One N Only Exclusive Cine Portal

ಲೈಫ್ ಜೊತೆ ಒಂದ್ ಸೆಲ್ಫಿ ತೆಗೆಸಿಕೊಂಡ ರವಿಮಾಮ!

ವರ್ಷಾಂತಗರಗಳ ಗ್ಯಾಪ್ ನಂತರ ದಿನಕರ್ ತೂಗುದೀಪ ನಿರ್ದೇಶಿಸಿರುತ್ತಿರುವ ಸಿನಿಮಾ ಲೈಫ್ ಜೊತೆ ಸೆಲ್ಫಿ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ನೆನಪಿರಲಿ ಪ್ರೇಮ್ ಒಟ್ಟಿಗೇ ನಟಿಸುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಇದೀಗ ಬಂದಿರುವ ಸುದ್ದಿಯೇನೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ‘ಲೈಫ್ ಜೊತೆ ಸೆಲ್ಫಿ’ಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾ ಇಂಪಾರ್ಟೆಂಟ್ ಆದ, ಇಡೀ ಕತೆಗೆ ಟ್ವಿಸ್ಟ್ ಕೊಡೋ ಈ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದು ಅಂತಾ ಚಿತ್ರತಂಡ ಸಾಕಷ್ಟು ತಲೆ ಕೆಡಿಸಿಕೊಂಡಿತ್ತು. ಕಡೆಗೆ ಆ ಪಾತ್ರಕ್ಕೆ ರವಿಚಂದ್ರನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತಂತೆ. ಮೊನ್ನೆ ದಿನ ರವಿ ಸರ್ ಶೂಟಿಂಗ್‌ಗೆ ಕೂಡಾ ಹಾಜರಾಗಿ ‘ಗೆಸ್ಟ್ ರೋಲ್’ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ.

ಇತ್ತೀಚೆಗೆ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಲೈಫ್ ಜೊತೆ ಸೆಲ್ಫಿ ಕೂಡಾ ಚೆಂದದ್ದೊಂದು ಕಥೆ ಹೊಂದಿದೆಯಂತೆ. ಈ ಸಿನಿಮಾಗೆ ದಿನಕರ್ ಅವರ ಪತ್ನಿ ಮಾನಸ ಅವರೇ ಕಥೆ ಬರೆದಿದ್ದು, ರನ್ ಆಂಟನಿ ಸಿನಿಮಾದ ಮೂಲಕ ನಿರ್ದೇಶಕರಾಗಿ ಈಗ ಟಕ್ಕರ್ ಸಿನಿಮಾ ನಿರ್ದೇಶನದ ತಯಾರಿಯಲ್ಲಿರುವ ರಘು ಶಾಸ್ತ್ರಿ ಸಂಭಾಷಣೆ ಹೊಸೆದಿದ್ದಾರೆ. ಈ ತಲೆಮಾರಿಗೆ ತಾಕುವ ಕಥೆಯೊಂದಿಗೆ ಅಪಾರ ಹಾಸ್ಯ ಮತ್ತು ಕಾಡುಂವಥಾ ಸೆಂಟಿಮೆಂಟುಗಳು ಈ ಚಿತ್ರದಲ್ಲಿ ಬೆರೆತಿದೆ ಎನ್ನಲಾಗುತ್ತಿದೆ. ಅದರಲ್ಲೂ ಹರಿಪ್ರಿಯಾ ಪಾತ್ರವಂತೂ ಯಾರೂ ಮರೆಯಲೂ ಸಾಧ್ಯವಾಗಷ್ಟು ರೀತಿಯಲ್ಲಿ ಮೂಡಿಬಂದಿದೆಯಂತೆ.

 

Leave a Reply

Your email address will not be published. Required fields are marked *


CAPTCHA Image
Reload Image