One N Only Exclusive Cine Portal

ಸಂಜಯ್ ದತ್ ಅಮ್ಮನಾಗಿ ಮರಳಿದ ಮನಿಷಾ ಕೋಯಿರಾಲಾ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದು ಕಾಲದಲ್ಲಿ ಬಾಲಿವುಡ್‌ನ ಲೀಡ್ ಹೀರೋಯಿನ್ ಆಗಿ ಮಿಂಚಿ ನಂತರ ಅನಾರೋಗ್ಯದ ಕಾರಣದಿಂದ ನೇಪಥ್ಯಕ್ಕೆ ಸರಿದ್ದಿದ್ದ ಮೋಹಕ ನಟಿ ಮೊನಿಷಾ ಕೋಯಿರಾಲಾ. ಕ್ಯಾನ್ಸರ್ ಕಾಯಿಲೆಯಿಂದ ಬಾಧಿತರಾಗಿ ಚೇತರಿಸಿಕೊಂಡಿರೋ ಮನೀಷಾ ಇದೀಗ ಮತ್ತೆ ನಟನೆಗೆ ಮರಳಿದ್ದಾರೆ.
ಹೀಗೆ ಮರಳಿ ಬಂದಿರೋ ಮನೀಷಾ ಭಾರೀ ಸದ್ದು ಮಾಡುತ್ತಿರೋದು ಸಂಜಯ್ ದತ್ ಜೀವನಾಧಾರಿತವಾದ ಚಿತ್ರದಲ್ಲಿನ ವಿಭಿನ್ನವಾದೊಂದು ಪಾತ್ರದ ಮೂಲಕ.


ಬಾಲಿವುಡ್‌ನ ಸ್ಟಾರ್ ನಟರಾಗಿ ಹೆಚ್ಚಿನ ಸಲ ವಿವಾದಗಳ ಕೇಂದ್ರ ಬಿಂದುವಾಗಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವವರು ಸಂಜಯ್ ದತ್. ಅವರ ಜೀವನಾಧಾರಿತ ಚಿತ್ರವೀಗ ಚಿತ್ರೀಕರಣದ ಹಂತದಲ್ಲಿದೆ. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಸಂಜಯ್ ದತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಕಥೆಯಲ್ಲಿ ಬಹು ಮುಖ್ಯವಾದ ನರ್ಗೀಸ್ ದತ್ ಪಾತ್ರದಲ್ಲಿ ಮನೀಷಾ ಕೋಯಿರಾಲಾ ಬಣ್ಣ ಹಚ್ಚಿದ್ದಾರೆ. ಈ ಪಾತ್ರ ಒಂದಷ್ಟು ಕಾಲದಲ್ಲಿ ಬಂದು ಹೋದರೂ ಇಡೀ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಈ ಪಾತ್ರದಲ್ಲಿ ಮನೀಷಾ ಥೇಟು ನರ್ಗೀಸ್ ದತ್ ಥರವೇ ಕಾಣಿಸುತ್ತಿರೋದು ಪ್ರಮುಖ ಆಕರ್ಷಣೆ. ಈ ಬಗ್ಗೆ ನರ್ಗೀಸ್ ಕಾಲದ ಬಾಲಿವುಡ್ ನಟ ನಟಿಯರನೇಕರು ಮನಿಷಾ ಕೊಯಿರಾಲಾಗಿ ಅಭಿನಂದನೆ ಹೇಳುತ್ತಿದ್ದಾರಂತೆ. ಸಂಜಯ್ ಕೂಡಾ ಮನೀಷಾರ ಲುಕ್ ಕಂಡು ಭಾವುಕರಾಗಿದ್ದಾರೆ.


ಈ ಪಾತ್ರಕ್ಕಾಗಿ ಮನೀಷಾ ಬಹು ಕಾಲದಿಂದಲೂ ತಯಾರಿ ನಡೆಸಿದ್ದರಂತೆ. ನರ್ಗೀಸ್ ದತ್ ಅವರ ಚಿತ್ರಗಳನ್ನು ಪದೇ ಪದೆ ನೋಡುತ್ತಾ ಅವರ ಹಾವಭಾವಗಳನ್ನು ಅಭ್ಯಾಸ ಮಾಡಿಕೊಂಡು ಈ ಚಿತ್ರದಲ್ಲಿ ಅವರೇ ಮತ್ತೆ ಎದ್ದು ಬಂದರೇನೋ ಎಂಬ ಫೀಲ್ ಹುಟ್ಟಿಸುವಂತೆ ನಟಿಸಿದ್ದಾರಂತೆ. ಇನ್ನುಳಿದಂತೆ ರಣ್‌ಬೀರ್ ಕೂಡಾ ಸಂಜಯ್‌ದತ್ ಅವರನ್ನೇ ಆವಾಹಿಸಿಕೊಂಡಂತೆ ನಟಿಸುತ್ತಿದ್ದಾರಂತೆ. ಅವರ ಲುಕ್ ಅಂತೂ ಥೇಟು ಸಂಜಯ್ ದತ್ ಅವರನ್ನೇ ಹೋಲುವಂತಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image