One N Only Exclusive Cine Portal

ಕನ್ನಡದ ಮುಂಗಾರು ಮಳೆ ಹುಡುಗಿಯೀಗ ತೆಲುಗಿನ ಮೆಹಬೂಬ!

ಮುಂಗಾರು ಮಳೆ-2 ಚಿತ್ರದಲ್ಲಿನ ಮನಮೋಹಕ ಅಭಿನಯದಿಂದ ಗಮನ ಸೆಳೆದಿದ್ದ ನಟಿ ನೇಹಾ ಶೆಟ್ಟಿ. ನಟನೆ, ಗ್ಲಾಮರ್ ಮುಂತಾದವುಗಳ ಸಮ್ಮಿಲನದಂತಿದ್ದ ಈಕೆ ಕನ್ನಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾಳೆಂಬ ನಿರೀಕ್ಷೆ ಪ್ರೇಕ್ಷಕರಲ್ಲಿದ್ದದ್ದು ಸುಳ್ಳಲ್ಲ. ಆದರದು ಕನ್ನಡದ ಮಟ್ಟಿಗೆ ಸುಳ್ಳಾಗಿದೆ. ಯಾಕೆಂದರೆ, ಮುಂಗಾರು ಮಳೆ ಮತ್ತೆ ಹನಿದು ಎರಡನೇ ಮಳೆಗಾಲವೊಂದು ಎದುರು ನಿಂತಿದ್ದರೂ ನೇಹ ಶೆಟ್ಟಿಯ ಸುಳಿವಿಲ್ಲ!

ಹಾಗಾದರೆ ಈ ಹುಡುಗಿ ಎಲ್ಲಿ ಹೋದಳು ಅಂತ ಕನ್ನಡದ ಪ್ರೇಕ್ಷಕರು ಹುಡುಕುತ್ತಿರುವಾಗಲೇ ಆಕೆ ತೆಲುಗು ಭಾಷೆಯಲ್ಲಿ ಭಾರೀ ಸದ್ದು ಮಾಡಿದ್ದಾಳೆ. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ‘ಮೆಹಬೂಬಾ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾಳೆ. ಇದೀಗ ಬಿಡುಗಡೆಯಾಗಿರೋ ಈ ಚಿತ್ರದ ಟ್ರೈಲರಿನಲ್ಲಿ ಕನ್ನಡದ ಹುಡುಗಿ ನೇಹಾ ಮಿಂಚಿರುವ ಪರಿ ಕಂಡು ಕನ್ನಡಿಗರೆಲ್ಲ ಕಣ್ಣರಳಿಸುವಂತಾಗಿದೆ!

ಪೂರಿ ಜಗನ್ನಾಥ್ ನಿರ್ದೇಶನದ ಮೆಹಬೂಬಾ ಚಿತ್ರದಲ್ಲಿ ಅವರ ಪುತ್ರ ಆಕಾಶ್ ಪೂರಿ ನಾಯಕನಾಗಿ ನಟಿಸಿದ್ದಾನೆ. ಆತನಿಗೆ ಕನ್ನಡತಿ ನೇಹಾ ಶೆಟ್ಟಿ ನಾಯಕಿ. ಯುದ್ಧ ಕಣಕ್ಕಿಳಿದ ನಾಯಕ ಮತ್ತು ಅಮೋಘ ಪ್ರೇಮ ಕಥನದ ಸುಳಿವಿರುವ ಈ ಚಿತ್ರದ ಟ್ರೈಲರಿನಲ್ಲಿನ ನೇಹಾಳ ಅಭಿನಯ ದೇಶಾದಂತ ಗಮನ ಸೆಳೆದಿದೆ. ಪೂರಿ ಜಗನ್ನಾಥ್ ಈ ಚಿತ್ರದ ಮೂಲಕ ಮತ್ತೊಂದು ಪುಷ್ಕಳ ಗೆಲುವು ಕಾಣೋದರ ಜೊತೆಗೇ ನೇಹಾ ಶೆಟ್ಟಿ ಕೂಡಾ ತೆಲುಗಿನಲ್ಲಿ ಪ್ರಮುಖ ನಾಯಕಿಯಾಗಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಹೀಗೆ ಪರಭಾಷೆಯಲ್ಲಿ ಭರ್ಜರಿ ಸೌಂಡು ಮಾಡಿರೋ ನೇಹಾಳಿಗೆ ಅದ್ಯಾಕೆ ಕನ್ನಡದಲ್ಲಿ ಅವಕಾಶ ಸಿಕ್ಕಿಲ್ಲವೋ ಗೊತ್ತಿಲ್ಲ. ಸಿನಿಮಾವೊಂದು ಶುರುವಾದಾಕ್ಷಣ ಪರಭಾಷಾ ನಟಿಯರತ್ತ ಮುಖ ಮಾಡೋದನ್ನೇ ಕನ್ನಡದಲ್ಲಿ ಕೆಲವರು ಪ್ರತಿಷ್ಠೆ ಅಂದುಕೊಂಡಂತಿದೆ. ಆದರೆ ಅಪ್ಪಿತಪ್ಪಿಯೂ ನೇಹಾಳಂಥ ಈ ನೆಲದ ನಟಿಯರನ್ನು ಅದೇಕೋ ಅಸಡ್ಡೆ ಮಾಡಲಾಗುತ್ತದೆ. ಅಂಥಾದ್ದೊಂದು ತಾತ್ಸಾರದಿಂದ ಕಂಗೆಟ್ಟಿದ್ದ ನೇಹಾ ತೆಲುಗಿನತ್ತ ವಲಸೆ ಹೋಗಿದ್ದಾಳೆ. ಮೊದಲ ಚಿತ್ರದಲ್ಲೇ ಬಾರೀ ಸದ್ದು ಮಾಡಿದ್ದಾಳೆ. ಆಕೆ ಅನುಷ್ಕಾ ಶೆಟ್ಟಿಯಂತೆ ಅಲ್ಲೇ ನೆಲೆ ನಿಂತರೂ ಅಚ್ಚರಿಯೇನಿಲ್ಲ!

 

1 thought on “ಕನ್ನಡದ ಮುಂಗಾರು ಮಳೆ ಹುಡುಗಿಯೀಗ ತೆಲುಗಿನ ಮೆಹಬೂಬ!

Leave a Reply

Your email address will not be published. Required fields are marked *


CAPTCHA Image
Reload Image