One N Only Exclusive Cine Portal

ರೂಪಾ ರವೀಂದ್ರನ್ ಕಲಾಯಾನ!

ಭಾರತದ ಶಾಸ್ತ್ರೀಯ ನೃತ್ಯ ಪ್ರಾಕಾರಗಳನ್ನುಇಂದಿನ ಪೀಳಿಗೆಗೂ ಮುಟ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ‘ಅರ್ಥ- ಎಲಿಮೆಂಟ್ಸ್ ಆಫ್ ಆರ್ಟ್ ಆಂಡ್ ಹೆರಿಟೇಜ್ ಅಕಾಡೆಮಿ. ಈ ಕಲೆಗೇ ಸೀಮಿತವಾದ ಒಂದು ಕಾಲೇಜನ್ನೂ ಕೂಡಾ ಬೆಂಗಳೂರಿನಲ್ಲಿ ಹೊಂದಿರೋ ಈ ಅಕಾಡೆಮಿ ‘ತ್ರಿಕಂ-2018 ಎಂಬ ನಾಟ್ಯೋತ್ಸವ ನಡೆಸಲು ಅಣಿಯಾಗಿದೆ.

ಅರ್ಥ ಅಕಾಡೆಮಿಯ ಸಾರಥ್ಯ ವಹಿಸಿಕೊಂಡು ಮುನ್ನಡೆಸುತ್ತಿರುವವರು ಖ್ಯಾತ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ನಟಿ ಮತ್ತು ಮಾಡಲ್ ಆಗಿರುವ ರೂಪಾ ರವೀಂದ್ರನ್. ನೃತ್ಯ, ನಾಟಕ ಮತ್ತು ಸಂಗೀತ ಚಟುವಟಿಕೆಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುತ್ತಲೇ ಯುವ ಸಮುದಾಯವನ್ನೂ ಕೂಡಾ ಅದರತ್ತ ಪ್ರೇರೇಪಿಸುತ್ತಿರುವ ರೂಪಾ ಅವರು ಅಂಥಾದ್ದೇ ಮಹತ್ತರವಾದ ಕನಸಿಟ್ಟುಕೊಂಡು ‘ತ್ರಿಕಂ-೨೦೧೮ ಎಂಬ ನಾಟ್ಯೋತ್ಸವ ಆಯೋಜಿಸಿದ್ದಾರೆ.

ಇದೇ ಸಂದರ್ಭದಲ್ಲಿ ರೂಪಾ ಅವರೇ ರೂಪಿಸಿ ನಟಿಸಿರುವ ‘ನೃತ್ಯಂ ಶಿವಂ ಎಂಬ ವಿಶಿಷ್ಟವಾದ ಮ್ಯೂಸಿಕ್ ಆಲ್ಬಂ ಕೂಡಾ ಬಿಡುಗಡೆಯಾಗಲಿದೆ. ಈ ಆಲ್ಬಂ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆ ಮತ್ತು ಗುರುಪರಂಪರೆಯನ್ನು ಅನಾವರಣಗೊಳಿಸುವಂತೆ ಮೂಡಿ ಬಂದಿದೆಯಂತೆ. ಅಂದಹಾಗೆ ರೂಪಾ ಅವರು ಈ ಅಕಾಡೆಮಿಯ ಮೂಲಕ ನಾನಾ ಸಾರ್ಥಕವಾದ ಕೆಲಸ ಕಾರ್ಯಗಳ ಮೂಲಕ ಪಾರಂಪರಿಕ ನೃತ್ಯ ಕಲೆಗಳನ್ನು ಬಡ ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರು, ಆದಿವಾಸಿ ಮಕ್ಕಳು, ದೈಹಿಕ ನ್ಯೂನ್ಯತೆಗಳುಳ್ಳವರಿಗೂ ತರಬೇತಿ ಕೊಡುವ ಮೂಲಕ ಆತ್ಮಸ್ಥೈರ್ಯ ಹುಟ್ಟಿಸಲು ಶ್ರಮಿಸುತ್ತಿದ್ದಾರೆ.

ರೂಪಾ ಅವರು ಆಯೋಜಿಸಿರುವ ‘ತ್ರಿಕಂ-2018 ಎಂಬ ನಾಟ್ಯೋತ್ಸವ ಇದೇ ಶನಿವಾರ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಶ್ರೀ ಶಾರದಾ ಮಠದ ಸಭಾಂಗಣದಲ್ಲಿ ನೆರವೇರಲಿದೆ. ಸಂಜೆ ೫.೩೦ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಸಮಾರಂಭದಲ್ಲಿ ಶ್ರೀ ಶಾರದಾ ಮಠದ ಮಾತೆ, ಕಲಾಶ್ರೀ ಗುರು ಡಾ ಸುಪರ್ಣ ವೆಂಕಟೇಶ್ ಮೊದಲಾದವರು ಉಪಸ್ಥತರಿರಲಿದ್ದಾರೆ.

ಕಲೆಯ ಸುತ್ತಾ ಹಲವಾರು ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯರಾಗಿರುವ ರೂಪಾ ರವೀಂದ್ರನ್ ಅವರು ಭಾರತದ ಬಹು ಮುಖ್ಯ ಡ್ಯಾನ್ಸರ್, ಕಲಾವಿದೆ, ಮಾಡೆಲ್. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿರುವ ರೂಪಾ ಕಥಕ್ ಮತ್ತು ಕೋರಿಯೋಗ್ರಫಿಯಲ್ಲಿಯೂ ಪದವಿ ಪಡೆದಿರುವವರು. ಇದಲ್ಲದೇ ಕೆಎಸ್ ಡಿಎಲ್ , ಮೈಸೂರು ಸೋಪ್ ಮತ್ತು ಖಾದಿ ಗ್ರಾಮೋದ್ಯೋಗದ ಬ್ರ್ಯಾಂಡ್ ಅಂಬಾಸಡರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದಲ್ಲದೇ ಕನ್ನಡದಲ್ಲಿ ಬಂದಿದ್ದ ಬರಗೂರು ರಾಮಚಂದ್ರಪ್ಪ ನಿದೇಶನದ ಮೂಕನಾಯಕ ಚಿತ್ರವನ್ನು ನಿರ್ಮಾಣ ಮಾಡಿದ್ದ ರೂಪಾ, ಈ ಕಲೆಯ ಆಸಕ್ತಿಯಿಂದಲೇ ದೇಶ ವಿದೇಶಗಳನ್ನು ಸುತ್ತಿ ಅಧ್ಯಯನ ನಡೆಸಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image