ರಾಜಕುಮಾರ ಚಿತ್ರದಲ್ಲಿ ಪವರ್ ಸ್ಟಾರ್‌ಗೆ ನಾಯಕಿಯಾಗಿ ಕನ್ನಡಕ್ಕೆ ಬಂದವರು ಪ್ರಿಯಾ ಆನಂದ್. ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರದಲ್ಲವರು ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಪ್ರಶಾಂತ್ ಮತ್ತು ಗಣೇಶ್ ಕಾಂಬಿನೇಷನ್ನಿನ ಈ ಚಿತ್ರ ಆರಂಭದ ದಿನದಿಂದಲೂ ಥ್ರಿಲ್ಲಿಂಗ್ ಆಗಿತ್ತು ಅಂದಿರೋ ಪ್ರಿಯಾ, ಗಣೇಶ್ ತನಗೆ ಹಿಡಿಸಿದ ಹುಚ್ಚೊಂದರ ಸ್ವಾರಸ್ಯಕರ ಸಂಗತಿಯನ್ನೂ ಹೇಳಿಕೊಂಡಿದ್ದಾರೆ!

ಆರೆಂಜ್ ದೊಡ್ಡ ಫ್ಯಾಮಿಲಿಯೊಂದರ ಸುತ್ತಾ ಸುತ್ತುವ ಚೆಂದದ ಕಥೆ ಹೊಂದಿರೋ ಚಿತ್ರ. ಚಿತ್ರೀಕರಣದ ಸಂದರ್ಭದಲ್ಲಿಯೂ ಕೂಡಾ ಕಲಾವಿದರು, ತಂತ್ರಜ್ಞರ ನಡುವೆ ಕೌಟುಂಬಿಕ ಬಂಧ ಕೂಡಾ ಆವರಿಸಿಕೊಂಡಿತ್ತಂತೆ. ಪ್ರಿಯಾ ಪಾಲಿಗೂ ಇದು ವಿಭಿನ್ನ ಅನುಭವ. ಸಿನಿಮಾ ಅಂದ ಮೇಲೆ ಇಲ್ಲಿನ ಮಾತುಕತೆ, ಹರಟೆ ಮುಂತಾದವೆಲ್ಲವೂ ಸಿನಿಮಾ ಸುತ್ತಲೇ ಗಿರಕಿ ಹೊಡೆಯೋದು ಮಾಮೂಲು. ಆದರೆ ಗಣೇಶ್ ಮಾತ್ರ ಪ್ರಿಯಾ ಅವರ ಬಳಿ ಒಳ್ಳೊಳ್ಳೆ ಸಾಹಿತ್ಯದ ಪುಸ್ತಕಗಳ ಬಗ್ಗೆ ಚರ್ಚಿಸಿದ್ದರಂತೆ. ಓದಲೇ ಬೇಕಾದ ಒಂದಷ್ಟು ಪುಸ್ತಕಗಳ ಬಗ್ಗೆಯೂ ತಿಳಿಸಿದ್ದರಂತೆ. ಇದರಿಂದಾಗಿ ತನಗೂ ಈಗ ಓದೋ ಹುಚ್ಚು ಅಂಟಿಕೊಂಡಿದೆ ಅಂತ ಪ್ರಿಯಾ ಹೇಳಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಒಳ್ಳೆ ಓದುಗ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಈಗಾಗಲೇ ಅನೇಕ ಸಾಹಿತ್ಯ ಕೃತಿಗಳನ್ನು ಓದಿಕೊಂಡಿರೋ ಅವರು ಇತರರನ್ನೂ ಓದಲು ಪ್ರೇರೇಪಿಸುತ್ತಾರೆ.

#

LEAVE A REPLY

Please enter your comment!
Please enter your name here

3 × five =