One N Only Exclusive Cine Portal

ಇಷ್ಟರಲ್ಲೇ ನಡೆಯಲಿದೆ ನಂಜುಂಡಿ ಕಲ್ಯಾಣ!

ಮತ್ತೊಮ್ಮೆ ಮೂಡಿಬರುತ್ತಿರುವ ’ನಂಜುಂಡಿ ಕಲ್ಯಾಣ’ ಚಿತ್ರಕ್ಕೂ ಹಿಂದಿನ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಠಮಾರಿ ತಾಯಿಯ ಮನಸ್ಸನ್ನು ಪರಿವರ್ತಿಸಿ ಪ್ರೀತಿಸಿದ ಹುಡುಗಿಯನ್ನು ಹೇಗೆ ಮದುವೆಯಾಗುತ್ತಾನೆ ಎಂಬುದು ಈ ನಂಜುಂಡಿ ಕಲ್ಯಾಣದ ತಿರುಳು. ನಾಯಕ ತನುಶ್ ಶಿವಣ್ಣ ಅವರಿಗೆ ಇದು ಮೂರನೆ ಪ್ರಯತ್ನ. ಮಧ್ಯಮ ವರ್ಗದ ಹುಡುಗಿಯಾಗಿ ಶ್ರಾವ್ಯ ನಾಯಕಿ. ಉಳಿದಂತೆ ಬಜಾರಿ ತಾಯಿ ಪಾತ್ರಕ್ಕೆ ಪದ್ಮಜಾರಾವ್, ಅಮ್ಮಾವ್ರ ಗಂಡನಾಗಿ ಮಂಜುನಾಥ್ ಹೆಗ್ಗಡೆ, ನಗಿಸಲು ಕುರಿ ಪ್ರತಾಪ್, ಮತ್ತು ರಂಗಭೂಮಿ ಪ್ರತಿಭೆ, ಬಾಟ್ನಿ ಪ್ರೊಫೆಸರ್ ಮಮತರಾವ್ ಮೊದಲಬಾರಿ ಬಣ್ಣ ಹಚ್ಚಿದ್ದಾರೆ. ಬ್ಯಾಂಕಾಕ್, ಪಟ್ಟಾಯದ ಸುಂದರ ತಾಣಗಳಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಅರಸು ಅಂತಾರೆ ಸಾಹಿತ್ಯದ ಮೂರು ಗೀತೆಗಳಿಗೆ ಅನೂಪ್‌ಸೀಳನ್ ರಾಗ ಸಂಯೋಜಿಸಿದ್ದಾರೆ.


ಚಿತ್ರದಲ್ಲಿ ಸಲಿಂಗಿಗಳ ಸನ್ನಿವೇಶಗಳು ಕೆಲವೊಂದು ಕಡೆ ಇರುವ ಕಾರಣ ಸೆನ್ಸಾರ್ ಮಂಡಳಿಯು ಎ ಪ್ರಮಾಣಪತ್ರ ನೀಡಿದೆಯಂತೆ. ಸಿನಿಮಾ ನೋಡುತ್ತಾ ನಗದೇ ಇರೋ ಪ್ರೇಕ್ಷಕನೊಬ್ಬನಿಗೆ ಐವತ್ತು ಸಾವಿರ ಬಹುಮಾನ ನೀಡಲು ತಂಡವು ಯೋಜನೆ ಹಾಕಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದು ಬಿಡುಗಡೆ ನಂತರ ತಿಳಿಯಲಿದೆ. ರಂಗಕರ್ಮಿ, ನಟ ರಾಜೇಂದ್ರಕಾರಂತ್ ಕತೆ ಬರೆದು ನಿರ್ದೇಶನ ಮಾಡಿರುವುದು ವಿಶೇಷ.

Leave a Reply

Your email address will not be published. Required fields are marked *


CAPTCHA Image
Reload Image