One N Only Exclusive Cine Portal

ಕಿರಾಕ್ ಪಾರ್ಟಿ ವಿತರಣಾ ಹಕ್ಕು ಪಡೆದ ರಾಮು!

ಕನ್ನಡದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿರುವ ಕಿರಿಕ್ ಪಾರ್ಟಿ ಚಿತ್ರ ತೆಲುಗಿಗೆ ರೀಮೇಕ್ ಆಗಿರೋ ವಿಚಾರ ತಿಳಿದದ್ದೇ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರ ತೆಲುಗಿನಲ್ಲಿ ಕಿರಾಕ್ ಪಾರ್ಟಿ ಎಂಬ ಹೆಸರಿನಲ್ಲಿ ಸಂಪೂರ್ಣಗೊಂಡು ತೆರೆ ಕಾಣಲು ಸನ್ನದ್ಧವಾಗಿದೆ.

ಹೊಸಾ ವಿಚಾರವೆಂದರೆ, ಈ ತೆಲುಗು ಚಿತ್ರದ ಕರ್ನಾಟಕದ ವಿತರಣಾ ಹಕ್ಕುಗಳನ್ನು ಅದ್ದೂರಿ ನಿರ್ಮಾಪಕರೆಂದೇ ಕರೆಸಿಕೊಳ್ಳುವ ರಾಮು ತೆಗೆದುಕೊಂಡಿದ್ದಾರಂತೆ!

ಕನ್ನಡ ಚಿತ್ರರಂಗಕ್ಕೆ ಹಲವಾರು ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿಕೊಟ್ಟು ಕೆಲವೊಂದು ಸಲ ಅದ್ದೂರಿಯಾಗಿಯೇ ಲುಕ್ಸಾನು ಮಾಡಿಕೊಂಡು ಪಾತಾಳ ಕಂಡಿದ್ದವರು ರಾಮು. ಎಲ್ಲ ಸರಿಯಿದೆ ಅನ್ನೋ ಕಾಲದಲ್ಲಿಯೇ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡು ಲಾಸ್ ಮಾಡಿಕೊಳ್ಳುವ ರಾಮು ಅವರನ್ನು ಇದುವರೆಗೂ ಆಗಾಗ ಪರಭಾಷಾ ಚಿತ್ರಗಳ ವಿತರಣಾ ವ್ಯವಹಾರವೇ ಕೈ ಹಿಡಿದ ಉದಾಹರಣೆಗಳಿವೆ.

ಚಿತ್ರ ನಿರ್ಮಾಣ ಮಾಡಿ ಕಳೆದುಕೊಂಡ ಕಾಸನ್ನು ರಾಮು ಹಲವಾರು ಸಲ ಚಿತ್ರಗಳ ವಿತರಣೆಯ ಮೂಲಕ ರಿಕವರಿ ಮಾಡಿಕೊಂಡು ನಿರಾಳವಾಗಿದ್ದಾರೆ. ಸದ್ಯ ರಾಮು ಅಂಥಾದ್ದೇ ಒಂದು ಸೋಲಿನ ಆಫ್ಟರ್ ಎಫೆಕ್ಟನ್ನು ಅನುಭವಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದಿಂದಲೇ ರೀಮೇಕ್ ಆಗಿರೋ ತೆಲುಗು ಚಿತ್ರದ ವಿತರಣಾ ಹಕ್ಕು ಪಡೆದುಕೊಂಡಿದ್ದಾರೆ. ಕಿರಿಕ್ ಪಾರ್ಟಿ ಕನ್ನಡದಲ್ಲಿ ಭರ್ಜರಿ ಯಶಸ್ಸು ದಾಖಲಿಸಿತ್ತಲ್ಲಾ? ಅಂಥಾದ್ದೇ ಪವಾಡ ಪುನರಾವರ್ತನೆಯಾದರೆ ರಾಮು ತಕ್ಕಮಟ್ಟಿಗೆ ಸೇಫ್ ಆಗಬಹುದೇನೋ…

Leave a Reply

Your email address will not be published. Required fields are marked *


CAPTCHA Image
Reload Image