One N Only Exclusive Cine Portal

ಮಲೆಯಾಳದಲ್ಲಿ ಮತ್ತೆ ಮಣಿರತ್ನಂ ಮ್ಯಾಜಿಕ್?


ಸಿನಿಮಾ ಮಾಂತ್ರಿಕ ಮಣಿರತ್ನಂ ಅಂದರೆ ಸಿನಿಮಾ ಪ್ರೇಮಿಗಳ ಮೈ ಮನಸುಗಳು ನವಿರೇಳುತ್ತವೆ. ಅದ್ಯಾವ ಭಾಷೆಯಲ್ಲೇ ಆಗಿದ್ದರೂ ಅವರದ್ದೊಂದು ಚಿತ್ರ ಬರುತ್ತದೆಂದಾಕ್ಷಣ ಕಾಯಲು ಶುರು ಮಾಡೋ ಅಭಿಮಾನಿ ಬಳಗವೂ ಇದೆ. ಅಂಥಾ ಅಭಿಮಾನಿಗಳು ಖುಷಿಗೊಳ್ಳುವಂಥಾ ಸುದ್ದಿಯೊಂದು ಮಾಲಿವುಡ್ ಕಡೆಯಿಂದ ಹೊರಬಿದ್ದಿದೆ!


ಆ ಹಿನ್ನೆಲೆಯಲ್ಲಿ ಹೇಳೋದಾದರೆ, ಮಣಿರತ್ನಂ ಈ ಬಾರಿ ವಿಭಿನ್ನವಾದೊಂದು ಕಥೆಯನ್ನು ರೆಡಿ ಮಾಡಿಕೊಂಡು ಅದರಲ್ಲಿ ನಾನಾ ನಟರನ್ನು ಸೇರಿಸಿಕೊಂಡು ಮಲ್ಟಿ ಸ್ಟಾರರ್ ಸಿನಿಮಾ ಒಂದರ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮಲೆಯಾಳಂನಲ್ಲಿ ಹವಾ ಸೃಷ್ಟಿಸಿದ್ದ ಅಂಗಮಾಲಿ ಡೈರೀಸ್ ಖ್ಯಾತಿಯ ಆಂಟೋನಿ ವರ್ಗೀಸ್ ಕೂಡಾ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿರಲಿದ್ದಾರಂತೆ.


ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತವಾದ ಮಾಹಿತಿಗಳು ಹೊರ ಬಿದ್ದಿಲ್ಲವಾದರೂ ಮಣಿರತ್ನಂ ಈ ಚಿತ್ರ ಮಾಡೋದು ಪಕ್ಕಾ ಮತ್ತು ಆಂತೋಣಿ ವರ್ಗೀಸ್ ಈ ಚಿತ್ರಕ್ಕಾಗಿ ಕಾತರರಾಗಿರೋದು ಸತ್ಯ ಎಂಬ ವಿಚಾರ ಮಾಲಿವುಡ್ ತುಂಬಾ ಹರಡಿಕೊಂಡಿದೆ. ಅಂದ ಹಾಗೆ ಈ ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇರಲಿದೆ. ಅರವಿಂದ್ ಸ್ವಾಮಿ, ವಿಜಯ್ ಸೇತುಪತಿ ಮತ್ತು ಸಿಂಬು ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಸ್ಟಾರ್‌ಕಾಸ್ಟ್ ನೋಡಿದರೇನೇ ಸಿನಿಮಾ ಪ್ರೇಮಿಗಳು ಹುಚ್ಚೇಳೋದರಲ್ಲಿ ಸಂದೇಹವಿಲ್ಲ.


ಈ ಚಿತ್ರಕ್ಕೆ ಸಂತೋಷ್ ಸಿವನ್ ಕ್ಯಾಮೆರಾ ಮತ್ತು ಎ ಆರ್ ರೆಹಮಾನ್ ಅವರ ಸಂಗೀತ ನಿರ್ದೇಶನ ಇರಲಿದೆಯಂತೆ.

Leave a Reply

Your email address will not be published. Required fields are marked *


CAPTCHA Image
Reload Image