ರಾವ್ ಹೊಸಾ ಗೆಟಪ್ಪಿನಲ್ಲಿ ನಟಿಸಿರೋ, ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರದ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ.

ಈಗ ಬಿಡುಗಡೆಯಾಗಿರೋ ಅಮ್ಮ ನಿನ್ನ ಮಗನೆಂಬ ಹೆಮ್ಮೆ.. ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿ ಜನ್ಮಕೂ… ಎಂಬ ಈ ಹಾಡೂ ಈ ಹಿಂದಿನ ಎರಡು ಹಾಡುಗಳನ್ನೇ ಮೀರಿಸುವಂತೆ ಹಿಟ್ ಆಗೋ ಸೂಚನೆಯೂ ದಟ್ಟವಾಗಿಯೇ ಕಾಣಿಸುತ್ತಿದೆ. ಅಮ್ಮನ ಮೇಲಿನ ಪ್ರೀತಿಯ ಪ್ರತೀಕದಂತಿರೋ ಈ ಹಾಡಿನ ಸಾಲುಗಳು ಭಾವಗೀತೆಯಂಥಾ ನವಿರುತನದಿಂದ ಎಲ್ಲರನ್ನು ಆವರಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ ಎಂಬ ಹಾಡೂ ಟ್ರೆಂಡಿಂಗ್‌ನಲ್ಲಿದೆ. ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡುತ್ತಾ ಬಂದಿರೋ ಚಿತ್ರತಂಡ, ಆ ಹಾಡುಗಳನ್ನು ಒಂದಕ್ಕಿಂತ ಒಂದು ಚೆಂದ ಎಂಬಂತೆ ರೂಪಿಸುತ್ತಿರೋದು ವಿಶೇಷ.

Continue Reading

ಅಪ್‌ಡೇಟ್ಸ್

ಕೇಡಿ ನಂ ಒನ್ ಚಿತ್ರಕ್ಕಾಗಿ ನಡೆಯಲಿದೆ ಆಡಿಷನ್!

Published

on

ಅನೀಶ್ ತೇಜೇಶ್ವರ್ ನಟನೆಯ ಕೇಡಿ ನಂ ೧ ಚಿತ್ರಕ್ಕೀಗ ಬಿರುಸಿನ ತಯಾರಿಗಳು ಆರಂಭವಾಗಿವೆ. ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಈ ಚಿತ್ರದ ತಾರಾಗಣದ ಆಯ್ಕೆ ಕಾರ್ಯವೀಗ ಬಿರುಸಿನಿಂದ ನಡೆಯುತ್ತಿದೆ. ಅದರಲ್ಲಿಯೂ ಈ ಚಿತ್ರದ ನಾಯಕಿಯ ಆಐಕೆ ವಿಚಾರದಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಚಿತ್ರತಂಡ ತೀರ್ಮಾನಿಸಿಯದೆ.

ನಾಯಕಿಯ ಆಯ್ಕೆಗಾಗಿಯೇ ಆಡಿಷನ್ ಒಂದನ್ನು ಆಯೋಜಿಸಲಾಗಿದೆ. ಹದಿನೆಂಟರಿಂದ ಇಪ್ಪತೈದು ವರ್ಷದೊಳಗಿನ ಯುವತಿಯರು ತಮ್ಮ ಭಾವ ಚಿತ್ರದೊಂದಿಗೆ winkwhistleauditions@gmail.com ವಿವರಗಳನ್ನು ಕಳಿಸುವ ಮೂಲಕ ಈ ಆಡಿಷನ್ನಿಗೆ ಪ್ರವೇಶ ಪಡೆಯ ಬಹುದಾಗಿದೆ. ಇದೇ ಸಂದರ್ಭದಲ್ಲಿ ಕೆಲ ಪೋಷಕ ಪಾತ್ರಗಳಿಗೂ ಕೂಡಾ ಆಡಿಷನ್ ಮೂಲಕವೇ ನಟ ನಟಿಯರನ್ನು ಆಯ್ಕೆ ಮಾಡಲೂ ಯೋಜಿಸಲಾಗಿದೆ.

ಪ್ರಶಾಂತ್ ರಾಜಪ್ಪ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆಂಬ ಸುದ್ದಿ ಹೊರ ಬಿದ್ದ ಬಳಿಕ ಈ ಚಿತ್ರದ ಟೈಟಲ್ ಲಾಂಚ್ ಆದಂದಿನಿಂದಲೂ ಈ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಆದ್ದರಿಂದಲೇ ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಬಗ್ಗೆಯೂ ಕುತೂಹಲವಿತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟಿಯರ ಹೆಸರೂ ಈ ಸಾಲಿನಲ್ಲಿ ವ್ಯಾಪಕವಾಗಿಯೇ ಕೇಳಿ ಬಂದಿತ್ತು. ಆದರೆ ಕೇಡಿಗೆ ಹೊಸಾ ಹುಡುಗಿಯನ್ನೇ ಜೋಡಿ ಮಾಡಲು ಪ್ರಶಾಂತ್ ರಾಜಪ್ಪ ನಿರ್ಧರಿಸಿದ್ದಾರೆ.

ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಒಂದಸು ಮಟ್ಟದ ಗೆಲುವು ಪಡೆದಿದ್ದ ಅನೀಶ್ ತೇಜೇಶ್ವರ್ ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಗೆಟಪ್ಪಿನಲ್ಲಿ ಕಾಣಿಸಿಕೊಳದ್ಳಲಿರೋ ಖುಷಿಯಲ್ಲಿದ್ದಾರೆ. ಇದುವರೆಗೂ ಸ್ಟೈಲಿಶ್ ಲುಕ್ಕಿನಲ್ಲಿಯೇ ನಟಿಸುತ್ತಾ ಬಂದಿದ್ದ ಅನೀಶ್ ಹಳ್ಳಿ ಹೈದನಾಗಿ ಹೇಗೆ ಕಾಣಿಸಲಿದ್ದಾರೆಂಬುದನ್ನು ನೋಡಲು ಬಗ್ಗೆ ಅವರ ಅಭಿಮಾನಿ ಬಳಗ ಕಾತರದಿಂದ ಕಾಯಲಾರಂಭಿಸಿದೆ.

Continue Reading

Trending

Copyright © 2018 Cinibuzz