One N Only Exclusive Cine Portal

ರೀಲ್ ನಂಜುಂಡಿಗೆ ರಿಯಲ್ ಕಲ್ಯಾಣದ ಖುಷಿ!

Related image
ರಂಗಭೂಮಿಯಲ್ಲಿ ನಟರಾಗಿ ಸಕ್ರಿಯರಾಗಿದ್ದುಕೊಂಡೇ ಕಿರುತೆರೆಯಲ್ಲಿಯೂ ಮಿಂಚುತ್ತಿರುವವರು ರಾಜೇಂದ್ರ ಕಾರಂತ್. ಅವರು ನಿರ್ದೆಶನ ಮಾಡಿರುವ ನಂಜುಂಡಿ ಕಲ್ಯಾಣ ಚಿತ್ರ ಈ ವಾರ ತೆರೆ ಕಾಣಲು ಸಜ್ಜಾಗಿದೆ. ಈಗ್ಗೆ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ಸೂಪರ್ ಹಿಟ್ಟಾಗಿದ್ದ ನಂಜುಂಡಿ ಕಲ್ಯಾಣ ಇದೀಗ ಮತ್ತೆ ಅಂಥಾದ್ದೇ ಒಂದು ಗೆಲುವಿನ ರೂವಾರಿಯಾಗುತ್ತದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ.
ಈ ಹಿಂದೆ ಮಡಮಕ್ಕಿ ಎಂಬ ಚಿತ್ರದ ಮೂಲಕ ಹೀರೋ ಆಗಿ ಹೊರ ಹೊಮ್ಮಿದ್ದ ತನುಷ್ ಈ ಚಿತ್ರದ ನಾಯಕ. ಅತ್ತ ತಾನು ತುಂಬಾ ಪ್ರೀತಿಸುವ ಹಠಮಾರಿ ಅಮ್ಮನ ಮನ ಒಲಿಸುತ್ತಲೇ ಇತ್ತ ತನ್ನ ಜೀವದಂಥಾ ಹುಡುಗಿಯನ್ನೂ ಉಳಿಸಿಕೊಳ್ಳಲು ಪರದಾಡುವ ಮಜವಾದ ಪಾತ್ರವೊಂದನ್ನು ತನುಷ್ ಈ ಚಿತ್ರದಲ್ಲಿ ನಿರ್ವಹಿಸಿದ್ದಾರಂತೆ.

ರಂಗಬೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದರು ನಿರ್ದೆಶನದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ರಾಜೆಂದ್ರ ಕಾರಂತ್ ಪಕ್ಕಾ ಕಾಮಿಡಿ ಶೈಲಿಯಲ್ಲಿ ಕುಟುಂಬವಿಡೀ ಕುತು ನೋಡುವಂಥಾ ಅಚ್ಚುಕಟಾದೊಂದು ಚಿತ್ರ ನಿರ್ದೇಶನ ಮಾಡಿದ ಖುಷಿಯಲ್ಲಿದ್ದಾರೆ. ಮಡಮಕ್ಕಿ ಎಂಬ ಮೊದಲ ಚಿತ್ರದಲ್ಲೇ ಗಮನಾರ್ಹ ನಟನೆ ದಾಖಲಿಸಿದ್ದ ತನುಷ್ ಕೂಡಾ ಭಿನ್ನವಾದೊಂದು ಪಾತ್ರಕ್ಕೆ ಜೀವ ತುಂಬಿರೋ ಭರವಸೆಯಿಂದಿದ್ದಾರೆ.
ಇನ್ನುಳಿದಂತೆ ನಂಜುಂಡಿ ಕಲ್ಯಾಣ ಎಂಬ ಚಿತ್ರದಲ್ಲಿ ನಟಿಸಿದ ಘಳಿಗೆಯಲ್ಲಿಯೇ ನಿಜವಾಗಿಯು ತನುಷ್ ಅವರಿಗೆ ಕಲ್ಯಾಣ ಬಾಗ್ಯ ಕೂಡಿ ಬಂದಿದೆ. ತಮ್ಮ ಬಣ್ಣದ ಬದುಕಿನ ದಿಕ್ಕುದೆಸೆ ಬದಲಿಸುವ ಹೋಪ್ ಇರುವ ಈ ಚಿತ್ರ ಬಿಡುಗಡೆಯ ಸಂದರ್ಭದಲ್ಲಿಯೇ ತನುಷ್ ರಿಯಲ್ ಆಗಿ ಮದುವೆಯಾಗುತ್ತಿದ್ದಾರೆ. ಇದೆ ಏಪ್ರಿಲ್ ೨೦ರಂದು ತನುಷ್ ಹೊಸ ಬಾಳಿಗೆ ಅಡಿಯಿರಿಸುತ್ತಿದ್ದಾರೆ.
ಈಗಾಗಲೆ ಭಾರೀ ಸದ್ದು ಮಾಡುತ್ತಿರೋ ಈ ಚಿತ್ರ ಎಂಭತ್ತರ ದಸಕದ ಭರಪೂರ ಗೆಲುವೊಂದನ್ನು ತನ್ನದಾಗಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಇವೆ!

ಮದುವೆ ಆಗಲು ಅಣಿಯಾದ ನಟ

ಇಂಚರಾ ವೃತ್ತಿಯಲ್ಲಿ ಟೀಚರ್

Image result for nanjundi kalyana new movie

Related image

Leave a Reply

Your email address will not be published. Required fields are marked *


CAPTCHA Image
Reload Image