Connect with us

ಪ್ರೆಸ್ ಮೀಟ್

ಮನಸಿನ ಮರೆಯಲಿ 9 ರಂದು ಬಿಡುಗಡೆ

Published

on


ಆಸ್ಕರ್, ಮಿಸ್ ಮಲ್ಲಿಗೆಯಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಲನಚಿತ್ರ ಮನಸಿನ ಮರೆಯಲಿ. ಈ ವರೆಗೆ ಥ್ರೀಲ್ಲರ್, ರೋಮ್ಯಾಂಟಿಕ್ ಸಿನಿಮಾಗಳನ್ನೇ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ಒಂದು ಅಪ್ಪಟ ಪ್ರೇಮ ಕಥೆಯನ್ನು ತೆಗೆದುಕೊಂಡು ನಿರ್ದೇಶನ ಮಾಡಿದ್ದಾರೆ. ಇದೇ ಶುಕ್ರವಾರ ರಾಜ್ಯಾದ್ಯಾಂತ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ಕಿಶೋರ್ ಯಾದವ್ ಹಾಗೂ ದಿವ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಕಿಂಗ್ ಲಿಂಗರಾಜು ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಶ್ರೀಮತಿ. ಶಬೀನಾ ಅರಾ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಾಯಿರಾಂ ಚಿತ್ರಕತೆ. ಸಂಭಾಷಣೆ ಬರೆದಿದ್ದಾರೆ. ಮೊನ್ನೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಮಾತಾನಾಡಿದ ನಿರ್ದೇಶಕ ಕೃಷ್ಣ ಲವ್ ಸ್ಟೋರಿ ನನ್ನ ಮೊದಲ ಪ್ರಯತ್ನ ಈ ವರೆಗೆ ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗಳನ್ನೆ ಮಾಡಿದ್ದ ನಾನು ಹೊಸದಾಗಿ ಟ್ರೈ ಮಾಡಿದ್ದೇನೆ. ಇಂತಹ ಸಿನಿಮಾಗಳಲ್ಲಿ ಗಿಮಿಕ್ ಮಾಡಲು ಸಾದ್ಯವಿಲ, ನೈಜತೆಗೆ ಹತ್ತಿರವಿದ್ದರೆ ಜನ ಪಾತ್ರಗಳಿಗೆ ರಿಲೇಟ್ ಮಾಡಿಕೊಳ್ಳುತ್ತಾರೆ. ಲಿಂಗರಾಜು ಕೂಡ ಒಂದೇ ಮಾತಿಗೆ ಒಪ್ಪಿಕೊಂಡರು, ಟೈಟಲ್ ಹಿಂದೆಯೇ ಅಂದುಕೊಂಡಿದ್ದೇ ಅದು ಈ ಕಥೆಗೆ ಸೂಟ್ ಆಯಿತು. ಕಿಶೋರ್ ತೆಲುಗು ಹೀರೋತರ ಇದ್ದಾನೆ, ಹೊಸಬರನ್ನು ಲಾಂಚ್ ಮಾಡಲು ಲವ್ ಸ್ಟೋರಿನೆ ಬೇಸ್ ಎಂದು ಸ್ನೇಹಿತರೆಲ್ಲಾ ಹೇಳಿದರು. ಒಂದು ಪ್ರೀತಿಯನ್ನು ಹಲವಾರು ಸಂದಂರ್ಭಗಳು ಭಾರ ಮಾಡುತ್ತವೆ ಸಣ್ಣದೊಂದು ಇಗೋ, ಕ್ಲಾಶ್‌ನಿಂದ ನಾಯಕ ನಾಯಕಿ ಇಬ್ಬರೂ ಬೇರೆಯಾಗುತ್ತಾರೆ. ನಮ್ಮ ನಮ್ಮ ಆಲೋಚನೆಗಳೆ ನಮಗೆ ವಿಲನ್ ಆಗುತ್ತವೆ ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. ಬೆಂಗಳೂರು, ಮೈಸೂರು, ಮಡಿಕೇರಿ, ಕುಶಾಲನಗರ ಸುತ್ತಮುತ್ತಾ ಚಿತ್ರೀಕರಣ ನಡೆಸಲಾಗಿದ್ದು, ನವೆಂಬರ್ ೯ ರಂದು ರಿಲೀಸ್ ಆಗುತ್ತಿದೆ.

ನಾಯಕ ಕಿಶೋರ್ ಮಾತಾನಾಡಿ ಇದು ನನ್ನ ಪಸ್ಟ್ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವಂತಹ ಲವ್‌ಸ್ಟೋರಿ, ಪ್ರೀತಿ ಬಗ್ಗೆ ಯಾವುದೇ ನಂಬಿಕೆ ಇರದ ನಾಯಕ ಒಬ್ಬ ಹುಡುಗಿಯ ವಿಷಯದಲ್ಲಿ ಹೇಗೆ ನಂಬಿಕೆ ಉಳಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಎಳೆ ಎಂದು ಹೇಳಿದರು.

ನಿರ್ಮಾಪಕ ಕಿಂಗ್ ಲಿಂಗರಾಜು ಮಾತಾನಾಡಿ ಎಲ್ಲರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರಿಂದ ಸಿನಿಮಾ ಒಳ್ಳೆ ಸಮಯದಲ್ಲಿ ಹೊರಬರುತ್ತಿದೆ ಎಂದು ಹೇಳಿದರು. ಚಿತ್ರದಲ್ಲಿ ಕಳನಟನಾಗಿ ಕಾಣಿಸಿದ್ದ ವರ್ಧನ ಮಾತಾನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಮತ್ತೊಬ್ಬ ನಟ ನಂದಕುಮಾರ್ ಕೂಡ ಹಾಜರಿದ್ದರು.

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು ಟ್ರೈಲರ್: ಮಗ್ಧನೊಬ್ಬನ ಮೂರು ದೋಣಿಯ ಪಯಣ!

Published

on


ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್, ಲಿರಿಕಲ್ ವೀಡಿಯೋ ಸಾಂಗ್ ಮೂಲಕ ಈ ಚಿತ್ರದ ಕಥಾನಕದ ಬಗ್ಗೆ ಪ್ರೇಕ್ಷಕರಿಗೊಂದು ಅಂದಾಜು ಸಿಕ್ಕಿತ್ತು. ಆದರೆ ಈ ಟ್ರೈಲರ್ ಮೂಲಕ ಅದೆಲ್ಲವೂ ಉಲ್ಟಾ ಹೊಡೆದಿದೆ.

ಒರಟ ಪ್ರಶಾಂತ್ ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ ಮತ್ತು ಅವರು ಮೂವರು ಹುಡುಗೀರೊಂದಿಗೆ ಲವ್ವಲ್ಲಿ ಬೀಳುತ್ತಾರೆ ಎಂದೇ ಪ್ರೇಕ್ಷಕರೆಲ್ಲ ಅಂದುಕೊಂಡಿದ್ದರು. ಆದರೆ ಈ ಟ್ರೈಲರಿನಲ್ಲಿ ಬೇರೆಯದ್ದೇ ಸೂಚನೆ ಸಿಕ್ಕಿದೆ. ಜೊತೆಗೆ ನಾಯಕ ಯಾಕೆ ಮೂವರು ಹುಡುಗೀರ ಜೊತೆ ಡ್ಯುಯೆಟ್ ಹಾಡ್ತಾನೆ, ಯಾಕೆ ಸುತರ್‍ತಲಿನವರೆಲ್ಲ ಆತನಿಗೇ ಸಪೋರ್ಟು ಮಾಡುತ್ತಾರೆ ಅನ್ನೋ ಕ್ಯೂರಿಯಾಸಿಟಿಯ ಜೊತೆಗೇ, ಆನಿಮೇಟೆಡ್ ರಂಗಣ್ಣ ಮತ್ತೊಂದುಯ ಬಾಂಬನ್ನೂ ಹಾಕಿದ್ದಾನೆ!

ಆ ಪ್ರಕಾರ ಹೇಳೋದಾದ್ರೆ, ಈ ಸಿನಿಮಾದಲ್ಲಿ ಡಾಕ್ಟರ್ ಪೋಷಾಕು ತೊಟ್ಟಿರೋ ನಾಯಕ ಅಸಲಿಗೆ ಡಾಕ್ಟರೇ ಅಲ್ಲವಂತೆ. ಟೀಸರ್ ಅನ್ನು ನಿರೂಪಣೆ ಮಾಡಿ ಮನ ಗೆದ್ದಿದ್ದ ಕಾರ್ಟೂನ್ ರಂಗಣ್ಣ ಎಂಬ ಕ್ಯಾರೆಕ್ಟರಿನ ಮೂಲಕವೇ ನಿರ್ದೇಶಕರು ಈ ಟ್ರೈಲರ್ ಅಂತರಾಳವನ್ನೂ ಬಿಚ್ಚಿಟ್ಟಿದ್ದಾರೆ. ಅಂತೂ ಈ ಮೂಲಕವೇ ಯಾರಿಗೆ ಯಾರುಂಟು ಚಿತ್ರದ ಬಗ್ಗೆ ಅಗಾಧ ನಿರೀಕ್ಷೆಗಳು ಹುಟ್ಟಿಕೊಂಡಿವೆ.

Continue Reading

ಕಲರ್ ಸ್ಟ್ರೀಟ್

ಬೆಲ್‌ಬಾಟಮ್: ಬಿಡುಗಡೆಯಾಯ್ತು ರೆಟ್ರೋ ಹಬ್ಬದ ಟ್ರೈಲರ್!

Published

on


ನಿರ್ದೇಶಕ ಜಯತೀರ್ಥ ಇದುವರೆಗೂ ವಿಶಿಷ್ಟವಾದ ಕಥೆಗಳಿಗೇ ದೃಷ್ಯ ಸ್ಪರ್ಶ ನೀಡುತ್ತಾ ಬಂದಿದ್ದಾರೆ. ಪ್ರತೀ ಸಿನಿಮಾವೂ ಒಂದಕ್ಕಿಂತ ಒಂದು ಭಿನ್ನವಾಗಿರ ಬೇಕೆಂಬ ಅಭಿಲಾಶೆ ಹೊಂದಿರೋ ಜಯತೀರ್ಥ ಪಾಲಿಗೆ ಬೆಲ್ ಬಾಟಮ್ ಎಂಬುದು ಹೊಸಾ ಅನುಭವ ಕೊಟ್ಟಿದೆ. ಪಕ್ಕಾ ಆಧುನಿಕ ಜಗತ್ತಿನಲ್ಲಿ ನಿಂತು ರೆಟ್ರೋ ಲೋಕವೊಂದನ್ನು ಮರು ಸೃಷ್ಟಿ ಮಾಡೋದೇನು ಸಾಮಾನ್ಯ ಸಂಗತಿಯಲ್ಲ. ಬೆಲ್ ಬಾಟಮ್ ಚಿತ್ರತಂಡ ಅದನ್ನು ಎಲ್ಲರೂ ತಲೆದೂಗುವಂತೆ ಮಾಡಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಏತಕೆ… ಎಂಬ ಹಾಡು ರೆಟ್ರೋ ಸ್ಟೈಲಿನಲ್ಲಿಯೇ ಎಲ್ಲರ ಮನ ಗೆದ್ದಿತ್ತು. ಇದೀಗ ಬೆಲ್ ಬಾಟಮ್‌ನ ಟ್ರೈಲರ್ ಬಿಡುಗಡೆಯಾಗಿದೆ. ಇದು ಹೊರ ಬಂದು ಕೆಲವೇ ಘಂಟೆ ಕಳೆಯೋದರೊಳಗೆ ವ್ಯಾಪಕವಾಗಿ ಹರಿದಾಡುತ್ತಾ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಈ ಟ್ರೈಲರ್ ಬೆಲ್ ಬಾಟಮ್‌ನಲ್ಲಿ ಎಲ್ಲರನ್ನೂ ಖುಷಿಗೊಳಿಸುವ ರೆಟ್ರೋ ಹಬ್ಬವೇ ಇದೆ ಎಂಬುದನ್ನು ಸ್ಪಷ್ಟೀಕರಿಸಿದೆ.

ಈ ಕಾಲದಲ್ಲಿ ನಿಂತು ಎಂಭತ್ತರ ದಶಕದ ಕಥೆಗೆ ದೃಷ್ಯ ಕಟ್ಟುವಾಗ ಸೂಕ್ಷ್ಮ ವಿಚಾರಗಳಿಗೂ ಆಧ್ಯತೆ ಕೊಡ ಬೇಕಾಗುತ್ತದೆ. ಒಂದೇ ಒಂದು ಸಣ್ಣ ವಿಚಾರದೆಲ್ಲಿ ಎಚ್ಚರ ತಪ್ಪಿದರೂ ಎಡವಟ್ಟಾಗುತ್ತೆ. ಆದರೆ ಬೆಲ್ ಬಾಟಮ್ ಚಿತ್ರತಂಡ ಚಿತ್ರೀಕರಣ ಆರಂಭವಾಗೋದಕ್ಕೂ ಮುಂಚೆಯೇ ಇದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಬೆಲ್ ಬಾಟಮ್ ಕಾಲದಲ್ಲಿ ಬರುತ್ತಿದ್ದ ಪತ್ರಿಕಾ ಜಾಹೀರಾತಿಂದ ಮೊದಲ್ಗೊಂಡು ಎಲ್ಲವನ್ನೂ ಇಲ್ಲಿ ನೈಜವಾಗಿಯೇ ಮರು ಸೃಷ್ಟಿಸಲಾಗಿದೆಯಂತೆ.

ನಿರ್ದೇಶಕ ಜಯತೀರ್ಥ ಅವರೇ ಹೇಳೋ ಪ್ರಕಾರ ಹೀಗೆ ರೆಟ್ರೋ ಕಾಲದ ಪ್ರತೀ ಸೂಕ್ಷ್ಮಗಳನ್ನು ಹೆಕ್ಕಿದವರು ಈ ಸಿನಿಮಾ ಕಥೆಗಾರರೂ ಆಗಿರುವ ಟಿ.ಕೆ ದಯಾನಂದ್. ಈಗ ಪೋಸ್ಟರುಗಳಲ್ಲಿ ಎಲ್ಲರನ್ನೂ ಸೆಳೆದಿರೋ ಇಯಾಮಿ, ಲವಂಗದೆಣ್ಣೆ ಮುಂತಾದ ಈ ತಲೆಮಾರಿಗೆ ಅಪರಿಚಿತವಾದ ಜಾಹೀರಾತುಗಳ ಹಿಂದೆ ದಯಾನಂದ್ ಅವರ ಶ್ರಮವಿದೆ. ಕಾಸ್ಟ್ಯೂಮಿನಿಂದ ಮೊದಲ್ಗೊಂಡು ಎಲ್ಲ ಪರಿಕರಗಳ ವರೆಗೂ ಇಲ್ಲಿ ರೆಟ್ರೋ ಜಾತ್ರೆಯೇ ನೆರೆದಿದೆ. ಅದಕ್ಕೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಸಾಕ್ಷಿಯಾಗಿದೆ.

Continue Reading

ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು: ಆಶ್ಚರ್ಯದ ಹಾಡಿಗೆ ಸಿಕ್ಕಿತು ಅಚ್ಚರಿಯ ಗೆಲುವು!

Published

on


ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರದ ಹಾಡುಗಳು ಮಾಧುರ್ಯದಿಂದ ಪ್ರೇಕ್ಷಕರ ಮನಸು ತಾಕುತ್ತಲೇ ಇವೆ. ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು ಬಿ.ಜೆ ಭರತ್ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿವೆ. ಇದೀಗ ಕೃತಿಕಾ ರವೀಂದ್ರ ಮತ್ತು ಪ್ರಶಾಂತ್ ಕಾಂಬಿನೇಷನ್ನಿನ ವೀಡಿಯೋ ಸಾಂಗ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಸಿಕ್ಕಿರೋದು ಅಚ್ಚರಿದಾಯಕ ಸ್ಪಂದನೆ!

ಎಂಥಾ ಆಶ್ಚರ್ಯ ಕಂಡೆ ನೀನೇ ಅವಳು, ರಾಣಿ ಸೆರಗನ್ನು ಹೊದ್ದ ಬೆಳದಿಂಗಳು… ಎಂಬ ಈ ಹಾಡನ್ನು ಕೆ ಕಲ್ಯಾಣ್ ಬರೆದಿದ್ದಾರೆ. ಬಿ ಜೆ ಭರತ್ ಹೊಸಾ ಸೌಂಡಿಂಗ್‌ನೊಂದಿಗೆ ಸೃಷ್ಟಿಸಿರೋ ಈ ಹಾಡಿನ ದೃಷ್ಯ ವೈಭವ ಕೂಡಾ ಬೆರಗಾಗಿಸುವಂತಿದೆ. ಕೃತಿಕಾ ರವೀಂದ್ರ ಮತ್ತು ಪ್ರಶಾಂತ್ ರಾಜ್ ಈ ಹಾಡಿನಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ರಾಜಸ್ಥಾನದ ಮರುಭೂಮಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ದೃಷ್ಯಾವಳಿಗಳನ್ನು ಸೆರೆ ಹಿಡಿಯಲಾಗಿರೋ ಕಲಾತ್ಮಕ ಕೈಚಳಕದ ಬಗ್ಗೆ ಶರಣ್ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇಂಥಾ ಎಲ್ಲ ಕಾರಣಗಳಿಂದ ಈ ಹಾಡು ಹೊಸಾ ಟ್ರೆಂಡ್ ಅನ್ನೇ ಸೃಷ್ಟಿಸಿದೆ. ಈ ಮೂಲಕ ಕಿರಣ್ ಗೋವಿಯವರ ಯಶಸ್ವೀ ಗೀತೆಗಳ ಯಾನ ಅಡೆತಡೆಯಿಲ್ಲದೆ ಮುಂದುವರೆದಿದೆ. ಅದುವೇ ಗೆಲುವಾಗಿ ಚಿತ್ರವನ್ನು ಕೈ ಹಿಡಿಯೋ ಸೂಚನೆಗಳೂ ದಟ್ಟವಾಗಿವೆ.

Continue Reading

Trending

Copyright © 2018 Cinibuzz