One N Only Exclusive Cine Portal

ನಿತ್ಯಾ ಮೆನನ್ ಈಗ ಸಲಿಂಗಿಯಂತೆ!


ಮಲೆಯಾಳಂ ಮೂಲವಾದರೂ ಕನ್ನಡದ ಹುಡುಗಿ ನಿತ್ಯಾ ಮೆನನ್. ಆಕೆ ಕನ್ನಡದಲ್ಲಿ ನಟಿಸಿರೋದು ಕೆಲವೇ ಕೆಲ ಚಿತ್ರಗಳಲ್ಲಾದರೂ ಆ ಪಾತ್ರಗಳನ್ನು ಕನ್ನಡದ ಪ್ರೇಕ್ಷಕರು ಮರೆಯುವಂತಿಲ್ಲ. ಸವಾಲಿನ ಪಾತ್ರಗಳನ್ನೇ ಸದಾ ಆರಿಸಿಕೊಳ್ಳುವ ನಿತ್ಯಾ ಪ್ರತಿಭಾವಂತ ನಟಿ. ಯಾವ ಥರದ ಪಾತ್ರಗಳಿಗಾದರೂ ಹೊಂದಿಕೊಂಡು ನಟಿಸೋ ತಾಕತ್ತಿರೋ ಈಕೆ ಭಾರತೀಯ ಚಿತ್ರರಂಗಕ್ಕೇ ಹೊಸತಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ!


ಹಾಗಾದರೆ ನಿತ್ಯಾ ನಟಿಸಲಿರೋ ಅಂಥಾ ಡಿಫರೆಂಟಾದ ಪಾತ್ರ ಯಾವುದು? ಅದು ಕನ್ನಡ ಚಿತ್ರವಾ ಎಂಬ ಕುತೂಹಲ ಸಹಜವೇ. ಈ ಹಿನ್ನೆಲೆಯಲ್ಲಿ ಹುಡುಕಾಡಿದರೆ ಸತ್ಯಕ್ಕೆ ಹತ್ತಿರವಾದ ಒಂದಷ್ಟು ಮಾಹಿತಿಗಳು ಹೊರಬೀಳುತ್ತವೆ. ಈಕೆ ಈ ಪಾಟಿ ಸದ್ದು ಮಾಡಲು ಕಾರಣವಾಗಿರೋದು ಇನ್ನಷ್ಟೇ ಘೋಷಣೆಯಾಗ ಬೇಕಿರುವ ತೆಲುಗು ಚಿತ್ರ. ಹುಡುಗೀರ ಸಲಿಂಗ ಪ್ರೇಮದ ಕಥಾನಕ ಹೊಂದಿರೋ ಈ ಚಿತ್ರದಲ್ಲಿ ನಿತ್ಯಾ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾಳಂತೆ!
ಇಂಥಾದ್ದೊಂದು ಸುದ್ದಿ ವಿಶೇಷ ಅನ್ನಿಸಲು ಖಂಡಿತಾ ಕಾರಣವಿದೆ. ಈ ಸಲಿಂಗ ಕಾಮವೆಂಬುದು ಮನುಷ್ಯನ ಉಗಮದಷ್ಟೇ ಪುರಾತನ ಹಿಸ್ಟರಿ ಹೊಂದಿದೆ. ಭಾರತದಲ್ಲಿಯೂ ಇದು ಮಾಮೂಲು. ಆದರೆ ಇಂಥಾದ್ದೊಂದು ಸಲಿಂಗ ಪ್ರೇಮದ ಬಗ್ಗೆ ಭಹಿರಂಗವಾಗಿ ಮಾತಾಡಲು ಶುರುವಾದದ್ದು ಮಾತ್ರ ಭಾರತದಲ್ಲಿ ತೀರಾ ಇತ್ತೀಚಿನ ದಿನಗಳಲ್ಲಿ. ಆದರೆ ಮಡಿವಂತರು ಈ ಸುದ್ದಿ ಕೇಳಿಯೇ ಬೆಚ್ಚಿ ಬೀಳುತ್ತಿದ್ದಾರೆ. ಹಾಗಿರೋವಾಗ ಸಲಿಂಗ ಪ್ರೇಮವನ್ನು ಇಲ್ಲಿ ಇನ್ನೂ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆದಿಲ್ಲ.
ಇದೀಗ ಅಂಥಾದ್ದೊಂದು ಪಾತ್ರದಲ್ಲಿ ನಿತ್ಯಾ ನಟಿಸುತ್ತಿರೋದೇ ಒಂದಷ್ಟು ವಿರೋಧಾಭಾಸಕ್ಕೂ ಕಾರಣವಾಗಬಹುದು. ಆದರೂ ಸಹ ನಿತ್ಯಾ ಹೊಸಾ ಥರಹದ ಪಾತ್ರವಾದ್ದರಿಂದ ವಿವಾದಗಳಿಗೆ ತಲೆ ಕೆಡಿಸಿಕೊಳ್ಳದೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಳಂತೆ.
ಅಂದಹಾಗೆ ಈ ಚಿತ್ರದಲ್ಲಿ ನಿತ್ಯಾ ಜೊತೆ ಕಾಜಲ್ ಅಗರವಾವಾಲ್, ರೆಜಿನಾ ಮುಂತಾದ ನಟಿಯರೂ ರೊಮ್ಯಾನ್ಸ್ ಮಾಡಲಿದ್ದಾರಂತೆ. ಗಂಡು ಮತ್ತು ಹೆಣ್ಣಿನ ನಡುವೆ ಎಂತೆಂಥಾ ಪ್ರೇಮ ದೃಶ್ಯಾವಳಿಗಳಿರುತ್ತವೋ ಅಂಥವೆಲ್ಲವೂ ಈ ಚಿತ್ರದಲ್ಲೂ ಇರಲಿವೆಯಂತೆ!

Leave a Reply

Your email address will not be published. Required fields are marked *


CAPTCHA Image
Reload Image