ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ರಾಜ್ ಪಂಡಿತ್ ಮೌನಂ ನ ರಚನೆ ಮತ್ತು ನಿರ್ದೆಶನ ಮಾಡಿದ್ದಾರೆ. ಇನ್ನು ಶಂಕರ್ ಛಾಯಾಗ್ರಹಣ, ಆರವ್ ರಿಶಿಕ್ ಸಂಗೀತ ಸಂಯೋಜನೆ, ಗುರು ಮೂರ್ತಿ ಹೆಗಡೆ ಸಂಕಲನ, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಸಿನಿಮಾಕ್ಕಿದೆ.  ಮೌನಂ ನ ತಾರಾಗಣದಲ್ಲಿ ಅವಿನಾಶ್, ಕೃಷ್ಣ ಲೀಲಾ ಮಯೂರಿ, ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ) ಪ್ರಮುಖ ಪಾತ್ರದಲ್ಲಿದ್ದು, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ ಮುಂತಾದವರಿದ್ದಾರೆ.

ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ರವರು ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಠವಾದ ಪಾತ್ರದಲ್ಲಿ ಸುಮಾರು 6 ಶೇಡ್‍ಗಳಿರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಯೂರಿ ಅವರು ಹೋಮಿ ಮತ್ತು ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಮಿಂಚಿದ್ದಾರೆ.  ಮನುಷ್ಯನಿಗೆ ಮನುಷ್ಯನೇ ಶತ್ರು,  ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬುದನ್ನು ಮೌನಂ ತನ್ನದೇ ಆದ ದಾಟಿಯಲ್ಲಿ ಹೇಳ ಹೊರಟಿದೆ.

Arun Kumar

ರತ್ನ ಮಂಜರಿ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್!

Previous article

ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡ ಟಕ್ಕರ್!

Next article

You may also like

Comments

Leave a reply

Your email address will not be published. Required fields are marked *