ಬೆಂಗಳೂರಿನಲ್ಲಿಯೇ ಬದುಕುತ್ತಿದ್ದರೂ ಈ ನಗರವನ್ನು ಹೀನಾಮಾನ ಬೈದಾಡಿಕೊಂಡು ಓಡಾಡುವವರು ಅನೇಕರಿದ್ದಾರೆ. ಇಂಥವರ ಪಾಲಿಗೆ ಐಟಿ ಸಿಟಿ ಅಂದರೆ ಸಮಸ್ಯೆಗಳ ಸಂತೆಯಷ್ಟೇ. ಆದರೆ ಅದೆಷ್ಟೋ ನಗರಗಳನ್ನು ಸುತ್ತಿ ಬಂದವರ ಪಾಲಿಗೆ ಬೆಂಗಳೂರೆಂಬುದು ಸ್ವರ್ಗದಂತೆಯೇ ಕಾಣಿಸುತ್ತೆ. ಅದರಲ್ಲಿಯೂ ಬಾಲಿವುಡ್ ನಟ ನಟಿಯರು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ಬಗ್ಗೆ ಒಳ್ಳೆ ಮಾತುಗಳನ್ನಾಡುತ್ತಾರೆ. ಇದೀಗ ಬಬಾಲಿವುಡ್‌ನ ಖ್ಯಾತ ನಟಿ ಮುಗ್ಧಾ ಗೋಡ್ಸೆ ಸರದಿ…

ಮುಗ್ಧಾ ಗೋಡ್ಸೆ ಇತ್ತೀಚೆಗೆ ಸಮಾರಂಭವೊಂದರ ನಿಮಿತ್ತವಾಗಿ ಬೆಂಗಳೂರಿಗೆ ಬಂದಿದ್ದಳು. ಇದೇ ಸಂದರ್ಭದಲ್ಲಿ ಐಟಿ ಸಿಟಿಯ ಬಗ್ಗೆ ಮೋಹದ ಮಾತುಗಳನ್ನಾಡಿದ್ದಾಳೆ. ಬಾಲಿವುಡ್‌ನಲ್ಲಿ ಬಹು ಬೇಡಿಕೆ ಹೊಂದು ಸದಾ ಬ್ಯುಸಿಯಾಗಿರೋ ಈಕೆ ಬೆಂಗಳೂರಿಗೆ ಬರೋ ಯಾವ ಅವಕಾಶಗಳನ್ನೂ ಮಿಸ್ ಮಾಡಿಕೊಳ್ಳೋದಿಲ್ಲವಂತೆ. ಈ ನಗರಿ ಮುಗ್ಧಾ ಪಾಲಿಗೆ ತನ್ನೆಲ್ಲ ಜಂಜಡಗಳಿಂಗ ಹೊರ ಬಂದು ರಿಲೀಫಾಗೋ ಅವಕಾಶ ಕಲ್ಪಿಸುತ್ತದೆಯಂತೆ.
ಮುಗ್ಧಾ ಮತ್ತು ಬೆಂಗಳೂರಿನದ್ದು ಬಹು ವರ್ಷಗಳ ನಂಟು. ಚಿಕ್ಕ ವಯಸ್ಸಿನಿಂದಲೂ ಇಲ್ಲಿಗೆ ಬರುತ್ತಿದ್ದ ಮುಗ್ಧಾ ಪಾಲಿಗೆ ಬೆಂಗಳೂರು ಯಾವತ್ತಿದ್ದರೂ ಮುಗಿಯದ ಬೆರಗು. ಆ ಕಾಲದಿಂದಲೂ ಇಲ್ಲಿನ ನಾನಾ ಏರಿಯಾಗಳಲ್ಲಿ ಈಕೆಯ ನೆಚ್ಚಿನ ಸ್ಥಳಗಳಿವೆ. ಈಗ ಬಂದಾಗಲೂ ಅಂಥಾ ಪ್ರದೇಶಗಳಿಗೆ ತೆರಳಿ ಹಳೇ ನೆನಪುಗಳ ಮೈಸವರಿ ಮುದಗೊಳ್ಳೋದಂದ್ರೆ ಮುಗ್ಧಾಗಿಷ್ಟ. ಇಲ್ಲಿನ ಅನೇಕ ಕಾಫಿ ಶಾಪುಗಳು ಮುಗ್ಧಾಳ ಫೇವರಿಟ್ ಸ್ಪಾಟುಗಳಾಗಿವೆ. ಬೆಂಗಳೂರಿನಲ್ಲಿ ಸಿಗೋ ಹಾಟ್ ಕೇಕ್ ಅಂದರೆ ಜೀವ ಬಿಡೋ ಮುಗ್ಧಾ ಪಾಲಿಗೆ ಬೆಂಗಳೂರೆಂಬುದು ಎಂದೂ ಮುಗಿಯದ ಸಜೀವ ಬೆರಗು!

#

Arun Kumar

ಕೆ.ಜಿ.ಎಫ್. : ಚಿನ್ನದ ನೆಲದಲ್ಲಿ ಬದುಕು ಕಳೆದುಕೊಂಡವರ ದನಿಯಾದ ರಾಕಿ!

Previous article

ಬಿಲ್ಲಾ ರಂಗ ಭಾಷಾ: ಮೂರು ಅವತಾರದಲ್ಲಿ ಮಿಂಚಲಿದ್ದಾರಾ ಸುದೀಪ್?

Next article

You may also like

Comments

Leave a reply

Your email address will not be published. Required fields are marked *