One N Only Exclusive Cine Portal

ಒಡಿಯಾನ್ ಚಿತ್ರದಲ್ಲಿ ಮೋಹನ್‌ಲಾಲ್ ವಿಚಿತ್ರಾವತಾರ!

ಮಲೆಯಾಳದ ಸೂಪರ್ ಸ್ಟಾರ್ ಮೋಹನ್‌ಲಾಲ್ ಸದಾ ಭಿನ್ನವಾದ ಚಿತ್ರಗಳಲ್ಲಿ ನಟಿಸುವ ಮೂಲಕವೇ ಚಾಲ್ತಿಯಲ್ಲಿರುವವರು. ಸದ್ಯ ಚಿತ್ರೀಕರಣದ ಹಂತದಲ್ಲಿರುವ ಅವರ ಬಹು ನಿರೀಕ್ಷಿತ ಚಿತ್ರ ಒಡಿಯಾನ್. ಸದ್ಯ ಈ ಚಿತ್ರದ್ದೊಂದು ವಿಶೇಷವಾದ ಹಾಡಿನ ಚಿತ್ರೀಕರಣ ನಡೆದಿದೆ. ಇದಕ್ಕಾಗಿ ಮೋಹನ್ ಲಾಲ್ ಕಾಣಿಸಿಕೊಂಡಿರೋ ವಿಚಿತ್ರ ಗೆಟಪ್ ಮಾಲಿವುಡ್ ತುಂಬಾ ಚರ್ಚೆಗೆ ಕಾರಣವಾಗಿದೆ.


ಒಡಿಯಾನ್ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ಭಾಗದ ಒಂದು ವಿಶೇಷವಾದ ಹಾಡಿನ ಚಿತ್ರೀಕರಣ ಬೆಟ್ಟಗುಡ್ಡಗಳ ಸುಂದರ ಪ್ರದೇಶದಲ್ಲಿ ನೆರವೇರಿದೆ. ಕಲಾ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡಿನಲ್ಲಿ ವಿಶಿಷ್ಟವಾದ ಪೋಶಾಕಿನಲ್ಲಿ ಆದಿವಾಸಿಗಳ ರೀತಿಯ ಮೇಕಪ್‌ನಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋಗಳೇ ಮಾಲಿವುಡ್ ತುಂಬಾ ಈ ಚಿತ್ರದ ಕಥೆಯ ಸುತ್ತಾ ನಾನಾ ಚರ್ಚೆಗಳನ್ನು ಹುಟ್ಟು ಹಾಕಿವೆ.


ಈ ಚಿತ್ರದಲ್ಲಿ ಮೋಹನ್ ಲಾಲ್ ಓಡಿಯಾನ್ ಮಾಣಿಕ್ಯಂ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಹಸ, ಸೆಂಟಿಮೆಂಟ್ ಸೇರಿದಂತೆ ಪಕ್ಕಾ ಮಾಸ್ ಕಥಾ ಹಂದರ ಹೊಂದಿರೋ ಈ ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರ ಹೊಮ್ಮುತ್ತದೆ ಎಂಬ ಲೆಕ್ಕಾಚಾರ ಮಾಲಿವುಡ್‌ನಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image