Connect with us

ಸೌತ್ ಬಜ್

ಬಾಲಿವುಡ್ಡಲ್ಲಿ ಕಿರಿಕ್ ಸಾನ್ವಿ ಆದಳು ಜಾಕ್ವೆಲಿನ್!

Published

on

ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಭಾರೀ ಸದ್ದು ಮಾಡಿದ್ದೀಗ ಇತಿಹಾಸ. ಈ ಚಿತ್ರ ಬಾಲಿವುಡ್‌ಗೆ ರೀಮೇಕ್ ಆಗಲು ರೆಡಿಯಾಗೋ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇದೀಗ ಕನ್ನಡ ಕಿರಿಕ್ ಪಾರ್ಟಿಯ ಹಿಂದಿ ರೀಮೇಕ್‌ನಲ್ಲಿ ಯಾರ್‍ಯಾರು ಯಾವ ಪಾತ್ರಗಳನ್ನು ಮಾಡಲಿದ್ದಾರೆಂಬ ಬಗ್ಗೆ ಕನ್ನಡದ ಪ್ರೇಕ್ಷಕರೆಲ್ಲ ಕುತೂಹಲಗೊಂಡಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಪಾತ್ರವನ್ನು ಯಾರು ಮಾಡುತ್ತಿದ್ದಾರೆಂಬ ವಿಚಾರ ಜಾಹೀರಾಗಿದೆ. ಕಾರ್ತಿಕ್ ಆರ್ಯನ್ ಆ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಕನ್ನಡದ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದ ಸಾನ್ವಿ ಪಾತ್ರವನ್ನು ಯಾರು ಮಾಡಲಿದ್ದಾರೆಂಬ ವಿಚಾರ ಈ ವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಈಗ ಅದೂ ಈಗ ಪಕ್ಕಾ ಆಗಿದೆ. ಸಲ್ಮಾನ್ ಖಾನ್ ಪ್ರೇಯಸಿ ಜಾಕ್ವೆಲಿನ್ ಫೆರ್ನಾಂಡಿಸ್ ಸಾನ್ವಿಯಾಗಿ ನಟಿಸಲು ಆಯ್ಕೆಯಾಗಿದ್ದಾಳೆ.

ಚಿತ್ರತಂಡ ಕಿರಿಕ್ ಪಾರ್ಟಿ ರೀಮೇಕ್ ಮಾಡಲು ನಿರ್ಧರಿಸಿ ಅದರಲ್ಲಿನ ಪಾತ್ರಗಳಿಗೆ ಸೂಕ್ತವಾಗ ಬಾಲಿವುಡ್ ನಟ ನಟಿಯರಿಗಾಗಿ ತಲಾಶು ನಡೆಸುತ್ತಿತ್ತು. ನಾಯಕನಾಗಿ ಕಾರ್ತಿಕ್ ಆಯ್ಕೆಯಾದರೂ ಸಾನ್ವಿ ಪಾತ್ರಕ್ಕೆ ಮಾತ್ರ ಯಾರೂ ಸೂಟ್ ಆಗುತ್ತಿರಲಿಲ್ಲ. ಕಡೆಗೂ ಒಂದಷ್ಟು ನಾಯಕಿಯರ ಹುಡುಟ ನಡೆಸಿದ ಚಿತ್ರತಂಡ ಜಾಕ್ವೆಲಿನ್‌ಳನ್ನು ಆಯ್ಕೆ ಮಾಡಿಕೊಂಡಿದೆ.

ಒಂದು ರೇಂಜಿಗೆ ಜಾಕ್ವೆಲಿನ್ ಕನ್ನಡಕದ ಪೋಸಿನಲ್ಲಿ ಕನ್ನಡದ ಸಾನ್ವಿಯನ್ನು ಹೋಲುತ್ತಾಳೆ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿರೋ ಆಕೆಗೆ ಈ ಪಾತ್ರ ನಿರ್ವಹಿಸೋದು ಕಷ್ಟವಾಗಲಿಕ್ಕಿಲ್ಲ ಎಂಬುದು ಚಿತ್ರ ತಂಡದ ಭರವಸೆ, ಜಾಕ್ಚವೆಲಿನ್ ಫರ್ನಾಂಡಿಸ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಥರ ಥರದಲ್ಲಿ ಸುದ್ದಿಯಲ್ಲಿರುವಾಕೆ. ಆದರೆ ಅದು ನಟನೆಯ ಕಾರಣಕ್ಕಲ್ಲ. ಬದಲಾಗಿ ಸಲ್ಮಾನ್ ಖಾನ್ ಜೊತೆಗಿನ ಪ್ರೇಮ ವ್ಯವಹಾರದ ಕಾರಣಕ್ಕೆ!

ಕನ್ನಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ಮುಖ್ಯ ಆಕರ್ಷಣೆಯಾಗಿದ್ದದ್ದು ರಶ್ಮಿಕಾ ಮಂದಣ್ಣ ನಿರ್ವಹಿಸಿದ್ದ ಸಾನ್ವಿ ಪಾತ್ರ. ಇದರಲ್ಲಿನ ರಶ್ಮಿಕಾ ಲುಕ್ಕಿಗೆ ಹೈಕಳೆಲ್ಲ ಫಿದಾ ಆಗಿದ್ದರು. ಜಾಕ್ವೆಲಿನ್ ಕೂಡಾ ಬಾಲಿವುಡ್ಡಲ್ಲಿ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿದರೂ ಅಚ್ಚರಿಯೇನಿಲ್ಲ.

#

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಪಡ್ಡೆಹುಲಿ ಹಿಟ್ ಹಾಡುಗಳ ಜ್ಯೂಕ್ ಬಾಕ್ಸ್ ಅನಾವರಣ!

Published

on


ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಎಂಥವರೂ ಅಚ್ಚರಿಗೊಳ್ಳುವಂಥಾ ಕ್ರೇಜ್ ಸೃಷ್ಟಿಸಿದೆ. ಶ್ರೇಯಸ್ ಸಂಪೂರ್ಣ ತಯಾರಿಯೊಂದಿಗೇ ಅಡಿಯಿರಿಸಿರೋದರ ಬಗ್ಗೆ ಬೆರಗು, ಓರ್ವ ಎನರ್ಜಿಟಿಕ್ ಹೀರೋ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸ್ಪಷ್ಟ ಸೂಚನೆಗಳೆಲ್ಲವೂ ಪಡ್ಡೆಹುಲಿಯ ಸುತ್ತ ಮಿರುತ್ತಿವೆ!

ಇದೆಲ್ಲವೂ ಸಾಧ್ಯವಾಗಿದ್ದು ಒಂದರ ಹಿಂದೊಂದರಂತೆ ಅನಾವರಣಗೊಂಡಿದ್ದ ಚೆಂದದ ಹಾಡುಗಳಿಂದ. ಈಗಾಗಲೇ ಭರತ್ ಬಿಜೆ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಎಲ್ಲ ಹಾಡುಗಳೂ ಹಿಟ್ ಆಗಿವೆ. ಇದೀಗ ಪಿಆರ‍್ಕೆ ಸಂಸ್ಥೆಯ ಮೂಲಕ ಈ ಎಲ್ಲ ಹಾಡುಗಳ ಜ್ಯೂಕ್ ಬಾಕ್ಸ್ ಅನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ಪಡ್ಡೆಹುಲಿ ಚಿತ್ರದ ಅಷ್ಟೂ ಚೆಂದದ ಹಾಡುಗಳನ್ನು ಒಟ್ಟಾಗಿ ಕೇಳಿಸಿಕೊಳ್ಳುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಒಂದು ಚಿತ್ರದಲ್ಲಿ ಐದಾರು ಹಾಡುಗಳಿರೋದು ಸಾಮಾನ್ಯ. ಕೆಲ ಬಾರಿ ಈ ಸಂಖ್ಯೆ ಇನ್ನೂ ಇಳಿಕೆಯಾಗೋದೂ ಇದೆ. ಆದರೆ, ಪಡ್ಡೆಹುಲಿ ಚಿತ್ರದಲ್ಲಿ ಮಾತ್ರ ಹತ್ತು ಹಾಡುಗಳಿವೆ. ಒಂದಕ್ಕಿಂತ ಒಂದು ಚೆಂದವೆಂಬಂತೆ ಮೂಡಿ ಬಂದಿರೋ ಈ ಹಾಡುಗಳೆಲ್ಲವೂ ಜನಮಾನಸ ಗೆದ್ದಿವೆ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಗೂ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.

ಎಮ್ ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರೀಕರಣದ ಹಂತದಲ್ಲಿಯೇ ನಾಯಕ ಶ್ರೇಯಸ್ ಭರವಸೆ ಹುಟ್ಟಿಸಿ ಬಿಟ್ಟಿದ್ದಾರೆ. ಹಾಡುಗಳಂತೂ ಅವರ ಪೂರ್ವ ತಯಾರಿ, ಶ್ರಮಗಳನ್ನು ಪ್ರತಿಫಲಿಸುವಂತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಶ್ರೇಯಸ್ ಶ್ರಮವನ್ನು ಮೆಚ್ಚಿಕೊಂಡಿದ್ದಾರೆಂದ ಮೇಲೆ ಹೆಚ್ಚೇನು ಹೇಳೋ ಅಗತ್ಯವಿಲ್ಲ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಮೂಲಕ ಪಡ್ಡೆಹುಲಿಯ ಬಗೆಗಿನ ನಿರೀಕ್ಷೆ ನೂರ್ಮಡಿಸೋದಂತೂ ಖಂಡಿತ!

Continue Reading

ಕಲರ್ ಸ್ಟ್ರೀಟ್

ತಮಿಳಿನ ಕುಟ್ಟಿ ಪುಲಿ ಕನ್ನಡದ ಸಿಂಗ!

Published

on


ತಿಂಗಳುಗಳ ಹಿಂದಷ್ಟೇ ಆರಂಭವಾಗಿದ್ದ ಚಿರಂಜೀವಿ ಸರ್ಜಾ ಅಭಿನಯಿಸುತ್ತಿರುವ ಸಿಂಗ ಸಿನಿಮಾ ಅದಾಗಲೇ ಶೂಟಿಂಗ್ ಮುಗಿಸಿರೋದು ಮಾತ್ರವಲ್ಲ, ಹೆಚ್ಚೂಕಮ್ಮಿ ಬಿಡುಗಡೆಗೂ ತಯಾರಾಗಿಬಿಟ್ಟಿದೆ. ಜನವರಿಯಲ್ಲಿ ಶುರುವಾದ ಕಮರ್ಷಿಯಲ್ ಚಿತ್ರವೊಂದು ಇಷ್ಟು ಬೇಗ ಹೇಗೆ ಬಿಡುಗಡೆಗೆ ತಯಾರಾಗಲು ಸಾಧ್ಯ ಅನ್ನೋದು ಎಲ್ಲರಿಗೂ ಆಶ್ಚರ್ಯ. ಮೊನ್ನೆ ದಿನ ‘ಸಿಂಗ’ನ ಟೀಸರ್ ಕೂಡಾ ರಿಲೀಸಾಗಿಬಿಟ್ಟಿದೆ.

ಹೇಗೆ ಇಷ್ಟು ಸ್ಪೀಡಾಗಿ ಸಿನಿಮಾ ತಯಾರಾಯಿತು ಅನ್ನೋದರ ಜಾಡು ಹಿಡಿದು ಹುಡುಕಿದಾಗ ಸಿಕ್ಕ ಮಾಹಿತಿಯೆಂದರೆ ಇದು 2013ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ಕುಟ್ಟಿಪುಲಿ ಸಿನಿಮಾದ ರಿಮೇಕು ಅನ್ನೋದು. ಈಗಾಗಲೇ ಪಕ್ಕದ ರಾಜ್ಯದಲ್ಲಿ ಬಂದು ಹಿಟ್ ಆಗಿದ್ದ ಸಿನಿಮಾ ಆಗಿರೋದರಿಂದ ಚಿತ್ರೀಕರಣವನ್ನು ಸಲೀಸಾಗಿ ಮಾಡಿಮುಗಿಸಿದ್ದಾರೆ. ಅಂದಹಾಗೆ, ಇದು ತಮಿಳಿನ ರಿಮೇಕ್ ಸಿನಿಮಾ ಅನ್ನೋದನ್ನು ಚಿತ್ರತಂಡ ಎಲ್ಲೂ ಹೇಳಿಕೊಂಡಿಲ್ಲ. ಎಂ. ಮುತ್ತಯ್ಯ ಮತ್ತು ಭೂಪತಿ ಪಾಂಡ್ಯನ್ ಸೇರಿ ನಿರ್ದೇಶಿಸಿದ್ದ ಕುಟ್ಟಿ ಪುಲಿಯಲ್ಲಿ ನಟ ಸಸಿಕುಮಾರ್ ಹೀರೋ ಆಗಿ ನಟಿಸಿದ್ದರು. ಥ್ರಿಲ್ಲರ್ ಜೊತೆಗೆ ಆಕ್ಷನ್ ಜಾನರಿನ ಈ ಸಿನಿಮಾ ಒಂದು ಮಟ್ಟಕ್ಕೆ ಹೆಸರು ಮಾಡಿತ್ತು.  ಉದಯ್ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ರಾಮ್ ಲೀಲಾ ಅನ್ನೋ ಸಿನಿಮಾದಲ್ಲಿ ಚಿರು ಇದೇ ವಿಜಯ್ ಕಿರಣ್ ಜೊತೆ ಕೆಲಸ ಮಾಡಿದ್ದರು.

Continue Reading

ಕಲರ್ ಸ್ಟ್ರೀಟ್

ಸುಮಲತಾ ಅಂಬರೀಶ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?

Published

on


ಮೈತ್ರಿ ಸರ್ಕಾರದ ಕೂಡಿಕೆ ಆಟದ ಮುಂದೆ ಅಂಬರೀಶ್ ಮಡದಿ ಸುಮಲತಾ ರಾಜಕೀಯ ಹೆಜ್ಜೆಗಳ ಮುಂದೆ ನಾನಾ ಸವಾಲುಗಳು ಎದುರಾಗಿವೆ. ಮಂಡ್ಯ ಸೀಮೆಯ ತುಂಬಾ ಪ್ರೀತಿ, ಅಭಿಮಾನ ಹೊಂದಿದ್ದ ಅಂಬಿ ಮಡದಿಯ ವಿರುದ್ಧ ನಡೆಯುತ್ತಿರೋ ರಾಜಕೀಯ ದಾಳಗಳ ವಿರುದ್ಧ ಅಭಿಮಾನಿಗಳೆಲ್ಲ ಆಕ್ರೋಶಗೊಂಡಿದ್ದಾರೆ. ಆದರೂ ಕೂಡಾ ಹಳೇದನ್ನೆಲ್ಲ ನೆನಪಿಟ್ಟುಕೊಂಡ ಚಿತ್ರ ತಾರೆಯರನೇಕರು ರಾಜಕೀಯ, ಪಕ್ಷಗಳನ್ನು ಮೀರಿ ಸುಮಲತಾರ ಬೆಂಬಲಕ್ಕೆ ನಿಲ್ಲೊ ಮಾತಾಡುತ್ತಿದ್ದಾರೆ.

ಇದೀಗ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಅವರೂ ಕೂಡಾ ಈ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತಾಡಿದ್ದಾರೆ. ರಾಜಕೀಯವನ್ನು ಮೀರಿ ಅಂಬರೀಶ್ ಅವರೊಂದಿಗಿನ ದಶಕಗಳ ಸ್ನೇಹವನ್ನು ಮೆಲುಕು ಹಾಕಿರುವ ಜಗ್ಗೇಶ್, ಸುಮಲತಾರನ್ನು ಜನರೇ ಗೆಲ್ಲಿಸಿತ್ತಾರೆಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಇಷ್ಟು ವರ್ಷ ಮಾಡಿರೋ ಸಾಧನೆ, ಒಳ್ಳೆತನಗಳೇ ಸುಮಲತಾರ ಕೈಹಿಡಿಯುತ್ತವೆ ಅನ್ನೋ ಭವಿಷ್ಯವನ್ನೂ ಜಗ್ಗೇಶ್ ಹೇಳಿದ್ದಾರೆ. ಜೊತೆಗೆ ಅವರು ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆಂಬ ಭರವಸೆಯ ಮಾತುಗಳೂ ಕೂಡಾ ಜಗ್ಗಣ್ಣನ ಕಡೆಯಿಂದ ಬಂದಿವೆ. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೇರೆಯದ್ದೇ ವಾತಾವರಣವಿದೆ. ಆರಂಭದಲ್ಲಿ ಸುಮಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟು ಗ್ಯಾರೆಂಟಿ ಎಂಬ ವಾತಾವರಣ ಇತ್ತು. ಆದರೀಗ ಅದು ಸಂಪೂರ್ಣ ಉಲ್ಟಾ ಹೊಡೆದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ನಿಖಿಲ್ ರನ್ನು ಕಣಕ್ಕಿಳಿಸಿದೆ. ಇದೀಗ ಸುಮಲತಾ ಒಂದೋ ಬಿಜೆಪಿ ಸೇರಬೇಕು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಬೇಕು. ಅತ್ತ ಬಿಜೆಪಿ ಅವರನ್ನು ಸೆಳೆದುಕೊಳ್ಳುವ ಕಸರತ್ತು ನಡೆಸುತ್ತಿದೆ. ಜಗ್ಗಣ್ಣನ ಆಂತರ್ಯದಲ್ಲಿಯೂ ಸುಮಲತಾ ಬಿಜೆಪಿ ಸೇರಲಿ ಅನ್ನೋ ಇರಾದೆ ಇದ್ದಂತಿದೆ.

Continue Reading

Trending