Connect with us

ಕಲರ್ ಸ್ಟ್ರೀಟ್

ಕುಸ್ತಿಗಾಗಿ ದುನಿಯಾ ವಿಜಯ್ ಮಗನ ಕಸರತ್ತು!

Published

on

ಈಗ ಕುಸ್ತಿ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರಿಗೆ ಸರಿ ಹೊಂದುವಂಥಾ ಪಕ್ಕಾ ಮಾಸ್ ಸಬ್ಜೆಕ್ಟ್ ಹೊಂದಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಪ್ರೇಕ್ಷಕರೆಲ್ಲರಲ್ಲಿಯೂ ಕುತೂಹಲ ಮೂಡಿಕೊಂಡಿದೆ.

ಇಂಥಾ ಚಿತ್ರದಲ್ಲಿ ವಿಜಯ್ ಅವರ ಪುಟ್ಟ ಮಗ ಸಾಮ್ರಾಟ್ ವಿಜಯ್ ನಟಿಸುತ್ತಿದ್ದಾನೆಂಬ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಇದೀಗ ಸಾಮ್ರಾಟನನ್ನು ಈ ಚಿತ್ರದ ಪಾತ್ರಕ್ಕೆ ಸಜ್ಜುಗೊಳಿಸೋದಕ್ಕಾಗಿ ನಡೆಯುತ್ತಿರೋ ಕಸರತ್ತಿನ ವೀಡಿಯೋ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಫಿಟ್ನೆಸ್ ಬಗ್ಗೆ ಅಪಾರವಾದ ಕಾಳಜಿ ಮತ್ತು ಕ್ರೇಜ್ ಹೊಂದಿರುವ ದುನಿಯಾ ವಿಜಯ್ ಈಗಾಗಲೇ ಕುಸ್ತಿಯ ಅಖಾಡಕ್ಕಿಳಿಯಲು ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಂಡಿದ್ದಾರೆ. ಇದೀಗ ಖುದ್ದು ವಿಜಯ್ ಅವರೇ ಮುಂದಾಳತ್ವ ವಹಿಸಿ ತಮ್ಮ ಮಗ ಸಾಮ್ರಾಟ್’ನನ್ನು ದೈಹಿಕವಾಗಿ ಕುಸ್ತಿ ಚಿತ್ರದ ಪಾತ್ರಕ್ಕಾಗಿ ಅಣಿಗೊಳಿಸಿದ್ದಾರೆ.

ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತರಾದ ಪ್ರಸಾದ್ ಅವರಿಂದ ಸಾಮ್ರಾಟನಿಗೆ ವಿಜಯ್ ತರಬೇತಿ ಕೊಡಿಸಿದ್ದಾರೆ. ದೇಹವನ್ನು ಬೇಕಾದಂತೆ ಒಗ್ಗಿಸಿಕೊಳ್ಳುವ ನಾನಾ ಕ್ಲಿಷ್ಟಕರವಾದ ದೈಹಿಕ ಕಸರತ್ತುಗಳನ್ನು ಸಮರ್ಥನಿಂದ ಮಾಡಿಸುತ್ತಾ ಆತನ ದೇಹವನ್ನು ಕುಸ್ತಿ ಚಿತ್ರದ ಪಾತ್ರಕ್ಕಾಗಿ ಒಗ್ಗಿಸಲಾಗಿದೆ. ಇದರ ಜೊತೆಗೇ ಕೆಲ ಸ್ಟಂಟ್ಸ್‌ಗಳ ಪೂರ್ವಭಾವಿ ತರಬೇತಿಯನ್ನೂ ಕೂಡಾ ವಿಜಿ ತಮ್ಮ ಮಗನಿಗೆ ಕೊಡಿಸಿದ್ದಾರೆ.

ಈ ವೀಡಿಯೋದಲ್ಲಿನ ದೃಷ್ಯಾವಳಿಗಳನ್ನು ಗಮನಿಸಿದರೇನೇ ತಮ್ಮ ಮಗ ಸಮರ್ಥನ ಎಂಟ್ರಿಯ ಬಗ್ಗೆ ವಿಜಯ್ ಅದೆಷ್ಟು ಗಂಭೀರವಾಗಿದ್ದಾರೆಂಬುದು ಸ್ಪಷ್ಟವಾಗುತ್ತದೆ. ತಾವೇ ಖುದ್ದಾಗಿ ಬಳಿಯಲ್ಲಿದ್ದು ಅತ್ಯಂತ ಕಷ್ಟಕರವಾದ, ಅಪಾಯಕಾರಿಯಾದ ಕಸರತ್ತುಗಳನ್ನ ಸಾಮ್ರಾಟನಿಗೆ ಕರಗತ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಾ ಕುಸ್ತಿ ಚಿತ್ರದ ಬಗೆಗಿನ ಕ್ಯೂರಿಯಾಸಿಟಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಕಲರ್ ಸ್ಟ್ರೀಟ್

ಕಾಳಿದಾಸನ ಜೋಡಿಯಾಗಿ ಬರ‍್ತಾಳೆ ಮೇಘನಾ!

Published

on


ಮೇಘನಾ ಗಾಂವ್‌ಕರ್ ಎಂಬ ನಟಿ ಎತ್ತ ಹೋದಳು ಅಂತ ಒಂದಷ್ಟು ಜನರಾದರೂ ಹುಡುಕಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಕೆ ಮತ್ತೆ ಮರಳಿದ್ದಾಳೆ. ಕಾಳಿದಾಸ ಕನ್ನಡ ಮೇಸ್ಟ್ರು ಎಂಬ ಚಿತ್ರಕ್ಕೆ ಮೇಘನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!

ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದೇ ಕೊನೆ. ಆ ನಂತರ ಈಕೆಯ ಪತ್ತೆ ಇರಲಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಮಾಡಿಕೊಂಡ ರಕ್ಷಿತ್ ಶೆಟ್ಟಿ ಮೇಘನಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಅಂತೊಂದು ರೂಮರ್ ಹರಡಿತ್ತಲ್ಲಾ? ಆ ಮೂಲಕವೇ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದ ಈಕೆ ಮತ್ತೆ ನಟಿಯಾಗಿ ಮರಳಿದ್ದಾಳೆ.

ಗೀತಸಾಹಿತಿ ಕವಿರಾಜ್ ಕಾಳಿದಾಸ ಕನ್ನಸ ಮೇಶ್ಟ್ರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಕವಿರಾಜ್ ಕೂಡಾ ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಇದೇ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬದುಕಿಗೆ ಹತ್ತಿರವಾದ ಕಥೆ ಹೊಂದಿರೋ ಪಕ್ಕಾ ಕಮರ್ಶಿಯಲ್ ಮೆಥೆಡ್ಡಿನ ಈ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಲಿದ್ದಾರೆ. ಇದೇ ಮೊದಲ ಬಾರಿ ಜಗ್ಗಣ್ಣನಿಗೆ ಮೇಘನಾ ನಾಯಕಿಯಾಗಿ ನಟಿಸುತ್ತಿದ್ದಾಳೆ.

Continue Reading

ಕಲರ್ ಸ್ಟ್ರೀಟ್

ಬಿಚ್ಚುಗತ್ತಿ ಬರಮಣ್ಣ ಮತ್ತು ನೀರ್ದೋಸೆ ಹರಿಪ್ರಿಯಾ!

Published

on

ಹರಿಪ್ರಿಯಾ ಐತಿಹಾಸಿಕ ಚಿತ್ರವೊಂದರ ಮೂಲಕ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಲು ಉತಯಾರಾಗಿದ್ದಾರೆ. ಈ ವರೆಗೂ ಇಮೇಜಿನ ಹಂಗಿಗೆ ಬೀಳದೆ ಭಿನ್ನ ಪಾತ್ರಗಳನ್ನೇ ಧ್ಯಾನಿಸುತ್ತಾ ಬಂದಿರುವ ಹರಿಪ್ರಿಯಾ ಪಾಲಿಗೆ ಈಗ ಸಿಕ್ಕಿರೋದು ನಿಜಕ್ಕೂ ಬಂಪರ್ ಅವಕಾಶ!

ನಾದಬ್ರಹ್ಮ ಹಂಸಲೇಖ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವನ್ನು ನಿರ್ದೇಶಲನ ಮಾಡಲಿಯದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿಯೂ ನಿಕ್ಕಿಯಾಗಿದ್ದರು. ಬರಮಣ್ಣ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ರಾಜ್‌ವರ್ಧನ್‌ಗೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.

ಬಿಚ್ಚುಗತ್ತಿ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರ ಬಿ ಎಲ್ ವೇಣು ಅವರ ರಾಜಾ ಭರಮಣ್ಣ ನಾಯಕ ಎಂಬ ಕಾದಂಬರಿ ಆಧಾರಿತ ಚಿತ್ರ. ಇದನ್ನು ಚಿತ್ರವಾಗಿಸಬೇಕೆಂದು ಹಲವಾರು ವರ್ಷಘಗಳಿಂದ ಅಂದುಕೊಂಡಿದ್ದ ಹಂಸಲೇಖಾ ಅದಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಪೂ ಹೆಚ್ಚಿನ ಮಹತ್ವ ಇರೋದರಿಂದ ಅದಕ್ಕೆ ತಕ್ಕುದಾದ ನಾಯಕಿಯ ಹುಡುಕಾಟ ಚಾಲ್ತಿಯಲ್ಲಿತ್ತು. ಹರಿಪ್ರಿಯಾ ಆಯ್ಕೆಯ ಮೂಲಕ ಅದು ಸಮಾಪ್ತಿಗೊಂಡಿದೆ. ರಾಜ್‌ವರ್ಧನ್ ಈ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಹರಿಪ್ರಿಯಾ ಅವರಿಗೂ ಅಗತ್ಯ ತರಬೇತಿ ಕೊಟ್ಟಾದ ನಂತರ ಚಿತ್ರೀಕರಣ ಶುರುವಾಗಲಿದೆ.

Continue Reading

ಕಲರ್ ಸ್ಟ್ರೀಟ್

ತಮಿಳು ಚಿತ್ರಕ್ಕೆ ಹೀರೋ ಆದ್ರು ನೀನಾಸಂ ಸತೀಶ್!

Published

on


ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಬೇಡಿಕೆ ಹೆಚ್ಚಿಕೊಂಡಿದ್ದು, ಸಂಭಾವನೆ ಏರಿಕೊಂಡಿದ್ದೆಲ್ಲ ಗೊತ್ತೇ ಇದೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಸರದಿಯಲ್ಲಿ ನಿಂತಿರುವಾಗಲೇ ಸತೀಶ್ ಏಕಾಏಕಿ ತಮಿಳಿಗೆ ಹಾರಿದ್ದಾರೆ. ಈ ಮೂಲಕ ಅವರು ದಕ್ಷಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

ನೀನಾಸಂ ಸತೀಶ ನಟಿಸಲಿರುವ ತಮಿಳು ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿದಿದೆ. ತಮಿಳು ಚಿತ್ರರಂಗದಲ್ಲಿ ಕ್ರಿಯೇಟಿವ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೀಶ್ ನಿರ್ದೇಸನ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪಗೈನಾನುಕು ಅರುಲ್ವೈ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇಷ್ಟರಲ್ಲಿಯೇ ಸ್ವಿಜರ್‌ಲೆಂಡಿನಲ್ಲಿ ಅದ್ದೂರಿಯಾಗಿಯೇ ಟೈಟಲ್ ಲಾಂಚ್ ಮಾಡಲೂ ನಿರ್ಧರಿಸಲಾಗಿದೆ.

ಹಾಗೆ ನೋಡಿದರೆ ಈಗೊಂದಷ್ಟು ವರ್ಷಘಗಳ ಹಿಂದೆಯೇ ನೀನಾಸಂ ಸತೀಶ್ ತಮಿಳು ಚಿತ್ರದಲ್ಲಿ ನಟಿಸ ಬೇಕಿತ್ತು. ಲೂಸಿಯಾ ಚಿತ್ರ ತೆರೆ ಕಂಡ ತಿಂಗಳೊಪ್ಪತ್ತಿನಲ್ಲಿಯೇ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ಲೂಸಿಯಾ ಚಿತ್ರವನ್ನು ವೀಕ್ಷಿಸಿದ್ದ ಅನೀಶ್ ನೀನಾಸಂ ನಟನೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಸತೀಶ್‌ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ಇವರ ನಡುವಲ್ಲೊಂದು ಸ್ನೇಹ ಮೂಡಿಕೊಂಡಿತ್ತು.
ಹೀಗೆ ಸತೀಶ್‌ಗೆ ಗೆಳೆಯನಾಗಿದ್ದ ಅನೀಶ್ ಈಗ್ಗೆ ಮೂರು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಕಡೆಗೂ ಅದೀಗ ಸಾಕಾರಗೊಂಡಿದೆ. ಈ ಚಿತ್ರದ ಬಗ್ಗೆ ಅನೀಶ್ ಅವರೇ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ತಕ್ಷಣವೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz