One N Only Exclusive Cine Portal

ಸ್ಕ್ರಿಪ್ಟ್ ರೈಟರ್ ಕೋನ ವೆಂಕಟ್‌ಗೂ ಶ್ರೀ ರೆಡ್ಡಿ ಸಂಕಟ!

ಬಾಲಿವುಡ್ ಮೂಲದ ನಟಿ ಶ್ರೀ ರೆಡ್ಡಿ ಒಂದಿಡೀ ತೆಲುಗು ಚಿತ್ರರಂಗವನ್ನು ನ್ಯೂಕ್ಲಿಯರ್ ಬಾಂಬಿನಂತೆ ಕಾಡಲಾರಂಭಿಸಿದ್ದಾಳೆ. ಕಾಸ್ಟ್ ಕೌಚಿಂಗ್ ಮಾಡೆಉವವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಆಕೆ ರಾಣಾ ದಗ್ಗುಬಾಟಿ ತಮ್ಮನನ್ನು ಬೆತ್ತಲುಗೊಳಿಸಿದ ಬೆನ್ನಲ್ಲಿಯೇ ತೆಲುಗಿನ ಖ್ಯಾತ ಸಿನಿಮಾ ಬರಹಗಾರ ಕೋನ ವೆಂಕಟ್‌ಗೆ ಗುರಿಯಿಟ್ಟಿದ್ದಾಳೆ!

ತೆಲುಗು ಚಿತ್ರರಂಗದ ಸ್ಟಾರ್ ರೈಟರ್ ಕೋನ ವೆಂಕಟ್ ವಯಸ್ಸಿನ ವಿಚಾರದಲ್ಲಿ ಅಂಕಲ್ ವೆಂಕಟ್. ಆದರೆ ಅಂಥಾ ಆಸಾಮಿ ಬೇರೆ ಬೇರೆ ಚಿತ್ರಗಳಲ್ಲಿ ಅವಕಾಶ ಕೊಡಿಸೋದಾಗಿ ಪೂಸಿ ಹೊಡೆದು ತನ್ನನ್ನು ಮಂಚಕ್ಕೆ ಕೆಡವಿಕೊಳ್ಳಲು ಪ್ರಯತ್ನಿಸಿದ್ದ ಅಂತ ಶ್ರೀ ರೆಡ್ಡಿ ಆರೋಪಿಸಿದ್ದಾಳೆ. ಅಷ್ಟಕ್ಕೂ ದೂಕುಡು ಎಂಬ ಸೂಪರ್ ಹಿಟ್ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವ ಮೂಲಕ ಸದ್ದು ಮಾಡಿರೋ ವೆಂಕಟ್ ಮೇಲೆ ಇಂಥಾ ಆರೋಪ ಬಂದಿದ್ದು ಇದೇ ಮೊದಲು. ಈ ಶಾಕಿನಲ್ಲಿರುವ ವೆಂಕಟ್ ಶ್ರೀ ರೆಡ್ಡಿಯ ಆರೋಪದ ಬಗ್ಗೆ ಓಪನ್ನಾಗಿ ಮಾತಾಡಿದ್ದಾರೆ.

`ಈ ನಟಿ ನನ್ನನ್ನೂ ಸೃಇದಂತೆ ತೆಲುಗು ಚಿತ್ರರಂಗದ ಬಹುತೇಕರ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಿರೋದನ್ನು ಕಂಡು ನಿಜಕ್ಕೂ ಶಾಕ್ ಆಗಿದೆ. ಇದರ ಬಗ್ಗೆ ಸರ್ಕಾರವೇ ಗಮನ ಹರಿಸಿ ಪೊಲೀಸರಿಂದ ತನಿಖೆ ನಡೆಸಿ ನಿಜವಾಗಿಯೂ ತಪ್ಪು ಮಾಡದವರು ಯಾರಾದರೂ ಇದ್ದರೆ ಶಿಕ್ಷೆ ನೀಡಲಿ. ಈ ಮೂಲಕ ತನ್ನಂಥವರು ವಿನಾ ಕಾರಣ ಮರ್ಯಾದೆ ಹರಾಜು ಹಾಕಿಕೊಳ್ಳುವಂತಾಗೋದನ್ನು ತಪ್ಪಿಸಲಿ ಅಂದಿದ್ದಾರೆ.

ಇದಲ್ಲದೆ ಶ್ರೀ ರೆಡ್ಡಿಯಂಥಾ ಪರಭಾಷಾ ನಟಿಯರು ಬೇಕಂತಲೇ ಪಬ್ಲಿಸಿಟಿಗಾಗಿ ಇಂಥಾ ಕೀಳು ಮಟ್ಟಕ್ಕಿಳಿಯುತ್ತಾರೆಂದಿರುವ ವೆಂಕಟ್ ಅವರ ಮುಂದಿನ ಚಿತ್ರ ಗೀತಾಂಜಲಿಗೆ ಅಪ್ಪಟ ತೆಲುಗು ಹುಡುಗಿಯನ್ನೇ ನಾಯಕಿಯನ್ನಾಗಿಸಿದ್ದಾರಂತೆ. ಪರಭಾಷೆಗಳಿಂದ ಬಂದು ಹೀಗೆ ಬಾಲ ಬಿಚ್ಚಿ ಮಾನ ಹರಾಜು ಹಾಕುವ ನಟಿಯರನ್ನು ತೆಲುಗು ಚಿತ್ರಗಳಿಗೆ ಯಾವ ಕಾರಣಕ್ಕೂ ಹಾಕಿಕೊಳ್ಳಬಾರದೆಂದಿರೋ ವೆಂಕಟ್ ಇನ್ನು ಮುಂದೆ ತೆಲುಗು ಚಿತ್ರಗಳಲ್ಲಿ ತೆಲುಗು ನಟಿಯರಿಗೆ ಮಾತ್ರವೇ ಅವಕಾಶ ಸಿಗುವಂತಾಗಬೇಕು ಅಂದಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image