Connect with us

ಅಪ್‌ಡೇಟ್ಸ್

ಲಂಡನ್ ಲಂಬೋದರನಿಗೆ ಫಿದಾ ಆದಳು ಶೃತಿ ಪ್ರಕಾಶ್!

Published

on

ಕನ್ನಡತಿಯಾದರೂ ಬಾಂಬೆಯಲ್ಲಿ ಬೇರಿಳಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಕನ್ನಡಿಗರಿಗೆ ಪರಿಚಯವಾದದ್ದು ಬಿಗ್‌ಬಾಸ್ ಶೋ ಮೂಲಕ. ಒಂದಷ್ಟು ತಿಕ್ಕಲುಗಳನ್ನು ಸೃಷ್ಟಿಸಿದ ಬಿಗ್‌ಬಾಸು ಅಪರೂಪಕ್ಕೆ ಮನುಷ್ಯರನ್ನೂ ಪರಿಚಯಿಸೋದಿದೆ. ಈ ಐದೂ ಸೀಜನ್ನುಗಳಲ್ಲಿ ಆ ಕೆಟಗರಿಯಲ್ಲಿ ಸ್ಥಾನ ಪಡೆಯೋ ಕೆಲವೇ ಕೆಲಸ ಸ್ಪರ್ಧಿಗಳಲ್ಲಿ ಶ್ರುತಿ ಕೂಡಾ ಒಬ್ಬಳು!

ಸಿಂಗರ್ ಆಗಿ ನಾನಾ ಕವರ್ ಸಾಂಗುಗಳನ್ನು ಹಾಡಿ, ಹಿಂದಿ ಸೀರಿಯಲ್ಲಿನಲ್ಲೂ ಭಾರೀ ಪ್ರಸಿದ್ಧಿ ಪಡೆದಿದ್ದಾಕೆ ಶೃತಿ. ಆದರೆ ತವರು ನೆಲಕ್ಕೇ ಅಪರಿಚಿತಳಾಗಿದ್ದ ಈಕೆಯೀಗ ಕನ್ನಡದಲ್ಲಿಯೇ ನಟಿಯಾಗಿ ಬೆಳೆಯುತ್ತಿದ್ದಾಳೆ. ಈಕೆ ನಾಯಕಿಯಾಗಿ ನಟಿಸಿರೋ ಮೊದಲ ಚಿತ್ರ ಲಂಡನ್‌ನಲ್ಲಿ ಲಂಬೋದರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಘಳಿಗೆಯಲ್ಲಿಯೇ ಶ್ರುತಿ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾಳೆ!

ರಾಮ್ ವಿನಯ್ ಗೌಡ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಫಿದಾ ಅಂತ ಹೆಸರಿಡಲಾಗಿದೆ. ಶ್ರುತಿ ಪ್ರಕಾಶ್ ಲಂಡನ್‌ನಲ್ಲಿ ಲಂಬೋದರ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗಲೇ ಈ ಚಿತ್ರದ ಆಫರ್ ಬಂದಿತ್ತಂತೆ. ನಂತರ ಚಿತ್ರೀಕರಣದ ನಡುವೆಯೇ ಕಥೆ ಕೇಳಿದ ಶ್ರುತಿ ಸ್ಪಾಟಲ್ಲಿಯೇ ಒಪ್ಪಿಗೆ ಸೂಚಿಸಿದ್ದಾಳೆ. ಶ್ರಿತಿ ಹೀಗೆ ಮರು ಮಾತಿಲ್ಲದೆ ಈ ಕಥೆಯನ್ನು ಒಪ್ಪಿಕೊಳ್ಳಲು ಕಾರಣ ಅದು ಸತ್ಯ ಕಥೆಯಾಧಾರಿತವಾದದ್ದು ಎಂಬುದಂತೆ.

ಫಿದಾ ಚಿತ್ರದ ಕಥೆ ೨೦೦೯ರಲ್ಲಿ ಮೈಸೂರಲ್ಲಿ ನಡೆದಿದ್ದೊಂದು ಘಟನೆಯನ್ನಾಧರಿಸಿದ್ದಂತೆ. ಮನ ಕಲಕುವ ಈ ಕಥಾನಕದಲ್ಲಿ ತನ್ನ ಪಾತ್ರವೂ ಚೆನ್ನಾಗಿರೋದರಿಂದ ಈ ಚಿತ್ರವನ್ನಾಕೆ ಒಪ್ಪಿಕೊಂಡಿದ್ದಾಳಂತೆ. ಫಿದಾ ಚಿತ್ರದಲ್ಲಿ ಶ್ರುತಿಗೆ ಹರ್ಷನ್ ಗೌಡ ನಾಯಕನಾಗಿ ನಟಿಸಲಿದ್ದಾನೆ.

Continue Reading
Click to comment

Leave a Reply

Your email address will not be published. Required fields are marked *

ಅಪ್‌ಡೇಟ್ಸ್

ಟಕ್ಕರ್ ಸೆಟ್ಟಿಗೆ ದಿನಕರ್ ಸರ್‌ಪ್ರೈಸ್ ವಿಸಿಟ್!

Published

on

ಮಾವಂದಿರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಅವರುಗಳ ಮಾರ್ಗದರ್ಶನದಂತೆಯೇ ಮುಂದಡಿಯಿಡುತ್ತಾ ಬಂದಿರುವ ಮನೋಜ್ ಈಗ ಟಕ್ಕರ್ ಚಿತ್ರದ ನಾಯಕ ನಟ. ಈ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ಬಿಡುವಿರದೆ ನಡೆಸಿ, ಈಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಇದೀಗ ದಿನಕರ್ ಮಡದಿ ಮಾನಸಾ ಅವರೊಂದಿಗೆ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿ ಸೋದರಳಿಯ ಮನೋಜ್ ಅವರನ್ನು ಹುರಿದುಂಬಿಸಿದ್ದಾರೆ!

ಬೆಂಗಳೂರಿನ ಹೆಚ್.ಎಂ.ಟಿ, ಕಂಠೀರವ ಸ್ಟುಡಿಯೋ, ನಾಗರಬಾವಿ ಹೀಗೆ.. ಟಕ್ಕರ್ ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಮನೋಜ್ ಮತ್ತು ಭಜರಂಗಿ ಲೋಕಿ ನಡುವಿನ ಮುಖ್ಯವಾದ ಫೈಟ್ ಸೀನುಗಳು ಚಿತ್ರೀಕರಿಸಲ್ಪಡುತ್ತಿವೆ. ಈ ಚಿತ್ರೀಕರಣ ನಡೆಯುತ್ತಿರುವಾಗಲೇ ದಿನಕರ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಮಾನಸಾ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸರ್‌ಪ್ರೈಸ್ ನೀಡಿದ್ದಾರೆ.

ಟಕ್ಕರ್ ಚಿತ್ರ ಆರಂಭವಾದಾಗಿನಿಂದಲೂ ಅದೇನೇ ಕೆಲಸದೊತ್ತಡ ಇದ್ದರೂ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ನೀಡುತ್ತಾ ಬಂದಿದ್ದವರು ದಿನಕರ್. ಇದೀಗ ಖುದ್ದಾಗಿ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿದ ದಿನಕರ್ ಅವರು ಚಿತ್ರದ ಇದುವರೆಗಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡು ಖುಷಿಗೊಂಡಿದ್ದಾರೆ. ಸೋದರಳಿಯ ಮನೋಜ್ ಬೆನ್ತಟ್ಟುತ್ತಲೇ ಇಡೀ ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

ದಿನಕರ್ ಮತ್ತು ಅವರ ಮಡದಿ ಮಾನಸಾ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಕೂಡಾ ಅವರು ಟಕ್ಕರ್ ಸೆಟ್ಟಿಗೆ ಭೇಟಿ ನೀಡಿರೋದು ಅವರಿಗೆ ಸೋದರಳಿಯ ಮನೋಜ್ ಮೇಲಿರೋ ಅಪಾರ ಕಾಳಜಿ, ಪ್ರೀತಿಯ ಪ್ರತೀಕ. ದರ್ಶನ್ ಅವರಂತೆಯೇ ಮನೋಜ್‌ಗೆ ಕಾಲ ಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿರುವ ದಿನಕರ್ ಭೇಟಿಯಿಂದ ಟಕ್ಕರ್ ಚಿತ್ರ ತಂಡಕ್ಕೆ ಹೊಸಾ ಹುಮ್ಮಸ್ಸು ಸಿಕ್ಕಿದಂತಾಗಿದೆ.

ಇದೇ ಸಂದರ್ಭದಲ್ಲಿ ದಿನಕರ್ ಅವರ ಜೊತೆ ಸ್ಥಳಕ್ಕಾಗಮಿಸಿದ್ದ ಸೃಜನ್ ಕೂಡಾ ಟಕ್ಕರ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಅಂದಹಾಗೆ, ಕಮಲಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶಿಸಿದ್ದ ಹುಲಿರಾಯ ಚಿತ್ರವನ್ನು ನಿರ್ಮಿಸಿದ್ದರಲ್ಲಾ? ನಾಗೇಶ್ ಕೋಗಿಲು.. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಟಕ್ಕರ್. ಪುಟ್ ಗೌರಿ ರಂಜನಿ ರಾಘವನ್ ಈ ಚಿತ್ರದಲ್ಲಿ ಮನೋಜ್ ಗೆ ನಾಯಕಿಯಾಗಿದ್ದಾರೆ.

Continue Reading

ಅಪ್‌ಡೇಟ್ಸ್

ಕೆಲವು ದಿನಗಳ ನಂತರ ಐವತ್ತರ ಸಂಭ್ರಮ!

Published

on

ಶ್ರೀನಿ ನಿರ್ದೇಶನದ ಕೆಲವು ದಿನಗಳ ನಂತರ ಚಿತ್ರ ಐವತ್ತು ದಿನಗಳ ಯಶಸ್ವೀ ಪ್ರದರ್ಶನ ನಡೆಸಿ ಭರಪೂರ ಗೆಲುವೊಂದರತ್ತ ಮುನ್ನುಗ್ಗುತ್ತಿದೆ. ಹೊಸಾ ಪ್ರಯೋಗ, ಹೊಸತನದ ಕಥನ ಶೈಲಿಗಳನ್ನು ಕನ್ನಡದ ಪ್ರೇಕ್ಷಕರು ಯಾವ ಕಾರಣಕ್ಕೂ ಕೈ ಬಿಡೋದಿಲ್ಲವೆಂಬ ವಿಚಾರ ಈ ಮೂಲಕ ಮತ್ತೆ ಸಾಬೀತಾಗಿದೆ.

ಮುತ್ತುರಾಜ್, ವಸಂತ್ ಕುಮಾರ್ ಮತ್ತು ಚಂದ್ರಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಈ ಮೂಲಕವೇ ಈ ಚಿತ್ರ ಇತ್ತೀಚಿನ ಭರ್ಜರಿ ಹಾರರ್ ಹಿಟ್ ಆಗಿಯೂ ದಾಖಲಾಗಿದೆ. ವಿಭಿನ್ನವಾದ ಕ್ರಿಯೇಟಿವಿಟಿ ಮತ್ತು ನವೀನ ತಂತ್ರಜ್ಞಾನಗಳ ಜುಗಲ್ಬಂಧಿಯಲ್ಲಿ ಎಂಥಾ ಕಮಾಲ್ ನಡೆದೀತೆಂಬುದಕ್ಕೂ ಕೂಡಾ ಕೆಲವು ದಿನಗಳ ನಂತರ ಚಿತ್ರ ಐವತ್ತರ ಹೊಸ್ತಿಲು ದಾಟಿರೋದು ಸಾಕ್ಷಿಯಾಗಿ ನಿಂತಿದೆ.

 

ಶ್ರೀನಿ ಈ ಚಿತ್ರದ ಮೂಲಕ ಒಂದಷ್ಟು ತಂತ್ರಜ್ಞಾನವನ್ನು ಕನ್ನಡಕ್ಕೇ ಮೊದಲೆಂಬ ಹೆಗ್ಗಳಿಕೆಯೊಂದಿಗೆ ಪರಿಚಯಿಸಿದ್ದರು. ಝಾಂಬೀಸ್ ಮತ್ತು ಗ್ರಾಫಿಕ್ಸ್ ಮಗುವನ್ನು ಗ್ರಾಫಿಕ್ಸ್ ಮೂಲಕವೇ ಸೃಷ್ಟಿ ಮಾಡಿದ್ದರು. ಇದರ ಜೊತೆಗೇ ಕಥೆಗೆ ಪೂರಕವಾಗಿ ಅವುಗಳನ್ನು ಬಳಸಿಕೊಳ್ಳುವ ಕಲೆಗಾರಿಕೆಯನ್ನೂ ಪ್ರದರ್ಶಿಸಿದ್ದರು. ಬಹುಶಃ ಇಂಥಾ ಕೆಲಸಕ್ಕೆಲ್ಲ ನಿರ್ಮಾಪಕರುಗಳ ಬೆಂಬಲ ಇಲ್ಲದೇ ಹೋಗಿದ್ದರೆ ಇಂಥಾದದ್ದೊಂದು ಗೆಲುವು ಸಾಧ್ಯವಾಗುತ್ತಿರಲಿಲ್ಲವೇನೋ. ನಿರ್ಮಾಪಕರು ಚಿತ್ರಕ್ಕೆ ಬೇಕಾದ ಯಾವುದಕ್ಕು ಕೊರತೆ ಮಾಡದೆ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿಯೇ ಒಂದಷ್ಟು ವಿಚಿತ್ರ ಎಂಬಂಥಾ ಘಟನಾವಳಿಗಳಿಂದ ಚಿತ್ರ ತಂಡ ಕಂಗಾಲಾಗಿತ್ತು. ಆದರೂ ಪಟ್ಟು ಬಿಡದೆ ಅಂದುಕೊಂಡ ಲೊಕೇಷನ್ನುಗಳಲ್ಲಿಯೇ ನಾನಾ ರಿಸ್ಕುಗಳನ್ನು ಮೈ ಮೇಲೆಳೆದುಕೊಂಡೇ ಚಿತ್ರ ತಂಡ ಕಾರ್ಯ ನಿರ್ವಹಿಸಿತ್ತು. ಆ ಶ್ರಮವೆಲ್ಲವೂ ಐವತ್ತು ದಿನ ಪೂರೈಸುವ ಮೂಲಕ ಸಾರ್ಥಕವಾಗಿದೆ.

Continue Reading

ಅಪ್‌ಡೇಟ್ಸ್

ಪದ್ಮಾವತಿಗೆ ಗಂಗಮ್ಮನ ಪದ

Published

on

ಈ ಹಿಂದೆ ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ ಎಂದು ಹೇಳುತ್ತ ಸಿನಿ ರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವಿಕ್ರಂ ಆರ್ಯ ಈಗ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಪದ್ಮಾವತಿ ಎಂಬ ಹೊಸ ಚಿತ್ರವನ್ನು ಕನ್ನಡ ಸಿನಿ ರಸಿಕರಿಗಾಗಿ ತಂದಿದ್ದಾರೆ. ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಹಳ್ಳಿಗಾಡಿನ ಗಾನ ಕೋಗಿಲೆ ಕೊಪ್ಪಳದ ಗಂಗಮ್ಮ ೩ ಹಾಡುಗಳಿಗೆ ದನಿಯಾಗಿದ್ದಾರೆ. ಒಂದು ಹೆಣ್ಣು ಗರ್ಭವತಿಯಾದ ಸಂಧರ್ಭದಲ್ಲಿ ಆಕೆಗೆ ಸೀಮಂತ ಮಾಡುವ ಸನ್ನಿವೇಶದಲ್ಲಿ ಬರುವಂತಹ ಹಾಡನ್ನು ಗಾನ ಕೋಗಿಲೆ ಗಂಗಮ್ಮ ಅವರು ಕಳೆದ ಮಂಗಳವಾರ ಬೆಂಗಳೂರಿನ ವಿಜಯ್ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಹಾಡಿದರು ಹಚ್ಚಿರೆ ಹರಿಶಿನವ…. ಪೂಸೀರೇ ಗಂಧಾವಾ….. ಹಾಗೂ ಕುಹೂ ಕುಹೂ ಕೋಗಿಲೆ ಒಮ್ಮೆ ಕೂಗಬಾರದೆ ಎಂಬ ಎರಡು ಹಾಡುಗಳನ್ನು ಗಂಗಮ್ಮ ಅವರ ಕಂಠ ಸಿರಿಯಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ಈ ಹಿಂದೆ ವಿಕ್ರಂ ಆರ್ಯ, ಉಪೇಂದ್ರ ಪುನೀತರಂಥಹ ಸ್ಟಾರ್ ನಟರ ಕೈಲಿ ಹಾಡಿಸಿದ್ದರು. ಈಗ ಚಿತ್ರದ ಕಥೆಗೆ ಅನುಗುಣವಾಗಿ ಅಪ್ಪಟ ಗ್ರಾಮೀಣ ಕಂಠದ ಅವಶ್ಯಕತೆ ಇದ್ದುದ್ದರಿಂದ ಗಂಗಮ್ಮ ಅವರಾದ ಈ ಚಿತ್ರದಲ್ಲಿ ಒಟ್ಟು ೩ ಹಾಡುಗಳನ್ನು ಹಾಡಿಸಿದ್ದಾರೆ. ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಒಟ್ಟು ೮ ಹಾಡುಗಳು ಈ ಚಿತ್ರದಲ್ಲಿದ್ದು ಪ್ರೇಮ್ ಸಾಯಿ, ಹರೀಶ್ ಜಿ ರಾವ್ ಸಾಹಿತ್ಯ ಬಸಿದಿದ್ದಾರೆ. ಕಿರುತೆರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ನಿರ್ದೇಶಿಸಿದ ಮಿಥುನ್ ಚಂದ್ರಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾವ್ ಅಂಡ್ ರಾವ್ ಸಿನಿಮಾಸ್ ಮೂಲಕ ದಾಮೋದರ್ ರಾವ್ ಹಾಗೂ ನಾಮದೇವ ಭಟ್ಟರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶೋಹೆಬ್ ಅಹಮದ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು ಶಿವಮೊಗ್ಗ ಹೊಸನಗರ ಹಾಗೂ ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರಿಕರಣ ನಡೆಸಲಾಗಿದೆ. ಸದ್ಯ ರೀರೆಕಾರ್ಡಿಂಗ್ ಹಂತದಲ್ಲಿರುವ ಪದ್ಮಾವತಿ ಚಿತ್ರದ ಆಡಿಯೋ ಅನಾವರಣ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿದೆ. ವಿಕ್ರಂ ಆರ್ಯಾ, ಸಾಕ್ಷಿ ಮೇಘನ, ದಾಮೋದರ್ ರಾವ್, ರಾಘವ ಕಲಾಲ್, ಕೀರ್ತಿ ಎನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Continue Reading

Trending

Copyright © 2018 Cinibuzz