One N Only Exclusive Cine Portal

ಓ ಪ್ರೇಮವೇ ಟೀಮಿಗೆ ಕಾಟ ಕೊಟ್ಟಳಾ ನಿಕ್ಕಿ ಗಲ್ರಾಣಿ?

ನಟಿ ಸಂಜನಾ ಗಲ್ರಾಣಿ ಅತ್ತ ಆರಕ್ಕೇರದೆ ಇತ್ತ ಮೂರಕ್ಕೂ ಇಳಿಯದೆ ನಾಪತ್ತೆಯಾದಂಥಾ ಸ್ಥಿತಿಯಲ್ಲಿದ್ದಾಳೆ. ಆದರೆ ಅದೇ ಸಮಯದಲ್ಲಿ ಆಕೆಯ ತಂಗಿ ನಿಕ್ಕಿ ಗಲ್ರಾಣಿ ಮಾತ್ರ ಕನ್ನಡ, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ಕೈತುಂಬ ಅವಕಾಶಗಳನ್ನಿಟ್ಟುಕೊಂಡು ಬ್ಯುಸಿಯಾಗಿದ್ದಾಳೆ.

ನಿಕ್ಕಿ ವಾರಗಳ ಹಿಂದೆ ಬಿಡುಗಡೆಯಾಗಿದ್ದ ಮನೋಜ್ ನಿರ್ದೇಶನದ ಓ ಪ್ರೇಮವೇ ಚಿತ್ರದಲ್ಲಿ ನಟಿಸಿದ್ದಳಲ್ಲಾ? ಸದರಿ ಚಿತ್ರದಲ್ಲಿ ನಿಕ್ಕಿ ಗಮನಾರ್ಹವಾಗಿ ನಟಿಸಿದ್ದಳು. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರಳಾಗಿದ್ದಳು. ಆದರೆ ಆ ಚಿತ್ರ ತಂಡ ಮಾತ್ರ ನಿಕ್ಕಿ ಮೇಲೆ ಸೀರಿಯಸ್ಸಾಗಿಯೇ ಮುನಿಸಿಕೊಂಡಿದೆ. ನಿಕ್ಕಿ ಸಿನಿಮಾದ ಪ್ರೊಮೋಷನ್‌ಗೆ ಬಾರದೆ ಕೈಕೊಟ್ಟಿದ್ದಾಳೆಂಬುದು ಚಿತ್ರತಂಡದ ಆರೋಪ. ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ದೂರು ದಾಖಲಾಗಿದೆ.

ನಿಕ್ಕಿ ಗಲ್ರಾಣಿ ಮೊದಲೇ ಹೇಳಿದಂತೆ ತಮಿಳಿನಲ್ಲಿ ಭಾರೀ ಬ್ಯುಸಿಯಾಗಿದ್ದಾಳೆ. ಅದರ ನಡುವೆಯೇ ಯಾವ ತಕರಾರೂ ಇಲ್ಲದಂತೆ ಓ ಪ್ರೇಮವೇ ಚಿತ್ರದ ಶೂಟಿಂಗ್ ಮುಗಿಸಿಕೊಟ್ಟಿದ್ದಳು. ಆದರೆ ಚಿತ್ರೀಕರಣ ಮುಗಿಸಿ ಇನ್ನೇನು ಪ್ರಮೋಷನ್ ಶುರುವಾಗ ಬೇಕೆಂಬಷ್ಟರಲ್ಲಿ ನಿಕ್ಕಿ ತಮಿಳುನಾಡು ತಲುಪಿಕೊಂಡಿದ್ದಳು. ಈ ನಡುವೆ ಚಿತ್ರ ಬಿಡುಗಡೆಯಾಗಿ ಆ ನಂತರದ ಪ್ರಮೋಷನ್‌ಗಾದರೂ ನಿಕ್ಕಿ ಬಂದಾಳೆಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಬಗ್ಗೆ ಕರೆ ಮಾಡಿದರೆ ತಮಿಳು ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿರೋ ಉತ್ತರ ನಿಕ್ಕಿ ಕಡೆಯಿಂದ ಬಂದಿದೆಯಂತೆ.

ಈ ಬಗ್ಗೆ ನಿಕ್ಕಿ ವಿರುದ್ಧ ದೂರು ಬರುತ್ತಲೇ ಸಾ ರಾ ಗೋವಿಂದು ಮತ್ತೆ ಕನ್ನಡ ಚಿತ್ರದ ಪರವಾಗಿ ಹೋರಾಟ ಆರಂಭಿಸಿದ್ದಾರೆ. ಅವರ ಆವಾಜಿಗೆ ಹೆದರಿ ನಿಕ್ಕಿ ತಮಿಳು ಚಿತ್ರದಿಂದ ಬಿಡುವು ಮಾಡಿಕೊಂಡು ಬರಬಹುದಾ ಎಂಬುದಷ್ಟೇ ಸದ್ಯದ ಕುತೂಹಲ!

Leave a Reply

Your email address will not be published. Required fields are marked *


CAPTCHA Image
Reload Image