One N Only Exclusive Cine Portal

ನಾಳೆಯಿಂದ ಅನ್ವೇಶಿ ಅಬ್ಬರ ಶುರು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವೇಮಗಲ್ ಜಗನ್ನಾಥ್ ನಿರ್ದೇಶನದ ಅನ್ವೇಶಿ ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಡುಗಳು ಮತ್ತು ಟ್ರೈಲರ್ ಮೂಲಕವೇ ನಾನಾ ದಿಕ್ಕಿನಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಚಿತ್ರ ಬಿಡುಗಡೆಯಾಗಲು ಕ್ಷಣಗಣನೆ ಶುರುವಾಗಿದೆ.

ದೆವ್ವ ಭೂತಗಳ ಮಾಮೂಲಿ ವರಸೆಗಳನ್ನು ಮೀರಿ ಸೈಂಟಿಫಿಕ್ ಬೇಸಿನ ಹಾರರ್ ಕಥೆಯನ್ನು ಅನ್ವೇಶಿ ಒಳಗೊಂಡಿದೆ ಅಂತ ಚಿತ್ರತಂಡ ಈಗಾಗಲೇ ಸುಳಿವು ನೀಡಿದೆ. ಟ್ರೈಲರ್‌ನಲ್ಲೇ ಕಥೆಯ ನಿಗೂಢವನ್ನು ಕಾಡುವಂತೆ ಕಟ್ಟಿ ಕೊಡೋ ಮೂಲಕ ಎಲ್ಲರನ್ನೂ ಸೆಳೆಯುವಲ್ಲಿ ಚಿತ್ರ ತಂಡ ಗೆದ್ದಿದೆ. ಇದೀಗ ಎನ್‌ಟಿಆರ್ ಮೊಮ್ಮಗ ನಂದಮೂರಿ ತಾರಕರತ್ನ ಖುದ್ದಾಗಿ ಚಿತ್ರಕ್ಕೆ ಶುಭ ಕೋರುವ ಮೂಲಕ ಅನ್ವೇಶಿಯೆಡೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ.
ವಿ.ಜಯರಾಮ್ ನಿರ್ಮಾಣದ ಈ ಚಿತ್ರದಲ್ಲಿ ರಘು ಭಟ್ ಮತ್ತು ತಿಲಕ್ ಶೇಖರ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಸಿಕ್ಸ್ತ್ ಸೆನ್ಸ್ ಬಗ್ಗೆ ಲೇಖನವೊಂದನ್ನು ಸಿದ್ಧಪಡಿಸಲು ಹೊರಡೋ ನಾಯಕ ಅಲ್ಲೆದುರಿಸೋ ಅಂಶಗಳನ್ನು, ಕಾಲೇಜು, ರ್‍ಯಾಂಗಿಂಗ್, ಕೊಲೆ ಮುಂತಾದ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಈ ಹಾರರ್ ಚಿತ್ರವನ್ನು ರೂಪಿಸಲಾಗಿದೆಯಂತೆ.
ಈಗಾಗಲೇ ನಾನಾ ತೆರನಾಗಿ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರ ಎಂಥಾ ಮೋಡಿ ಮಾಡಲಿದೆ ಎಂಬುದು ಇನ್ನೊಂದು ದಿನದಲ್ಲಿ ಜಾಗೀರಾಗಲಿದೆ.
ಲಕ್ಷ್ಮಿ ವೆಂಕಟೇಶ್ವರ ಎಂಟರ್‌ಟೈನರ್ ನಿರ್ಮಿಸಿರುವ ಅನ್ವೇಷಿ ಚಲನಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿ. ಜಯರಾಂ ನಿರ್ಮಿಸಿರುವ ಈ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವನ್ನು ವೇಮಗಲ್ ಜಗನ್ನಾಥ್ ರಾವ್ ನಿರ್ದೇಶಿಸಿದ್ದಾರೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಬಂಗಾಲಿ ಭಾಷೆಗಳಲ್ಲಿ ಈಗಾಗಲೆ ಡಬ್ಬಿಂಗ್ ಹಕ್ಕನ್ನು ನೀಡಲಾಗಿದ್ದು, ಈ ವಿಭಿನ್ನ ಅಧ್ಬುತ ಕಥೆಯ ಚಿತ್ರವು ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.
ತಿಲಕ್ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ೨ನೇ ನಾಯಕನಾಗಿ ರಘುಭಟ್ ನಟಿಸಿದ್ದಾರೆ. ಅವಿನಾಶ್, ರಮೇಶ್‌ಭಟ್, ಬ್ಯಾಂಕ್ ಜನಾರ್ದನ್, ಅನು ಅಗರ್‌ವಾಲ್, ದಿಶಾ ಪೂವಯ್ಯ, ರಮ್ಯಾ ಬಾರ್ನ, ಶ್ರದ್ದಾ ಶರ್ಮ, ವಿಕ್ರಂ ಸೂರಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನಾಗೇಶ್ ಆಚಾರ್ಯ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೈಲಿನ್ ಹೇಮಂತ್ ಅವರ ಸಂಗೀತವಿದೆ. ಶಿವಪ್ರಸಾದ್ ಯಾದವ್ ಸಂಕಲನ, ಅರವಿಂದ್ ನೃತ್ಯ ನಿರ್ದೇಶನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image