ಬಿಗ್‌ಬಾಸ್ ವಿನ್ನರ್ ಪ್ರಥಮ್ ಅಭಿನಯದ ಎಮ್‌ಎಲ್‌ಎ ಚಿತ್ರವನ್ನು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಕಣ್ಣೆವೆ ಮುಚ್ಚದೆ ಇಡೀ ಸಿನಿಮಾ ನೋಡಿ ಮುಗಿಸಿದ ಸಿದ್ದರಾಮಯ್ಯನವರು ಪ್ರಥಮ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಈತನ ಬಗ್ಗೆ ಭರವಸೆಯ ಭವಿಷ್ಯವನ್ನೂ ಹೇಳಿದ್ದಾರೆ!

ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿನಿಮಾ ನೋಡೋದೇ ಕಡಿಮೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರ ನೋಡಿ ಮೆಚ್ಚಿದ ಬಳಿಕ ಅವರು ಯಾವ ಸಿನಿಮಾವನ್ನೂ ನೋಡಿದ್ದಿಲ್ಲ. ಆದರೆ ಎಂಎಲ್‌ಎ ಚಿತ್ರ ನೋಡಿದ ಸಿದ್ದರಾಮಯ್ಯನವರು ರಾಜಕುಮಾರ ಚಿತ್ರದ ನಂತರ ತಮಗೆ ಭಾರೀ ಇಷ್ಟವಾದ ಚಿತ್ರ ಪ್ರಥಮ್ ಅಭಿನಯದ ಎಂಎಲ್‌ಎ ಅಂದಿದ್ದಾರೆ.

ಪ್ರಥಮ್ ತನ್ನದೇ ಆದ ವಿಶಿಷ್ಟವಾದ ಮ್ಯಾನರಿಸಂ ಮೂಲಕ ನಿಧಾನಕ್ಕೆ ಎಲ್ಲರಿಗೂ ಇಷ್ಟವಾಗುತ್ತಿದ್ದಾನೆ. ಇದೇ ರೀತಿ ಇನ್ನೆರಡು ಚಿತ್ರ ಬಂದರೆ ಪ್ರಥಮ್‌ನನ್ನು ಯಾರಿಂದಲೂ ಹಿಡಿದು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಭವಿಷ್ಯವನ್ನೂ ಹೇಳಿದ್ದಾರೆ. ಸಾಮಾನ್ಯವಾಗಿ ಒತ್ತಾಯಕ್ಕೆ ಬಿದ್ದು ಬಂದರೆ ಸಿದ್ದರಾಮಯ್ಯನವರು ಇಡೀ ಚಿತ್ರ ನೋಡೋದು ಕಷ್ಟ. ಆದರೆ ಅವರು ಎಂಎಲ್‌ಎ ಚಿತ್ರವನ್ನು ಪೂರ್ತಿ ನೋಡಿದ್ದಾರೆ, ಮೆಚ್ಚಿ ಮಾತಾಡಿದ್ದಾರೆ ಮತ್ತು ಪ್ರಥಮ್ ಅಭಿನಯವನ್ನು ಕೊಂಡಾಡಿದ್ದಾರೆಂದರೆ ಈ ಚಿತ್ರ ಪ್ರೇಕ್ಷಕರಿಗೂ ಮೋಡಿ ಮಾಡೋದು ಖಚಿತ!

ಎಂಎಲ್‌ಎ ಚಿತ್ರದ ಆರಂಭದಿಂದಲೂ ಸಿದ್ದರಾಮಯ್ಯನವರು ಪ್ರಥಮ್‌ಗೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೂ ಕೂಡಾ ಆಗಮಿಸಿದ್ದ ಸಿದ್ದು ಕ್ಲ್ಯಾಪ್ ಮಾಡಿ ಪ್ರೋತ್ಸಾಹಿಸಿದ್ದರು. ಅದು ಪ್ರಥಮ್ ಕಾಳಜಿಯ ಫಲ. ಈ ಚಿತ್ರವನ್ನು ಗಂಭೀರವಾಗಿ ತೆಗೆದುಕೊಂಡಿರೋ ಪ್ರಥಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಧೃವ ಸರ್ಜಾ ಮುಂತಾದವರು ಈ ಚಿತ್ರದ ನಾನಾ ಹಂತಗಳಲ್ಲಿ ಜೊತೆಯಾಗುವಂತೆ ಮಾಡಿದ್ದಾರೆ.

ಎಂಎಲ್‌ಎ ಪ್ರಥಮ್ ಅಭಿನಯದ ಎರಡನೇ ಚಿತ್ರ. ಇದರಲ್ಲಿ ಪ್ರಥಮ್ ಅಭಿನಯದಲ್ಲಿ ಭಾರೀ ಸುಧಾರಣೆ ಕಂಡಿದೆ ಎಂಬ ಅಭಿಪ್ರಾಯವೂ ಸಿದ್ದರಾಮಯ್ಯ ಸೇರಿದಂತೆ ಬಹುತೇಕರ ಕಡೆಯಿಂದ ವ್ಯಕ್ತವಾಗುತ್ತಿದೆ. ಅಂತೂ ಸಿದ್ದರಾಮಯ್ಯನವರ ಮಾತಿನಂತೆಯೇ ಇದೀಗ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರೋ ಪ್ರಥಮ್ ವಿಶಿಷ್ಟ ನಾಯಕ ನಟನಾಗಿ ನೆಲೆ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡ ಬೇಕಿದೆ.

#

LEAVE A REPLY

Please enter your comment!
Please enter your name here

four × 3 =