One N Only Exclusive Cine Portal

ಆಪ್ತಮಿತ್ರರ ಜೊತೆಗೆ ಬಂದಳು ನಾಗವಲ್ಲಿ!

ಅರುಣ್ ಶಂಕರ್ ನಿರ್ದೇಶನದ ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದೆ. ಮೊನ್ನೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿರುವ ಶಂಕರ್ ಅರುಣ್ ಮಾತನಾಡುತ್ತಾ ನಮ್ಮ ಚಿತ್ರಕ್ಕೆ ಈ ಹಿಂದೆ ಆಪ್ತಮಿತ್ರ-೨ ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಆದರೆ ನಮಗೂ ಮುಂಚೆ ಅದೇ ಹೆಸರಿನಲ್ಲಿ ಬೇರೊಬ್ಬ ನಿರ್ಮಾಪಕರು ಟೈಟಲ್ ನೋಂದಣಿ ಮಾಡಿಸಿದ್ದರಿಂದ ಅನಿವಾರ್ಯವಾಗಿ ನಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಬೇಕಾಗಿ ಬಂತು. ಚಿತ್ರ ನೋಡುಗರಿಗೆ ಕ್ಲೈಮಾಕ್ಸ್ ಸೀನ್ ಖಂಡಿತ ಕಾಡುತ್ತದೆ. ಕೇರಳದ ಅನಂತ ಪದ್ಮನಾಭ ಅರಮನೆಯಲ್ಲಿ ಇಲ್ಲಿಯವರೆಗೂ ಯಾರು ಚಿತ್ರೀಕರಣ ನಡೆಸಿಲ್ಲ. ಕಷ್ಟಪಟ್ಟು ೭ ದಿನಗಳ ಅನುಮತಿ ಪಡೆದುಕೊಂಡು ಸಮಯ ವ್ಯರ್ಥಮಾಡದೆ ನಿರಂತರವಾಗಿ ಚಿತ್ರೀಕರಣ ಮಾಡಿದ್ದು ದೊಡ್ಡ ಸಾಹಸವೇ ಸರಿ.

ಭಾರತದಲ್ಲಿ ನಾಗವಲ್ಲಿಯ ಕುರಿತಂತೆ ಇದುವರೆಗೆ ಯಾರು ಚಲನಚಿತ್ರವನ್ನು ನಿರ್ಮಾಣ ಮಾಡಿಲ್ಲ. ನಾವು ಅಂತಹ ದೊಡ್ಡ ಸಾಹಸಕ್ಕೆ ಕೈಹಾಕಿದ್ದು ಇದೀಗ ಫಲ ನೀಡಿದೆ. ಚಿತ್ರದ ಪ್ರತೀ ದೃಶ್ಯಗಳು ಪ್ರೇಕ್ಷಕನಿಗೆ ಕುತೂಹಲ ಮೂಡಿಸುತ್ತ ಸಾಗುತ್ತವೆ. ನಾಗವಲ್ಲಿಯ ಕತೆಯು ಕಾಲ್ಪನಿಕವಾಗಿಲ್ಲ. ಅಲ್ಲಿನ ಇತಿಹಾಸ ತಜ್ಞರಿಂದ ಮಾಹಿತಿಗಳನ್ನು ಕೆಲಹಾಕಿ ಕತೆಯನ್ನು ಹೆಣೆಯಲಾಗಿದೆ. ಮುಂದೆ ಯಾರಾದರೂ ಇದರ ಬಗ್ಗೆ ತಕರಾರು ಮಾಡಬಹುದು ಎಂಬ ಉದ್ದೇಶದಿಂದ ಕೇರಳ ಸರ್ಕಾರದಿಂದ ಅನುಮತಿ ಪತ್ರವನ್ನು ಕೂಡ ಪಡೆದುಕೊಂಡಿದ್ದೇವೆ. ಕೆಂಪೆಗೌಡ ರಸ್ತೆಯ ಚಿತ್ರಮಂದಿರವೆಂಬ ಪರಿಕಲ್ಪನೆಗೆ ಒಳಗಾಗದೆ ಬೇರೆ ಉತ್ತಮ ಚಿತ್ರಮಂದಿರಗಳಲ್ಲಿ ಬರುವ ಏಪ್ರಿಲ್ ೨೦ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ, ಮುಂದೇನು ಎಂದು ಎಲ್ಲರನ್ನೂ ಕಾಡುವಂತೆ ಚಿತ್ರದ ಕ್ಲೈಮಾಕ್ಸ್ ಮೂಡಿಬಂದಿದೆ ಎಂದು ಹೇಳಿದರು.

ಚಿತ್ರದ ನಾಯಕನಟ ವಿಕ್ರಂ ಕಾರ್ತಿಕ್ ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಅವರ ಸಾವಿಗೆ ಕಾರಣರಾದ ನಾಗವಲ್ಲಿಯನ್ನು ಹುಡುಕಿಕೊಂಡು ಹೋಗುವ ಪಾತ್ರ ನನ್ನದು ಎಂದು ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ವೈಷ್ಣವಿ ಚಂದ್ರನ್ ಮಾತನಾಡುತ್ತ ನಾನು ಚಿತ್ರದಲ್ಲಿ ಒಬಬ್ ಸೈಕಿಯಾಟ್ರಿಕ್ ವೈದ್ಯೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *


CAPTCHA Image
Reload Image