One N Only Exclusive Cine Portal

ರಕ್ಷಿತ್ ಶೆಟ್ಟಿಯ ಹೊಸಾ ಕಿರಿಕ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿಯ ವರ್ತನೆಯೇ ಇಂಥಾದ್ದೋ ಅಥವಾ ಎರಡು ಸಿನಿಮಾಗಳ ಸಾಧಾರಣ ಗೆಲುವಿನ ಪಿತ್ಥ ತಲೆಗೇರಿಕೊಂಡು ಹೀಗೆ ವರ್ತಿಸುತ್ತಿದ್ದಾರೋ ಅವರದ್ದೇ ಊರ ಬದಿ ದೈವವಾದ ಬೊಬ್ಬರ್ಯನೇ ಬಲ್ಲ. ಆದರೆ ರಕ್ಷಿತ್ ತಮ್ಮದೇ ಯಡವಟ್ಟುಗಳ ಮೂಲಕ ವಿನಾ ಕಾರಣ ವಿವಾದ ಸೃಷ್ಟಿಸುತ್ತಿದ್ದಾರೆಂದು ಯಾರಿಗಾದರೂ ಅನ್ನಿಸುತ್ತೆ!
ಇದೀಗ ಏಕಾಏಕಿ ರಕ್ಷಿತ್ ಶೆಟ್ಟಿ ಬಗ್ಗೆ ಮಾತಾಡಲು ಕಾರಣ ಈವತ್ತು ಬೆಳಗ್ಗಿನಿಂದಲೇ ಫೇಸ್‌ಬುಕ್ಕಲ್ಲಿ ಹೊತ್ತಿಕೊಂಡಿರೋ ಕದನವೇ ಕಾರಣ. ರಕ್ಷಿತ್ ವಿರುದ್ಧ ಇದೀಗ ಗೋಲ್ಡನ್ ಸ್ಟಾರ್ ಫ್ಯಾನ್ಸ್ ಎಗಾದಿಗಾ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಶೆಟ್ಟರು ಹಾಕಿದೊಂದು ಸ್ಟೇಟಸ್!
ಚಮಕ್ ಚಿತ್ರದ ಗಣೇಶ್ ಅವರ ಇಂಟ್ರಡಕ್ಷನ್ ಸಾಂಗ್ ಒಂದನ್ನೆತ್ತಿಕೊಂಡ ರಕ್ಷಿತ್ ರಶ್ಮಿಕಾ ಮಂದಣ್ಣ ಬಗ್ಗೆ `ನಮ್ಮುಡುಗಿ ಆಸಮ್ ಅಂತ ಹೊಗಳಿದ್ದಾರೆ. ಅಷ್ಟಕ್ಕೂ ರಕ್ಷಿತ್ ಹೀಗೆ ಕಮೆಂಟ್ ಮಾಡಿರೋದು ಚಮಕ್ ಚಿತ್ರದಲ್ಲಿ ಗಣೇಶ್ ಎಂಟ್ರಿ ಸಾಂಗ್ ಬಗ್ಗೆ. ಅದರಲ್ಲಿ ರಶ್ಮಿಕಾ ಮಂದಣ್ಣರ ಎರಡೋ ಮೂರೋ ಶಾಟ್‌ಗಳಿವೆಯಷ್ಟೇ. ಆದರೆ ಗಣೆಶ್ ಬಗ್ಗೆ ಒಂದೆರಡು ಮಾತು ಹೇಳೋ ಸೌಜನ್ಯವೂ ಇಲ್ಲದೆ ರಶ್ಮಿಕಾ ಮಾತ್ರ ಮುಖ್ಯ ಎಂಬಂತೆ ಸ್ಟೇಟಸ್ ಹಾಕಿರೋ ರಕ್ಷಿತ್ ಗಣೇಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಬ್ಬ ಹೀರೋ ಮತ್ತೋರ್ವನನ್ನು ಬೆಂಬಲಿಸುವ, ಮೆಚ್ಚುಗೆಯ ಮಾತುಗಳನ್ನಾಡುವ ಸೌಜನ್ಯದ ಜಾಗವನ್ನು ಇಂಥಾ ಕಿರಿಕ್ಕುಗಳು ಆವರಿಸಿಕೊಂಡಿರೋದರಿಂದಲೇ ಅಭಿಮಾನಿಗಳ ಮಧ್ಯೆ ಬೆಂಕಿ ಹೊತ್ತಿಕೊಳ್ಳುತ್ತದೆ. ರಶ್ಮಿಕಾ ಮಂದಣ್ಣ ಮಾತ್ರ ಆಸಮ್ ಅನ್ನೋ ಬದಲು ಗಣೇಶ್ ಅವರ ಬಗೆಗೂ ಚೂರು ಮೆಚ್ಚುಗೆ ಸೂಚಿಸಿದ್ದರೂ ರಕ್ಷಿತ್ ಘನತೆ ಹೆಚ್ಚಾಗುತ್ತಿತ್ತೇ ಹೊರತು ಕಳೆದುಕೊಳ್ಳೋದೇನೂ ಇರಲಿಲ್ಲ. ಗಣೇಶ್ ಈವರೆಗೆ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ವಿಧೇಯತೆಯಿಂದ ಗಮನ ಸೆಳೆದಿರುವವರು. ರಕ್ಷಿತ್ ಕಡೆಯಿಂದ ಅವರಿಗೆ ಅವಮಾನವಾಗಿದೆ ಅಂತ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image