ಶರಾವತಿ ತೀರದಲ್ಲಿ, ನನ್ನ ಹಾಡು ನನ್ನದು ಎಂಬ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿ ಮುಗಿಸಿರುವವರು ಪುನೀತ್ ಶರ್ಮ. ಈ ಎರಡೂ ಚಿತ್ರಗಳು ಬಿಡುಗಡೆಗೆ ಅಣಿಯಾಗಿರುವಾಗಲೇ ಅವರು ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾರೆ. ಮಹಿಳಾ ಕೇಂದ್ರಿತವಾದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ನಾಯಕಿಯಾಗಿ ನಟಿಸಲಿದ್ದಾರೆ!

ಪುನೀತ್ ಶರ್ಮ ಈಗಾಗಲೇ ನಿರ್ದೇಶನ ಮಾಡಿರೋ ಶರಾವತಿ ತೀರದಲ್ಲಿ ಮತ್ತು ನನ್ನ ಹಾಡು ನನ್ನದು ಚಿತ್ರಗಳು ಶೀರ್ಷಿಕೆಯಿಂದಲೇ ಪ್ರೇಕ್ಷಕರನ್ನು ಸೆಳೆದಿವೆ. ಅವೆರಡೂ ಕೂಡಾ ಸೂಕ್ಷ್ಮವಂತಿಕೆಯ ಕಥಾ ಹಂದರ ಹೊಂದಿರೋ ಚಿತ್ರಗಳೇ ಎಂಬ ಸುಳಿವೂ ಸಿಕ್ಕಿದೆ. ಇದೀಗ ಅವರು ಮೊದಲೆರಡು ಚಿತ್ರಗಳಿಗಿಂತಲೂ ಭೀನ್ನ ಜಾಡಿನ ಕಥೆಯೊಂದಿಗೆ ಈ ಚಿತ್ರವನ್ನು ಆರಂಭಿಸಲು ಮುಂದಾಗಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರ ಮಹಿಳಾ ಕೇಂದ್ರಿತವಾದದ್ದಂತೆ.

ಇದರಲ್ಲಿನ ಪಾತ್ರವನ್ನು ಸೃಷ್ಟಿಸುವಾಗ ಪುನೀತ್ ಶರ್ಮ ಫ್ರೆಶ್ ಮುಖವೊಂದರ ಕನಲಿಕೆಯಲ್ಲಿದ್ದರಂತೆ. ಆದರೆ ತೀರಾ ಹೊಸಬರಾದರೆ ತೂಕವಿರೋ ಆ ಪಾತ್ರವನ್ನು ನಿಭಾಯಿಸೋದು ಕಷ್ಟ ಎಂಬುದೂ ಅವರಿಗರಿವಾಗಿತ್ತು. ಆ ನಿಟ್ಟಿನಲ್ಲಿ ಆಲೋಚಿಸಿದಾಗ ಅವರಿಗೆ ಹೊಳೆದದ್ದು ಮಯೂರಿ. ಈಗಾಗಲೇ ಕೃಷ್ಣಲೀಲಾ

ಮುಂತಾದ ಚಿತ್ರಗಳ ಮೂಲಕ ತನ್ನ ನಟನಾ ಚಾತುರ್ಯವನ್ನ ಜಾಹೀರು ಮಾಡಿರೋ ಮಯೂರಿ ಕೂಡಾ ಥ್ರಿಲ್ ಆಗಿಯೇ ಈ ಚಿತ್ರವನ್ನ ಒಪ್ಪಿಕೊಂಡಿದ್ದಾರಂತೆ.

ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ಮಾಪಕ ರಮೇಶ್ ಬಾಬು ಅವರ ಜೊತೆಗೆ ಪುನೀತ್ ಶರ್ಮ ಅವರೂ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ದಿಲೀಪ್ ಈ ಚಿತ್ರದ ನಾಯಕರಾಗಿಯೂ ಆಯ್ಕೆಯಾಗಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸ್ಯಾಂಡಿ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ನವೀನ್ ಚಲ್ಲಾ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇದೇ ತಿಂಗಳ ಇಪ್ಪತ್ತೇಳರಿಂದ ಚಿತ್ರೀಕರಣ ಶುರುವಾಗಲಿದೆ.

#

LEAVE A REPLY

Please enter your comment!
Please enter your name here

five × one =