One N Only Exclusive Cine Portal

ನಂಜುಂಡಿಕಲ್ಯಾಣ : ಇದು ರಾಜೇಂದ್ರ ಕಾರಂತರ ಮೊದಲ ಸಿನಿಮಾ ಕನಸು!

ರಂಗಭೂಮಿಯಿಂದ ಬಂದ ಪ್ರತಿಭೆಗಳು ಚಿತ್ರರಂಗದಲ್ಲಿ ಯಾವ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆಂದರೂ ಪ್ರೇಕ್ಷಕರು ಖುಷಿಯಾಗುತ್ತಾರೆ. ಮಾಮೂಲಿಗಿಂತ ಒಂದು ಹಿಡಿ ಹೆಚ್ಚೇ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾರೆ. ಸದ್ಯ ನಂಜುಂಡಿಕಲ್ಯಾಣ ಚಿತ್ರದೆಡೆಗೂ ಕೂಡಾ ಅಂಥಾದ್ದೇ ಒಂದು ಹೋಪ್ ಸೃಷ್ಟಿಯಾಗಲು ಕಾರಣ ರಾಜೇಂದ್ರ ಕಾರಂತ್.

ರಂಗಭೂಮಿಯಲ್ಲಿ ನಟನೆಯ ಜೊತೆಗೆ ನಿರ್ದೇಶನದಲ್ಲಿಯೂ ಹೆಸರು ಮಾಡಿರುವವರು ರಾಜೇಂದ್ರ ಕಾರಂತ್. ಇವರು ಕರ್ನಾಟಕದಾಧ್ಯಂತ ಮನೆ ಮಾತಾಗಿದ್ದು ಅಕ್ಕ ಧಾರಾವಾಹಿಯ ಪಾತ್ರವೊಂದರ ಮೂಲಕ. ಆ ಪಾತ್ರದಲ್ಲಿ ವಿಶಿಷ್ಟ ಮ್ಯಾನರಿಸಮ್ಮಿನ ಇವರ ನಟನೆಯನ್ನು ಕಿರುತೆರೆ ಪ್ರೇಕ್ಷಕರು ಎಂಜಾಯ್ ಮಾಡಿದ ರೀತಿ ನಿಜಕ್ಕೂ ಅಚ್ಚರಿಯಂಥಾದ್ದು. ಆ ವಲಯದಲ್ಲಿಯೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಕಾರಂತ್ ಚಲನಚಿತ್ರಗಳ ಮೂಲಕವೂ ಪ್ರೇಕ್ಷಕರಿಗೆ ಚಿರಪರಿಚಿತರೇ.

ಮೂಲತಃ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡೇ ರಂಗಭೂಮಿ ಸಾಹಚರ್ಯವನ್ನು ಪ್ರಧಾನವಾಗಿ ಪರಿಗಣಿಸಿದ್ದ ಕಾರಂತರು ಬ್ಯಾಂಕಿಂಗ್ ವಲಯದ ಶುಷ್ಕ ವಾತಾವರಣಕ್ಕೂ ನಾಟಕಗಳ ಗಂಧ ತೀಡುವಲ್ಲಿಯೂ ಪ್ರಧಾನ ಪಾತ್ರ ವಹಿಸಿದ್ದಾರೆ. ನಾನಾ ಬ್ಯಾಂಕ್ ಉದ್ಯೋಗಿಗಳಿಗಾಗಿ ತಾವೇ ನಾಟಕ ನಿರ್ದೇಶನ ಮಾಡಿ ಪ್ರದರ್ಶಿಸಿಒರುವ ರಾಜೇಂದ್ರ ಕಾರಂತ್ ಸಂಭಾವನೆಗ ಬಗೆಗೂ ತಲೆ ಕೆಡಿಸಿಕೊಳ್ಳದೆ ನಾಟಕದ ಗೀಳನ್ನು ಸರ್ವ ವ್ಯಾಪಿಯಾಗಿಸುವಲ್ಲಿಯೂ ಶ್ರಮಿಸುತ್ತಾ ಬಂದಿದ್ದಾರೆ.

ಹೀಗೆ ಮೂವತೈದು ವರ್ಷಗಳಿಂದ ರಂಗಭೂಮಿಯನ್ನು ಧ್ಯಾನದಂತೆ ಆವಾಹಿಸಿಕೊಂಡು ಬಂದಿರುವ ರಾಜೇಂದ್ರ ಕಾರಂತ್ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿಯೂ ಹೊರ ಹೊಮ್ಮಿದ್ದಾರೆ. ಈ ಮೂಲಕ ಒಂದು ಹೊಸಾ ಅಲೆಯನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯಿಂದ ಕಾರಂತ್ ನಿರ್ದೇಶನ ಮಾಡಿರುವ ನಂಜುಂಡಿ ಕಲ್ಯಾಣ ಇಂದು ರಾಜ್ಯಾಧ್ಯಂತ ತೆರೆ ಕಂಡಿದೆ.

Leave a Reply

Your email address will not be published. Required fields are marked *


CAPTCHA Image
Reload Image