One N Only Exclusive Cine Portal

ಪಡ್ಡೆಹುಲಿ ಬರ್ತಡೇಗೆ ಪ್ರೋಮೋ ಗಿಫ್ಟ್!

Image result for padde huli
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟೊಂದನ್ನು ನೀಡಲು ಪಡ್ಡೆಹುಲಿ ಚಿತ್ರ ತಂಡ ತಯಾರಾಗಿದೆ. ಇಡೀ ಚಿತ್ರದ ಆಂತರ್ಯದ ಸುಳಿವು ತೆರೆದಿಡುವ ವಿಶೇಷವಾದ ಪ್ರೋಮೋ ಸಾಂಗ್ ಒಂದನ್ನು ತಯಾರು ಮಾಡಿಕೊಂಡಿರುವ ಚಿತ್ರತಡ ಅದನ್ನು ಶ್ರೇಯಸ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ನಾಳೆ ಶ್ರೇಯಸ್ ಅವರ ಹುಟ್ಟು ಹಬ್ಬವಿದೆ. ಅದನ್ನುಪಡ್ಡೆಹುಲಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಆಚರಿಸಲು ನಿರ್ದೇಶಕ ಗುರುದೇಶಪಾಂಡೆ ಮತ್ತು ತಂಡ ಸಜ್ಜಾಗಿದೆ. ಅಂದಹಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಈ ಪ್ರೋಮೋ ಸಾಂಗ್ ಅನ್ನು ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಹಾಡಿದ್ದಾರೆ. ಈ ಹಾಡಿಗೆ ಬಹದ್ದೂರು ಚೇತನ್ ಸಾಹಿತ್ಯ ಒದಗಿಸಿದ್ದಾರೆ.
ಎಂ. ರಮೇಶ್ ರೆಡ್ಡಿ ನಿರ್ಮಾಣದ ಪಡ್ಡೆಹುಲಿಗೀಗ ಸುಸೂತ್ರವಾಗಿ ಚಿತ್ರೀಕರಣ ನಡೆಯುತ್ತಿದೆ. ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ಕೆಲಸ ಕಾರ್ಯಗಳ ಮೂಲಕವೇ ಜನರ ಗಮನವನ್ನು ಪಡ್ಡೆಹುಲಿಯತ್ತ ಕೇಂದ್ರೀಕರಿಸಲು ಶ್ರಮ ವಹಿಸುತ್ತಿದ್ದಾರೆ. ಈಗಾಗಲೇ ಡಿಫರೆಂಟ್ ಶೈಲಿಯ ಸಂಗೀತ ಸಂಯೋಜನೆಯಿಂದ ಸದ್ದು ಮಾಡಿರುವ ಅಜನೀಶ್ ಪಡ್ಡೆಹುಲಿಯ ಮೂಲಕ ಬೇರೆಯದ್ದೇ ಸಂಗೀತದ ರಂಗೆಬ್ಬಿಸಲು ಅಣಿಯಾಗಿದ್ದಾರೆ. ಅದರ ಅಸಲೀ ಮುದ ಏನೆಂಬುದು ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೋಮೋ ಸಾಂಗ್ ಮೂಲಕ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ಗಮನೀಯವಾದ ನಲವತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿ ಗಂಡುಗಲಿ ಅಂತಲೇ ಹೆಸರಾಗಿರುವವರು ಕೆ ಮಂಜು. ಅವರ ಪುತ್ರ ಶ್ರೇಯಸ್‌ರನ್ನು ಅದ್ದೂರಿಯಾಗಿಯೇ ಲಾಂಚ್ ಮಾಡುವ ಜವಾಬ್ದಾರಿ ಹೊತ್ತಿರುವ ಗುರು ದೇಶಪಾಂಡೆ ಪ್ರತಿಯೊಂದರಲ್ಲಿಯೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಗೆಲ್ಲುತ್ತಾ ಸಾಗಿದ್ದಾರೆ.

Image result for padde huli

Related image

 

Leave a Reply

Your email address will not be published. Required fields are marked *


CAPTCHA Image
Reload Image