ರಾಜೇಂದ್ರ ಕಾರಂತ್ ನಿರ್ದೇಶನದ ನಂಜುಂಡಿ ಕಲ್ಯಾಣ ಚಿತ್ರ ತೆರೆ ಕಂಡಿದೆ. ಇಪ್ಪತ್ತೊಂಭತ್ತು ವರ್ಷಗಳಷ್ಟು ಹಿಂದೆ ತೆರೆ ಕಂಡಿದ್ದ ನಮಜುಂಡಿ ಕಲ್ಯಾಣ ಚಿತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಮೈಲಿಗಲ್ಲೊಂದನ್ನು ನೆಟ್ಟಿತ್ತು. ಆದ್ದರಿಂದಲೇ ಅದೇ ಹೆಸರಲ್ಲಿ ತಯಾರಾಗಿದ್ದ ತನುಷ್ ನಟನೆಯ ಈ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಅಂಥಾ ನಿರೀಕ್ಷೆ ಹೊತ್ತ ಪ್ರೇಕ್ಷಕರು ತರ್ಕಗಳನ್ನು ಪಕ್ಕಕ್ಕಿಟ್ಟು ನೋಡಿದರೆ ನಕ್ಕು ಹಗುರಾಗಿಸುವಲ್ಲಿ ನಂಜುಂಡಿ ದೋಖಾ ಮಾಡೋದಿಲ್ಲ!
ಬರೀ ತರ್ಕಗಳಿಗೆ ಗಂಟು ಬಿದ್ದರೆ ನಗುವೂ ಯಾಂತ್ರಿಕವಾಗಿ ಬಿಡುತ್ತದೆ. ಅಂಥ ತರ್ಕಗಳಾಚೆಗೆ ನಗಲು ಬರಪೂರ ಕಂಟೆಂಟು ಹೊಂದಿರೊ ಚಿತ್ರ ನಂಜುಂಡಿ ಕಲ್ಯಾಣ. ಹಣ ಮದದಿಂದ ಮೆರೆದಾಡೋ ಮನಸ್ತಿತಿಯ ಅಮ್ಮ. ಹೇಗಾದರೂ ಮಾಡಿ ಆಕೆಯ ಅಹಮ್ಮಿಕೆಯನ್ನು ಪ್ರಿತಿಯ ಹಾದಿಯಿಂದಲೇ ಮಟ್ಟ ಹಾಕಿ ತನ್ನ ಪ್ರೀತಿಯನ್ನೂ ಉಳಿಸಿಕೊಲ್ಳುವ ಸಂದಿಗ್ಧಕ್ಕೆ ಸಿಕ್ಕ ನಾಯಕ. ಅದಕ್ಕೆಂದೇ ಅತ ತಾನಿರುವ ಫಾರಿನ್ನಿನಿಂದಲೇ ಒಂದು ಉಪಾಯ ಮಾಡಿಕೊಂಡು ತವರು ನೆಲಕ್ಕೆ ಮರಳುತ್ತಾನೆ.
ಸ್ನೇಹಿತ ಮಾಲುಗೆ ವಿಚಿತ್ರ ಗೆಟಪ್ಪು ಹಾಕಿಸಿ ಆತನನ್ನೇ ಮದುವೆಯಾದಂತೆ ತೋರಿಸಿಕೊಳ್ಳುವ ನಂಜುಂಡಿ ಮಾಲು ಸಮೇತ ಅಮ್ಮನ ಮುಂದೆ ಹಾಜರಾಗುತ್ತಾನೆ. ಅದರೆ ಅಮ್ಮ ತನ್ನ ಮಗನ ಸಲಿಂಗ ಕಲ್ಯಾಣದ ವಿರುದ್ದ ರೊಚ್ಚಿಗೇಳುತ್ತಾಳೆ. ಹೇಗಾದರೂ ಮಾಡಿ ತನ್ನ ಮಗನನ್ನು ಮಾಲುವಿನಿಂದ ಬೇರ್ಪಡಿಸಲು ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಾಳೆ. ಇದರಲ್ಲಿ ಆಕೆ ಗೆಲುವು ಕಾಣುತ್ತಾಳಾ? ನಂಜುಂಡಿ ಅಮ್ಮನ ಗರ್ವಭಂಗ ಮಾಡಿ ತಾನು ಪ್ರೀತಿಸಿದ ವಿಂಧ್ಯಾಳನ್ನು ವರಿಸುತ್ತಾನಾ ಎಂಬುದು ಒಟ್ಟಾರೆ ಕತೆ ಮತ್ತು ಕೌತುಕ!
ಕುರಿ ಪ್ರತಾಪ್ ಈ ಸಲಿಂಗಿಯ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾರೆ. ಅವರೇ ಬಹುತೇಕ ಫ್ರೇಮುಗಳಲ್ಲಿ ಮಿಂಚಿದ್ದಾರೆ. ನಾಯಕ ತನುಷ್ ಕೂಡಾ ನಂಜುಂಡಿಯ ಪಾತ್ರದಲ್ಲಿ ನೆನಪಲ್ಲುಳಿಯುವಂತೆ ನಟಿಸಿದ್ದಾರೆ. ಭಾವನತ್ಮಕ ಸನ್ನಿವೇಷಗಳಲ್ಲಿನ ತೊಡಕುಗಳನ್ನು ಪೈಟ್ ಸೀನುಗಲಲ್ಲಿ ನಿವಾರಿಸಿ ನಟಿಸಿದ್ದಾರೆ. ಶ್ರಾವ ನಯಕಿಯಾಗಿ ಸೀಮಿತ ಅವಧಿಯನ್ನು ಬಳಸಿಕೊಂಡಿದ್ದಾರೆ.
ಕೆಲ ಕೊರತೆಗಳಾಚೆಗೂ ಅಚ್ಚುಕಟ್ಟಾಗಿ ಪಾತ್ರ ಕಟ್ಟುವಲ್ಲಿ ನಿರ್ದೇಶಕ ರಾಜೇಂದ್ರ ಕಾರಂತ್ ಅವರೂ ಗಮನಾರ್ಹ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆಯಾಗಿ ನಂಜುಂಡಿ ನಗುವಿಗೇನೂ ಮೋಸ ಮಾಡುವುದಿಲ್ಲ!