One N Only Exclusive Cine Portal

ಲೌಡ್ ಸ್ಪೀಕರ್ ಆನ್ ಮಾಡಿದರು ನಿರ್ದೇಶಕ ಶಿವತೇಜಸ್!

ಬರೀ ಲವರ್ ಬಾಯ್ ಇಮೇಜಿಗೆ ಫಿಕ್ಸಾಗಿದ್ದ ಅಜೇಯ್ ರಾವ್ ಅವರನ್ನು ಪಕ್ಕಾ ಮಾಸ್ ಲುಕ್ಕಿಗೂ ಸೈ ಎಂಬಂತೆ ಅನಾವರಣಗೊಳಿಸಿದವರು ನಿರ್ದೇಶಕ ಶಿವತೇಜಸ್. ಈ ಹಿಂದೆ `ಮಳೆ’ಯಂಥಾ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವತೇಜಸ್ ಅವರೂ ಕೂಡಾ ಧೈರ್ಯಂ ಚಿತ್ರದ ಮೂಲಕ ಕಮರ್ಷಿಯಲ್ ಸಿನಿಮಾಗೂ ಸೈ ಎಂಬುದನ್ನು ಪ್ರೂವ್ ಮಾಡಿದ್ದರು.

ಕಳೆದ ವರ್ಷದ ಚೆಂದದ ಚಿತ್ರವಾಗಿ ಹೊರ ಹೊಮ್ಮಿದ್ದ ಧೈರ್ಯಂ ಚಿತ್ರದ ಯಶಸ್ಸಿನಿಂದ ಖುಷಿಗೊಂಡಿರುವ ಶಿವತೇಜಸ್ ಇದೀಗ ಕಾಮಿಡಿ ಜಾನರಿನ `ಲೌಡ್ ಸ್ಪೀಕರ್’ ಆನ್ ಮಾಡಿದ್ದಾರೆ!

ಶಿವತೇಜಸ್ ಧೈರ್ಯಂ ಚಿತ್ರದ ಬೆನ್ನಿಗೇ ಲೌಡ್ ಸ್ಪೀಕರ್ ಚಿತ್ರವನ್ನು ಆರಂಭಿಸಿದ್ದರು. ಆದರೆ ಕೆಲಸ ಕಾರ್ಯಗಳು ಮೊದಲು, ಅದು ಗಟ್ಟಿತನದಿಂದ ಕೂಡಿದ್ದರೆ ಪ್ರಚಾರವೆಂಬುದು ತಂತಾನೇ ಬರುತ್ತದೆ ಅಂತ ನಂಬಿರುವ ಶಿವತೇಜಸ್ ಇದೀಗ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಧೈರ್ಯಂ ಚಿತ್ರದ ನಾಯಕನಟ ಅಜೇಯ್ ರಾವ್ ಈ ಪೋಸ್ಟರನ್ನು ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ ಲೌಡ್ ಸ್ಪೀಕರ್ ಚಿತ್ರದ ವಿಚಾರದಲ್ಲಿ ಅಚ್ಚರಿಯಂಥಾ ವಿಚಾರವೊಂದಿದೆ. ಈ ಹಿಂದೆ ದೈರ್ಯಂ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ ರಾಜು ಅವರೇ ಲೌಡ್ ಸ್ಪೀಕರ್ ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರ ಮುಕ್ತಾಯವಾಗೋ ಮುನ್ನವೇ ನಿರ್ದೇಶಕರು ಮತ್ತು ನಿರ್ಮಾಪಕರ ನಡುವಿನ ನಂಬಿಕೆಯೂ ಮುಗಿದು ಹೋಗೋದೇ ಹೆಚ್ಚು. ಆದರೆ ಶಿವತೇಜಸ್ ಮತ್ತು ರಾಜು ಅವರ ನಂಬಿಕೆ ಎರಡನೇ ಚಿತ್ರವನ್ನು ಒಟ್ಟಾಗಿ ಮಾಡುವಂತೆ ಮುಂದುವರೆದಿದೆ. ಸ್ವಂತದ್ದೊಂದು ಆಸ್ಪತ್ರೆಯನ್ನು ಹೊಂದಿರುವ ರಾಜು ಕೂಡಾ ಅಪಾರವಾದ ಸಿನಿಮಾ ಪ್ರೀತಿ ಹೊಂದಿರುವವರು. ಈ ಹಿಂದೆ ದೈರ್ಯಂ ಚಿತ್ರವನ್ನು ನಿರ್ಮಾಣ ಮಾಡಿದಷ್ಟೇ ಪ್ರೀತಿಯಿಂದ ಅವರು ಲೌಡ್ ಸ್ಪೀಕರ್ ಚಿತ್ರವನ್ನೂ ಪೊರೆದಿದ್ದಾರಂತೆ.

ಆರಂಭಿಕವಾಗಿ ಮಳೆಯಂಥಾ ಭಾವನಾತ್ಮಕ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವ ತೇಜಸ್ ಆ ನಂತರ ಮಾಡಿದ್ದು ಪಕ್ಕಾ ಮಾಸ್ ಸಬ್ಜೆಕ್ಟಿನ `ಧೈರ್ಯಂ; ಚಿತ್ರವನ್ನು. ಅದಾದೇಟಿಗೆ ಮೂರನೇ ಚಿತ್ರವಾದ ಲೌಡ್‌ಸ್ಪೀಕರ್‌ಗೆ ಅವರು ಕಾಮಿಡಿ ಸಬ್ಜೆಕ್ಟನ್ನು ಆರಿಸಿಕೊಂಡಿದ್ದಾರಂತೆ. ಇದಲ್ಲದೇ ಒಂದು ಹೊಸಾ ತಂಡವನ್ನೂ ಈ ಮೂಲಕ ಪರಿಚಯಿಸುತ್ತಿದ್ದಾರೆ. ಹೊಸಬರಾದ ನೀನಾಸಂ ಭಾಸ್ಕರ್, ಅಭಿಷೇಕ್, ಸುಮಂತ್ ಭಟ್, ಕಾರ್ತಿಕ್ ರಾವ್, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಯಾವ ಅಬ್ಬರವೂ ಇಲ್ಲದೇ ಚಿತ್ರದ ಕಸುವಿನ ಮೂಲಕವೇ ಹಂತ ಹಂತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಿರ್ದೇಶಕ ಶಿವತೇಜಸ್ ಮತ್ತು ಡಾ. ರಾಜು ಅವರ ಶೈಲಿ. ಅದರ ಮೊದಲ ಭಾಗವಾಗಿ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image