One N Only Exclusive Cine Portal

ಜ್ಯೂನಿಯರ್ ಎನ್‌ಟಿಆರ್ ಜೋಡಿಯಾಗ್ತಾಳಾ ಶ್ರದ್ಧಾ?


ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದುಕೊಂಡು ಒಂದೆರಡು ಸೋಲಿನ ನಂತರ ಮೂಲೆಗುಂಪಾದಂತಿರುವಾಕೆ ಮಿಲ್ಕಿಬ್ಯೂಟಿ ತಮನ್ನಾ. ನಟನೆ, ರೂಪ ಎಲ್ಲಾ ಇದ್ದಾ ಈಕೆಗೆ ಅದ್ಯಾವ ಗ್ರಹಚಾರ ಕೈಕೊಟ್ಟಿತೋ ಅಂತ ಅಭಿಮಾನಿಗಳು ಚಿಂತಾಕ್ರಾಂತರಾಗಿರುವಾಗಲೇ ತೆಲುಗಿನಲ್ಲೀಗ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಅಬ್ಬರ ಶುರುವಾಗಿದೆ!


ಶ್ರದ್ಧಾ ಕಪೂರ್ ಈಗಾಗಲೇ ಬಾಲಿವುಡ್‌ನ ನಂಬರ್ ಒನ್ ರೇಸಿನಲ್ಲಿ ಸ್ಥಾನ ಕಂಡುಕೊಂಡಿರೋ ನಟಿ. ಇದೀಗ ಎಲ್ಲಾ ಭಾಷೆಗಳಲ್ಲಿಯೂ ಆಕೆ ಬಹು ಬೇಡಿಕೆ ಹೊಂದಿದ್ದಾಳೆ. ಶ್ರದ್ಧಾ ಬಾಹುಬಲಿ ನಂತರ ಪ್ರಬಾಸ್ ನಾಯಕನಾಗಿರೋ ಹೊಸಾ ಚಿತ್ರ ಸಾಹೂ ನಾಯಕಿಯಾಗಿದ್ದಾಳೆ. ಈ ಚಿತ್ರ ಅದು ಹೇಗೆ ಮೂಡಿ ಬರಲಿದೆಯೋ ಗೊತ್ತಿಲ್ಲ. ಆದರೆ ಬಾಹುಬಲಿ ಎಫೆಕ್ಟಿನಿಂದಾಗಿ ಸದರಿ ಚಿತ್ರದ ಬಗೆಗೊಂದು ನಿರೀಕ್ಷೆ ಇರೋದು ಖಂಡಿತಾ ಸುಳ್ಳಲ್ಲ.


ಬಾಹುಬಲಿ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಟಾರ್ ಆಗಿರೋ ಪ್ರಭಾಸ್ ಸಾಹೂ ಚಿತ್ರದಲ್ಲಿ ನಾಯಕಿಯಾಗಲು ಬಾಲಿವುಡ್ ಸೇರಿದಂತೆ ಬಹು ಭಾಷೆಗಳ ನಟಿಯರ ಮಧ್ಯೆ ಪೈಪೋಟಿ ಶುರುವಾಗಿತ್ತು. ಅನುಷ್ಕಾ ಶೆಟ್ಟಿಯೇ ಅತಿ ತೂಕದ ಕಾರಣದಿಂದಾಗಿ ಈ ಚಿತ್ರದ ನಾಯಕಿಯಾಗೋ ಅವಕಾಶವನ್ನು ಕಳೆದುಕೊಂಡಿದ್ದಳು. ಆ ಸ್ಥಾನವನ್ನು ಬಾಲಿವುಡ್ಡಿಂದ ಬಳುಕುತ್ತಾ ಬಂದು ಆಕ್ರಮಿಸಿಕೊಂಡಿದ್ದವಳು ಶ್ರದ್ಧಾ.


ಆದರೆ ಈ ಚಿತ್ರ ಇನ್ನೂ ತೆರೆ ಕಾಣುವ ಹಂತದಲ್ಲಿರುವಾಗಲೇ ಶ್ರದ್ಧಾ ಊನಿಯರ್ ಎನ್‌ಟಿಆರ್ ನಾಯಕನಾಗಿರೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗೋ ಮೂಲಕ ಅಚ್ಚರಿ ಹುಟ್ಟಿಸಿದ್ದಾಳೆ. ಸದ್ಯ ಎನ್‌ಟಿಆರ್ ರಾಜಮೌಳಿ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತರ ಶುರುವಾಗಲಿರೋ ಚಿತ್ರದಲ್ಲಿ ಶ್ರದ್ಧಾ ನಾಯಕಿ ಎಂಬ ವಿಚಾರ ಇದೀಗಲೇ ಪಕ್ಕಾ ಆಗಿದೆ.
ಅಂತೂ ಸಾಲು ಸಾಲಾಗಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಶ್ರದ್ಧಾ ಮಿಲ್ಕಿ ಬ್ಯೂಟಿ ತಮನ್ನಾಳನ್ನು ಮೂಲೆಗೆ ಸರಿಸಿದ್ದಾಳೆಂಬ ಸಿಟ್ಟು ತಮನ್ನಾ ಅಭಿಮಾನಿಗಳಲ್ಲಿದೆ!

Leave a Reply

Your email address will not be published. Required fields are marked *


CAPTCHA Image
Reload Image