One N Only Exclusive Cine Portal

ಮೊಟ್ಟೆ ರಾಜೇಂದ್ರ ಈಗ ಹಾರರ್ ಹೀರೋ!

ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಪೋಷಕ ನಟ ಮೊಟ್ಟೈ ರಾಜೇಂದ್ರ. ಚಿತ್ರ ವಿಚಿತ್ರವಾದ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿರುವ ಈತ ತಮಿಳು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಬೇಡಿಕೆಯ ನಟ. ತಮಿಳು ನೇಟಿವಿಟಿಯ ರಗಡ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ರಾಜೇಂದ್ರ ಇದೀಗ ಹೀರೋ ಆಗಿದ್ದಾರೆ!

ಆರ್ ಎ. ಆನಂದ್ ನಿರ್ದೇಶನದ ಮೋಹನ ಎಂಬ ಕಾಮಿಡಿ ಹಾರರ್ ಚಿತ್ರದಲ್ಲಿ ಮೊಟ್ಟೈ ರಾಜೇಂದ್ರ ಹೀರೋ ಆಗಿದ್ದಾರೆ. ಜೊತೆಗೆ ಇತರೇ ಹೀರೋಗಳೇ ಅಸೂಯೆ ಪಡುವಂತೆ ಇಬ್ಬಿಬ್ಬರು ಹೀರೋಯಿನ್‌ಗಳ ಜೊತೆ ಮಜವಾದ ಪಾತ್ರವೊಂದರಲ್ಲಿ ಮೊಟ್ಟೈ ಕಾಣಿಸಿಕೊಂಡಿದ್ದಾರೆ.

ಇದೊಂದು ಸತ್ಯ ಕಥೆ ಆಧಾರಿತವಾದ ಹಾರರ್ ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿದೆಯಂತೆ. ಇದರಲ್ಲಿ ರಾಜೇಂದ್ರ ಹೀರೋ ಆಗಿದ್ದರೂ ಪವರ್‌ಸ್ಟಾರ್ ಶ್ರೀನಿವಾಸನ್ ಬಹು ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.

ಅಂದಹಾಗೆ ಇದು ಎಂಭತ್ತರ ದಶಕದಲ್ಲಿ ಕಾಂಚಿಪುರದ ತಿರುಮಲ್ಪುರ್ ಎಂಬ ಹಳ್ಳಿಯೊಂದರಲ್ಲಿ ನಡೆದ ಸತ್ಯ ಕಥೆ. ಹಳ್ಳಿ ಸೀಮೆಯ ನಾಟಕ ಕಲಾವಿದರ ಸುತ್ತ ಈ ಚಿತ್ರ ಕಥೆ ಸುತ್ತುತ್ತದೆ. ಈ ಸತ್ಯಕಥೆಗೆ ಸಿನಿಮಾ ಟಚ್ ಕೊಟ್ಟು ನಿರ್ದೇಶಕ ಆನಂದ್ ಅವರು ರುಚಿಕಟ್ಟಾದ ಚಿತ್ರವನ್ನು ರೆಡಿ ಮಾಡುತ್ತಿದ್ದಾರಂತೆ.


ಈ ಚಿತ್ರದಲ್ಲಿ ಹೀರೋ ಮೊಟ್ಟೈ ರಾಜೇಂದ್ರನಿಗೆ ಕಲ್ಯಾಣಿ ನಾಯರ್ ಮತ್ತು ಅಸ್ಮಿತಾ ನಾಯಕಿಯರಾಗಿ ನಟಿಸಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image