One N Only Exclusive Cine Portal

ಪಡ್ಡೆಹುಲಿಗೆ ಭಾನುವಾರ ಮುಹೂರ್ತ

ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರಕ್ಕೆ ಇದೇ ಹನ್ನೊಂದನೇ ತಾರೀಕಿನಂದು ಮುಹೂರ್ತ ನಡೆಯಲಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಟನೆಯ ಈ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆ ಹಂಚುವುದರಲ್ಲಿ ಸದ್ಯ ಚಿತ್ರ ತಂಡ ಬ್ಯುಸಿಯಾಗಿದೆ.

ಗುರು ದೇಶಪಾಂಡೆ ಹಾಗೂ ಶ್ರೇಯಸ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಪಡ್ಡೆಹುಲಿ ಚಿತ್ರದ ಮುಹೂರ್ತ ಸಮಾರಂಭದ ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ಇದಲ್ಲದೇ ಕನ್ನಡ ಚಿತ್ರರಂಗದ ಗಣ್ಯರನ್ನೂ ಸಹ ಗುರುದೇಶಪಾಂಡೆ ಮತ್ತು ಶ್ರೇಯಸ್ ಖುದ್ದಾಗಿ ಭೇಟಿ ಮಾಡಿ ಮುಹೂರ್ತ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಶಿವರಾಜ್‌ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಮುಂತಾದ ನಟರನ್ನು ಮುಹೂರ್ತ ಸಮಾರಂಭಕ್ಕೆ ಈಗಾಗಲೇ ಆಹ್ವಾನಿಸಲಾಗಿದೆ.

ಪಡ್ಡೆ ಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತಲ್ಲಾ? ಅದಕ್ಕೆ ಅಮೋಘವಾದ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ರೀತಿಯಲ್ಲಿ ನೋಡ ಹೋದರೆ ಅಚ್ಚರಿದಾಯಕವಾದ ಸೌಂಡ್ ಮಾಡುವಲ್ಲಿ ಪಡ್ಡೆಹುಲಿ ಈಗಾಗಲೇ ಗೆದ್ದಿದೆ.

ಅಂದಹಾಗೆ ಇದೇ ಭಾನುವಾರ ಬುಲ್‌ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಕಿಚ್ಚಾ ಸುದೀಪ್ ಕ್ಲಾಪ್ ಮಾಡಲಿದ್ದಾರೆ. ಭಾರತಿ ವಿಷ್ಣುವರ್ಧನ್ ಮತ್ತು ಕೀರ್ತಿ ವಿಷ್ಣವರ್ಧನ್ ಜ್ಯೋತಿ ಬೆಳಗಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಪಡ್ಡೆ ಹುಲಿ ಚಿತ್ರದ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.ಪಡ್ಡೆಹುಲಿಗೆ ಭಾನುವಾರ ಮುಹೂರ್ತ

ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರಕ್ಕೆ ಇದೇ ಹನ್ನೊಂದನೇ ತಾರೀಕಿನಂದು ಮುಹೂರ್ತ ನಡೆಯಲಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಟನೆಯ ಈ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆ ಹಂಚುವುದರಲ್ಲಿ ಸದ್ಯ ಚಿತ್ರ ತಂಡ ಬ್ಯುಸಿಯಾಗಿದೆ.
ಗುರು ದೇಶಪಾಂಡೆ ಹಾಗೂ ಶ್ರೇಯಸ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಪಡ್ಡೆಹುಲಿ ಚಿತ್ರದ ಮುಹೂರ್ತ ಸಮಾರಂಭದ ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಗಣ್ಯರನ್ನೂ ಸಹ ಗುರುದೇಶಪಾಂಡೆ ಮತ್ತು ಶ್ರೇಯಸ್ ಖುದ್ದಾಗಿ ಭೇಟಿ ಮಾಡಿ ಮುಹೂರ್ತ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಶಿವರಾಜ್‌ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಮುಂತಾದ ನಟರನ್ನು ಮುಹೂರ್ತ ಸಮಾರಂಭಕ್ಕೆ ಈಗಾಗಲೇ ಆಹ್ವಾನಿಸಲಾಗಿದೆ.

ಪಡ್ಡೆ ಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತಲ್ಲಾ? ಅದಕ್ಕೆ ಅಮೋಘವಾದ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ರೀತಿಯಲ್ಲಿ ನೋಡ ಹೋದರೆ ಅಚ್ಚರಿದಾಯಕವಾದ ಸೌಂಡ್ ಮಾಡುವಲ್ಲಿ ಪಡ್ಡೆಹುಲಿ ಈಗಾಗಲೇ ಗೆದ್ದಿದೆ.

ಅಂದಹಾಗೆ ಇದೇ ಭಾನುವಾರ ಬುಲ್‌ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಕಿಚ್ಚಾ ಸುದೀಪ್ ಕ್ಲಾಪ್ ಮಾಡಲಿದ್ದಾರೆ. ಭಾರತಿ ವಿಷ್ಣುವರ್ಧನ್ ಮತ್ತು ಕೀರ್ತಿ ವಿಷ್ಣವರ್ಧನ್ ಜ್ಯೋತಿ ಬೆಳಗಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಪಡ್ಡೆ ಹುಲಿ ಚಿತ್ರದ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Leave a Reply

Your email address will not be published. Required fields are marked *

CAPTCHA Image
Reload Image