One N Only Exclusive Cine Portal

ಮನೋಜ್ ಸಿನಿಮಾ ಯಾವಾಗ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಮತ್ತೋರ್ವ ಸದಸ್ಯ ಮನೋಜ್ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಾರೆಂಬ ವಿಚಾರ ಈ ಹಿಂದೆ ಸುದ್ದಿ ಮಾಡಿತ್ತು. ಆದರೆ ಮನೋಜ್ ಅವರನ್ನು ಹೀರೋ ಆಗಿ ಲಾಂಚ್ ಮಾಡಲಿರೋ ನಿರ್ದೇಶಕರ್‍ಯಾರು? ಅವರ ಮೊದಲ ಚಿತ್ರ ಯಾವುದು? ಎಂಬ ಬಗ್ಗೆ ರೂಮರುಗಳು ಹರಿದಾಡಿದ್ದವೇ ಹೊರತು ನಿಖರ ಉತ್ತರ ದೊರಕಿರಲಿಲ್ಲ. ಇದೀಗ ಹೊಸಾ ವರ್ಷದ ಹೊಸ್ತಿಲಲ್ಲಿ ಎಲ್ಲವೂ ಪಕ್ಕಾ ಆಗಿದೆ!

ಮನೋಜ್ ಮೊದಲನೇ ಚಿತ್ರವನ್ನು ಕ್ರಿಯಾಶೀಲ ಯುವ ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ರನ್ ಆಂಟನಿ ಚಿತ್ರ ನಿರ್ದೇಶನ ಮಾಡಿ ರಘು ಶಾಸ್ತ್ರಿ ಬಹು ಕಾಲದಿಂದ ಚಿತ್ರ ರಂಗದ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದುತ್ತಲೇ ನಿರ್ದೇಶನವನ್ನು ಪ್ರಧಾನವಾಗಿ ಪರಿಗಣಿಸಿರುವವರು. ಮನೋಜ್ ಅವರ ಮೊದಲ ಚಿತ್ರದ ನಿರ್ದೇಶನಕ್ಕಾಗಿ ಸಕಲ ತಯಾರಿಗಳನ್ನೂ ಮಾಡಿಕೊಂಡಿರೋ ರಘು ವಿಭಿನ್ನವಾದೊಂದು ಕಥೆಯ ಜೊತೆಗೆ ಎಂಟ್ರಿ ಕೊಡಲು ಅಣಿಗೊಳ್ಳುತ್ತಿದ್ದಾರೆ. “ಸಾಕಷ್ಟು ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಲಾಂಚ್ ಆಗಲು ಕಾದಿದ್ದೆ. ಅದಕ್ಕೆ ಈಗ ಸೂಕ್ತ ಸಮಯ ಕೂಡಿಬಂದಿದೆ. ಒಂದೊಳ್ಳೆ ಕತೆ ಮತ್ತು ತಂಡದ ಮುಖಾಂತರ ನಾನು ನಾಯಕನಟನಾಗಿ ಪರಿಚಯಗೊಳ್ಳಬೇಕು ಅನ್ನೋದು ನಮ್ಮ ಮಾವಂದಿರಾದ ದರ್ಶನ್ ಮತ್ತು ದಿನಕರ್ ಅವರ ಬಯಕೆಯಾಗಿತ್ತು. ಈಗ ಮಾವಂದಿರು ಗ್ರೀನ್ ಸಿಗ್ನಲ್ ನೀಡಿದ್ದಾರೆ” ಅನ್ನೋದು ಮನೋಜ್ ಮಾತು.


ಸದ್ಯ ಈ ಚಿತ್ರದ ಬಗೆಗಿನ ಮಾತುಕಥೆಗಳೆಲ್ಲವೂ ಪೂರ್ಣಗೊಂಡಿವೆ. ಬಹುಶಃ ಈ ತಿಂಗಳಲ್ಲೇ ನಿರ್ಮಾಪಕರು, ತಾರಾಗಣ ಸೇರಿದಂತೆ ಉಳಿಕೆ ವಿವರಗಳೂ ಜಾಹೀರಾಗಲಿವೆ. ಅಂದಹಾಗೆ, ಇದೇ ಹೊತ್ತಿನಲ್ಲಿ ನಿರ್ದೇಶಕ ಅರವಿಂದ ಕೌಶಿಕ್ ಅವರೂ ಕೂಡಾ ಮನೋಜ್ ಅವರಿಗಾಗಿಯೇ ಒಂದು ಕಥೆ ರೆಡಿ ಮಾಡೋ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅದು ಮನೋಜ್ ಎರಡನೇ ಚಿತ್ರವಾಗಿ ಮೂಡಿ ಬರೋ ಸಾಧ್ಯತೆಗಳಿವೆ. ಹಾಗೆ ನೋಡಹೋದರೆ, ಅರವಿಂದ್ ಅವರೇ ಮನೋಜ್ ಅವರ ಮೊದಲ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಸದ್ಯ ಅರವಿಂದ್ ಫಿಫ್ಟಿ ನಾಟ್ ಔಟ್ ಎನ್ನುವ ಚಿತ್ರವನ್ನು ಕಂಪ್ಲೀಟ್ ಮಾಡುತ್ತಿದ್ದಾರೆ. ಇದಾದೇಟಿಗೇ ಮತ್ತೊಂದು ಹಾರರ್ ಸಿನಿಮಾ ಜೊತೆಗೆ ಟೀವಿ ಧಾರಾವಾಹಿಗಳನ್ನೂ ಕೈಗೆತ್ತಿಕೊಳ್ಳಲಿದ್ದಾರೆ. ಅರವಿಂದ್ ಅವರ ಲಿಸ್ಟಿನಲ್ಲಿ `ಬೆಂಗಳೂರು ಇತ್ಯಾದಿ’ ಎಂಬ ಚಿತ್ರವೂ ಇದ್ದು, ಮನೋಜ್ ನಟಿಸಬೇಕಿರುವ ಸಿನಿಮಾ ಇದರ ಮುಂಚೆಯೋ ಅಥವಾ ಬಳಿಕವೋ ಆರಂಭವಾಗಬಹುದು.


ತಮ್ಮ ಮಾವ ದರ್ಶನ್ ಅವರ ಬದುಕಿನ ಎಲ್ಲ ಏರಿಳಿತಗಳನ್ನೂ ನೋಡುತ್ತಾ ಅದರಿಂದ ಸ್ಫೂರ್ತಿ ಪಡೆಯುತ್ತಲೇ ಬೆಳೆದವರು ಮನೋಜ್. ದರ್ಶನ್ ಎಂತೆಂಥಾ ಕಷ್ಟಗಳನ್ನು ಅನುಭವಿಸಿ ಈ ಮಟ್ಟಕ್ಕೇರಿದ್ದಾರೆಂಬ ಅರಿವಿರುವ ಮನೋಜ್ ಒಂದೊಳ್ಳೆ ಸಿನಿಮಾದ ಮೂಲಕ ಲಾಂಚ್ ಆಗುವ ಬಯಕೆ ಹೊಂದಿದ್ದಾರೆ. ನಟನಾಗಬೇಕೆಂಬ ಬಯಕೆಯಿಂದ ಈ ವರೆಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಲೇ ಸಾಗಿ ಬಂದಿರೋ ಮನೋಜ್ ಅವರ ಎಲ್ಲ ಪರಿಶ್ರಮಗಳಿಗೂ ಈ ವರ್ಷ ಫಲ ಸಿಗುವ ಲಕ್ಷಣಗಳಿವೆ.

ಸದ್ಯ ಒಂದಷ್ಟು ಚಿತ್ರಗಳು ಮನೋಜ್ ಕೈಲಿದ್ದರೂ ಅವರ ಮೊದಲ ಚಿತ್ರ ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರಲಿದೆ.

 

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image